ETV Bharat / health

ಧೂಮಪಾನದಿಂದ ಹೆಚ್ಚುತ್ತದೆ ಕಿಬ್ಬೊಟ್ಟೆ ಕೊಬ್ಬಿನ ಅಪಾಯ: ಈ ಬಗ್ಗೆ ತಜ್ಞರು ಹೇಳುವುದೇನು? - Smoking leads belly fat

ಧೂಮಪಾನಿಗಳು ಸಾಮಾನ್ಯವಾಗಿ ಸೂಕ್ಷ್ಮ ಪೌಷ್ಟಿಕಾಂಶದ ಕೊರತೆ ಹೊಂದಿರುತ್ತಾರೆ. ಇದು ಉರಿಯೂತ, ಕಿಬೊಟ್ಟೆ ಸುತ್ತ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ.

author img

By ETV Bharat Karnataka Team

Published : Mar 23, 2024, 5:39 PM IST

a-lean-smoker-is-a-thing-of-the-past-new-study-says-smoking-increases-belly-fat

ಹೈದರಾಬಾದ್​: ಧೂಮಪಾನೇತರರಿಗೆ ಹೋಲಿಕೆ ಮಾಡಿದರೆ, ಧೂಮಪಾನಿಗಳು ದಪ್ಪ ಇರುವುದಿಲ್ಲ ಎಂಬ ನಂಬಿಕೆ ಹೊಂದಿರುತ್ತೇವೆ. ಆದರೆ, ಇದು ತಪ್ಪು. ಧೂಮಾಪಾನದ ಆರಂಭ ಮತ್ತು ಆಜೀವ ಧೂಮಪಾನಿಗಳಲ್ಲಿ ಕಿಬೊಟ್ಟೆಯ ಕೊಬ್ಬು ಅಥವಾ ಒಳಾಂಗದ ಕೊಬ್ಬನ್ನು ಇದು ಹೆಚ್ಚಿಸುತ್ತದೆ ಎಂದು ಜರ್ನಲ್​ ಅಡಿಕ್ಷನ್​ ಎಂಬ ಅಧ್ಯಯನ ತಿಳಿಸಿದೆ. ಈ ಕೊಬ್ಬು ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಕೆಲವು ಅಧ್ಯಯನಗಳು ಡೆಮನ್ಶಿಯಾಗೂ ಕಾರಣವಾಗಬಹುದು ಎಂದು ತಿಳಿಸಿದೆ.

ಧೂಮಪಾನ ಮತ್ತು ಕಿಬೊಟ್ಟೆ ಕೊಬ್ಬು: ಅನೇಕ ಅಧ್ಯಯನಗಳು ತೋರಿಸುವಂತೆ, ಅನೇಕ ಮಂದಿ ಧೂಮಪಾನ ತ್ಯಜಿಸಲು ಕಾರಣ ತೂಕ ಹೆಚ್ಚಳವಾಗಿದೆ. ಆದಾಗ್ಯೂ ಅಧ್ಯಯನವೂ ತೋರಿಸುವಂತೆ ನಿರಂತರ ಧೂಮಪಾನ ತೂಕ ಹೆಚ್ಚಳ ಮತ್ತು ಕಿಬೊಟ್ಟೆ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ.

ಧೂಮಪಾನಿಗಳಲ್ಲಿ ಹಸಿವು ಕಡಿಮೆ ಇರುತ್ತದೆ. ಇದರಿಂದ ತೂಕ ನಷ್ಟ ಉಂಟಾಗಬಹುದು ಎಂಬ ಸಂಬಂಧವನ್ನು ಸಾಮಾನ್ಯವಾಗಿ ನೋಡುವುದು ಕಷ್ಟವಾಗುತ್ತದೆ. ಭಾರತದ ಪ್ರಮುಖ ನ್ಯೂಟ್ರಿಷಿಯನ್​ಗಳಲ್ಲಿ ಒಬ್ಬರಾದ ಇಷಿ ಖೋಸ್ಲಾ ಈ ಕುರಿತು ಮಾತನಾಡಿದ್ದು, ಧೂಮಪಾನಿಗಳಲ್ಲಿ ಸೂಕ್ಷ್ಮ ಪೋಷಕಾಂಶದ ಕೊರತೆಯು ಅವರಲ್ಲಿ ಕಿಬೊಟ್ಟೆ ಕೊಬ್ಬಿನ ಹೆಚ್ಚಳಕ್ಕೆ ಕಾರಣವಾಗಲಿದೆ.

