How To Make Aloo Palak Recipe: ಪಾಲಕ್ ಎಲೆಗಳ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಆಲುಗಡ್ಡೆಯಿಂದಲೂ ಹಲವು ಲಾಭಗಳು ದೊರೆಯುತ್ತದೆ. ಇವೆರಡನ್ನೂ ಬೆರೆಸಿ ತಯಾರಿಸುವ ಹೊಸ ರೆಸಿಪಿಯೊಂದಿಗೆ ಇದೀಗ ನಾವು ನಿಮ್ಮ ಮುಂದೆ ಬಂದಿದ್ದೇವೆ. ಅದುವೇ ಢಾಬಾ ಸ್ಟೈಲ್ನ 'ಆಲೂ ಪಾಲಕ್ ಕರಿ'. ಇದನ್ನು ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಹೆಚ್ಚಿನ ಪದಾರ್ಥಗಳು ಅಗತ್ಯವಿಲ್ಲ. ಆದರೆ, ರುಚಿ ಅದ್ಭುತವಾಗಿರುತ್ತದೆ. ಮತ್ತೇಕೆ ತಡವಾಗಿದೆ? ಬಾಯಲ್ಲಿ ನೀರು ತರಿಸುವ ಆಲೂ ಪಾಲಕ್ ಕರಿ ತಯಾರಿಸುವುದು ಹೇಗೆ ಎಂದು ನೋಡೋಣ.
ಬೇಕಾಗುವ ಪದಾರ್ಥಗಳೇನು?:
- ಪಾಲಕ್ - 200 ಗ್ರಾಂ
- ಕರಿಮೆಣಸು - 4
- ಅಗತ್ಯಕ್ಕೆ ತಕ್ಕಷ್ಟು ಅಡುಗೆ ತೈಲ
- ಜೀರಿಗೆ - ಒಂದು ಚಮಚ
- ಈರುಳ್ಳಿ- 1
- ರುಚಿಗೆ ತಕ್ಕಷ್ಟು ಉಪ್ಪು
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
- ಆಲೂಗಡ್ಡೆ - ಪಾವ್ ಕೆಜಿ
- ಬೆಳ್ಳುಳ್ಳಿ ಎಸಳು- 5
- ಕಾಳು ಮೆಣಸು- 3
- ಮೆಣಸಿನಕಾಯಿ ಪುಡಿ - ಒಂದು ಚಮಚ
- ಧನಿಯಾ ಪುಡಿ - ಒಂದು ಚಮಚ
- ಜೀರಿಗೆ ಪುಡಿ - ಒಂದು ಚಮಚ
- ತುಪ್ಪ - 2 ಚಮಚ
ತಯಾರಿಸುವ ವಿಧಾನ ಹೀಗಿದೆ ನೋಡಿ:
- ಮೊದಲು ಪಾಲಕ್ ಎಲೆಗಳನ್ನು ಕತ್ತರಿಸಿ ಎರಡು ಅಥವಾ ಮೂರು ಬಾರಿ ನೀರಿನಲ್ಲಿ ತೊಳೆದು ಪಕ್ಕಕ್ಕೆ ಇರಿಸಿ.
- ನಂತರ ಆಲೂಗಡ್ಡೆಯನ್ನು ಇನ್ನೊಂದು ಪಾತ್ರೆಯಲ್ಲಿ ಬೇಯಿಸಿ. ಅವುಗಳ ಮೇಲಿನ ಸಿಪ್ಪೆಯನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
- ಈಗ ಬಾಣಲೆಯಲ್ಲಿ ನೀರನ್ನು ಸುರಿಯಿರಿ ಮತ್ತು ಬಿಸಿ ಮಾಡಿ. ನಂತರ ಪಾಲಕ್ ಎಲೆಗಳನ್ನು ಸೇರಿಸಿ ಮತ್ತು 4 ನಿಮಿಷ ಬೇಯಿಸಿ.
- ಅದರ ನಂತರ, ಜರಡಿಯ ಸಹಾಯದಿಂದ ಬಿಸಿ ನೀರಿನಿಂದ ಪಾಲಕ್ ಎಲೆಗಳನ್ನು ತೆಗೆದುಕೊಂಡು ತಣ್ಣನೆಯ ನೀರಿನಲ್ಲಿ ಹಾಕಿ.
- ಪಾಲಕ್ ಅನ್ನು ಬೇಯಿಸಿದ ನಂತರ, ತಂಪಾದ ನೀರಿನಲ್ಲಿ ಇಟ್ಟರೆ, ಖಾದ್ಯಕ್ಕೆ ಬಳಸಿದರೂ ಕೂಡ ಬಣ್ಣ ಮಾತ್ರ ಬದಲಾಗುವುದಿಲ್ಲ.
- ಪಾಲಕ್ ಬೇಯಿಸಿದ ನೀರನ್ನು ಮರುಬಳಕೆ ಮಾಡಬೇಡಿ.
- ಪಾಲಕ್ ಎಲೆಗಳನ್ನು ಮಿಸ್ಕರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ ಮತ್ತು ಸ್ವಲ್ಪ ನೀರು ಬೆರೆಸಿ ಮೃದುವಾದ ಪೇಸ್ಟ್ ಮಾಡಿ.
- ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕರಿಮೆಣಸು, ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಕತ್ತರಿಸಿದ ಈರುಳ್ಳಿ ತುಂಡುಗಳನ್ನು ಹಾಕಿ ಹುರಿಯಿರಿ.
- ಈರುಳ್ಳಿ ಬಣ್ಣ ಬದಲಾದ ನಂತರ ಹಸಿ ಮೆಣಸಿನಕಾಯಿ ತುಂಡುಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ.
- ಈಗ ಕಾಳು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಮಿಶ್ರಣ ಮಾಡಿ.
- ನಂತರ ಪಕ್ಕಕ್ಕೆ ಇಟ್ಟಿರುವ ಪಾಲಾಕ್ ಅನ್ನು ಹಾಕಿ ಮುಚ್ಚಿ ಬೇಯಿಸಿ. ಮೇಲೆ ಎಣ್ಣೆ ಕಾಣಿಸಿಕೊಳ್ಳುವವರೆಗೆ ಬೇಯಿಸಿ.
- ಅದರ ನಂತರ ಆಲೂಗಡ್ಡೆ ತುಂಡುಗಳನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
- ಆ ನಂತರ ಸ್ಟವ್ ಆಫ್ ಮಾಡುವ ಮುನ್ನ ತುಪ್ಪ ಹಾಕಿದರೆ ಸಾಕು.
- ತುಂಬಾ ರುಚಿಕರವಾದ ಢಾಬಾ ಸ್ಟೈಲ್ನ ಆಲೂ ಪಾಲಕ್ ಕರಿ ನಿಮ್ಮ ಮುಂದೆ ಸವಿಯಲು ಸಿದ್ಧವಾಗುತ್ತದೆ.
- ನೀವೂ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಈ ಖಾದ್ಯವು ಮಕ್ಕಳಿಂದ ದೊಡ್ಡವರಿಂದ ಇಷ್ಟವಾಗುತ್ತದೆ.