ಧೂಮಪಾನಿಗಳು ಸಾಮಾನ್ಯವಾಗಿ ಸೂಕ್ಷ್ಮ ಪೌಷ್ಟಿಕಾಂಶದ ಕೊರತೆ ಹೊಂದಿರುತ್ತಾರೆ. ಇದು ಉರಿಯೂತ, ಕಿಬೊಟ್ಟೆ ಸುತ್ತ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುವ ಮೆಟಾಬಾಲಿಕ್​ ಸಿಂಡ್ರೋಮ್​ ಉಂಟು ಮಾಡುತ್ತದೆ ಎನ್ನುತ್ತಾರೆ ಅವರು.​​​ ಕಿಬ್ಬೊಟ್ಟೆಯ ಕೊಬ್ಬಿನ ಸಂಗ್ರಹದಿಂದ ಯಕೃತ್ತು ಮತ್ತು ಇತರ ಅಂಗಾಂಗಳಂತಹ ಆರೋಗ್ಯಕರ ಅಂಗಾಂಶಗಳು ನಾಶವಾಗುತ್ತಿವೆ.

ತಜ್ಞರು ಹೇಳುವಂತೆ, ಇದು ರಕ್ತದ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕೂಡ ಹೆಚ್ಚಿಸುತ್ತದೆ. ಧೂಮಪಾನವೂ ಎಲ್​ಡಿಎಲ್​ ಕೊಲೆಸ್ಟ್ರಾಲ್​ ಮಟ್ಟ ಅಂದರೆ ಕೆಟ್ಟ ಕೊಲೆಸ್ಟಾಲ್​ ಹೆಚ್ಚಿಸುತ್ತದೆ. ಒಳ್ಳೆ ಕೊಲೆಸ್ಟ್ರಾಲ್​ ಆದ ಎಚ್​ಡಿಲ್​ ಕೊಲೆಸ್ಟ್ರಾಲ್​ ಮಟ್ಟ ಕಡಿಮೆ ಮಾಡುತ್ತದೆ. ಒಳಾಂಗದ ಕೊಬ್ಬು ನೇರವಾಗಿ ಎಲ್​ಡಿಎಲ್​ ಕೊಲೆಸ್ಟ್ರಾಲ್​, ಕಡಿಮೆ ಎಚ್​ಡಿಎಲ್​, ಇನ್ಸುಲಿನ್​ ಪ್ರತಿರೋಧಕತೆ ಮತ್ತು ಮೆಟಾಬಾಲಿಕ್​ ಸಿಂಡ್ರೋಮ್​ನೊಂದಿಗೆ ಸಂಬಂಧ ಹೊಂದಿದೆ.

ಧೂಮಪಾನ ತ್ಯಜಿಸುವುದರಿಂದಲೂ ಆರಂಭದಲ್ಲಿ ತೂಕ ಹೆಚ್ಚಳ ಕಾಣಬಹುದು. ಇದನ್ನು ನಿರ್ವಹಣೆ ಮಾಡಬಹುದಾಗಿದೆ. ಆದರೆ, ಈ ಕಿಬ್ಬೊಟ್ಟೆ ಕೊಬ್ಬು ಗಂಭೀರ ರೋಗದ ಪರಿಸ್ಥಿತಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಜೀನ್​ಗಳ ಪಾತ್ರ ಇದೆಯೇ?: ಅಧ್ಯಯನದ ಪ್ರಾಥಮಿಕ ಗುರಿ ಅನೇಕ ಆನುವಂಶಿಕ ಸಾಧನ ಬಳಸಿಕೊಂಡು ಧೂಮಪಾನ ಮತ್ತು ಕಿಬ್ಬೊಟ್ಟೆಯ ಸ್ಥೂಲಕಾಯತೆ ನಡುವಣ ಕಾರಣ ಅಂದಾಜು ಮಾಡುವುದು. ಅಧ್ಯಯನವು ಮೆಂಡೆಲಿಯನ್ ರ್ಯಾಂಡಮೈಸೆಷನ್​​ ಎಂಬ ವಿಧಾನವನ್ನು ಆಧರಿಸಿದೆ.

ಫಲಿತಾಂಶವೂ ಆರಂಭದಲ್ಲಿನ ಧೂಮಪಾನದ ಪರಿಣಾಮದ ಕಾರಣ ತೋರಿಸಿದೆ. ಜೊತೆಗೆ ಜೀವನಪರ್ಯಂತ ಧೂಮಪಾನದ ಸೊಂಟದ ಸುತ್ತಳತೆ ದರ ತಿಳಿಸಿದೆ. ಅಧ್ಯಯನದ ಫಾಲೋ ಅಪ್​​ನಲ್ಲಿ ಧೂಮಪಾನವೂ ಒಳಾಂಗದ ಕೊಬ್ಬಿಗೆ ಕಾರಣವಾಗುತ್ತದೆ ಎಂದು ತೋರಿಸಿದೆ. ಧೂಮಾಪಾನದ ಪರಿಣಾಮವೂ ಸಾಮಾಜಿಕ ಆರ್ಥಿಕ ಸ್ಥಿತಿ, ಶಿಕ್ಷಣ, ಕುಡಿತ, ಗಮನ - ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಮತ್ತು ಅಪಾಯಕಾರಿ ನಡವಳಿಕೆಗಳಿಂದ ಸ್ವತಂತ್ರವಾಗಿರುತ್ತವೆ. ಅಲ್ಲದೇ ದಿನಕ್ಕೆ ಒಂದು ಸಿಗರೇಟ್​ ಸೇದುವುದು ಕೂಡ ಕಿಬ್ಬೊಟ್ಟೆ ಮೇಲೆ ಪರಿಣಾಮ ಬೀರುವುದಿಲ್ಲ.

ಕೂಪನ್​ಹೇಗನ್​ ಯುನಿವರ್ಸಿಟಿಯ ನ್​ಎನ್​ಎಫ್​ ಸೆಂಟರ್​ ಫಾರ್​​ ಬೇಸಿಕ್​ ಮೆಟಾಬಾಲಿಕ್​ ರಿಸರ್ಚ್​ನ ಸಂಶೋಧಕರು ಇದಕ್ಕಾಗಿ ಎರಡು ಯುರೋಪಿಯನ್​ ಪೂರ್ವಜರ ಅಧ್ಯಯನವನ್ನು ಬಳಕೆ ಮಾಡಿದ್ದಾರೆ. ಜೀವಿತಾವಧಿಯಲ್ಲಿ ಧೂಮಪಾನ ಮಾಡುವ 450,000 ಕ್ಕಿಂತ ಹೆಚ್ಚು ಜನರ ಡೇಟಾಗಳನ್ನ ಬಳಸಿ ಈ ಅಧ್ಯಯನ ನಡೆಸಲಾಗಿದೆ.

ಫಲಿತಾಂಶ: ಧೂಮಪಾನದಿಂದ ಯಾವುದೇ ಪ್ರಯೋಜನವಿಲ್ಲ. ಸಿಗರೇಟ್​ ಧೂಮಪಾನದಿಂದ ತೆಳ್ಳಗೆ ಆಗುತ್ತಾರೆ ಎಂಬುದು ಸುಳ್ಳು. ಈ ಹಿನ್ನೆಲೆ ಧೂಮಪಾನ ತ್ಯಜಿಸಿದ ಬಳಿಕ ತೂಕ ಹೆಚ್ಚಳವಾದರೆ ಚಿಂತೆ ಬೇಡ. ಇದು ಕಡಿಮೆ ಅವಧಿಯ ತೂಕ ಹೆಚ್ಚಳವಾಗಿರುತ್ತದೆ. ಸಿಗರೇಟ್​ನಲ್ಲಿರುವ ನಿಕೋಟಿನ್​ ಹಸಿವೆ ಹತ್ತಿಕ್ಕುತ್ತದೆ. ನಿಕೋಟಿನ್​ನಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಧೂಮಪಾನ ತ್ಯಜಿಸಿದ ಬಳಿಕ ಹೆಚ್ಚು ತಿನ್ನಲು ಇದು ಕಾರಣವಾಗುತ್ತದೆ. ತಜ್ಞರು ನಂಬಿರುವಂತೆ, ಸಿಗರೇಟ್​ ಚಟವನ್ನು ಜನರು ತಮ್ಮಿಷ್ಟ ಆಹಾರ ಸೇವನೆಗೆ ಬದಲಾಯಿಸಬಹುದು. ಇದರಿಂದ ಜನರು ಸಾಮಾನ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿ, ತೂಕ ಹೆಚ್ಚಳವಾಗುತ್ತದೆ.

ಅಧಿಕ ಕ್ಯಾಲೋರಿಯೊಂದಿಗಿನ ಆರೋಗ್ಯಯುತ ಜೀವನಶೈಲಿ , ಸಮತೋಲಿತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ ಅಳವಡಿಸಿಕೊಳ್ಳುವುದರಿಂದಲೂ ಈ ಚಟದಿಂದ ಹೊರ ಬರಬಹುದು. ಒತ್ತಡ ನಿರ್ವಹಣೆಗೆ ಉತ್ತಮ ಗಂಟೆಗಳ ನಿದ್ರೆಗಳು ಅಗತ್ಯುವಾಗುತ್ತದೆ

ಅಧ್ಯಯನ ಏನು ಹೇಳುತ್ತದೆ?: ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೀರ್ಘಕಾಲದ ಅನಾರೋಗ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಧೂಮಪಾನ ತ್ಯಜಿಸುವುದು ಒಳ್ಳೆಯದು ಎಂದು ನಂಬಲಾಗಿದೆ. ಇದರ ಜೊತೆಗೆ ಇದೀಗ ಇರುವ ಮತ್ತೊಂದು ಪ್ರಯೋಜನ ಎಂದರೆ ಕಿಬ್ಬೊಟ್ಟೆ ಕೊಬ್ಬುನ್ನು ನಷ್ಟ ಮಾಡಬಹುದು. ಧೂಮಪಾನಿಗಳು ಸಣ್ಣ ದೇಹವನ್ನು ಹೊಂದಿದ್ದರೂ, ಧೂಮಪಾನೇತರರಿಗೆ ಹೋಲಿಕೆ ಮಾಡಿದರೆ ಅವರಲ್ಲಿ ಕಾರ್ಡಿಯೋಮೆಟಾಬಲಿಕ್​ ಅಪಾಯ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಧೂಮಪಾನದಿಂದ ದೂರಾಗುವುದು ಅಗತ್ಯವಾಗಿದ್ದು, ಆರೋಗ್ಯಯುವ ಜೀವನ ಶೈಲಿ ನಿರ್ವಹಣೆಯೊಂದಿಗೆ ಸಂಬಂಧ ಹೊಂದಿದೆ.

ಇದನ್ನೂ ಓದಿ: ಶೇ 80ರಷ್ಟು ಉದ್ಯೋಗಿಗಳ ಬಳಲಿಕೆಗೆ ಕಾರಣವಾಗುವ ಆಫೀಸ್​​​ ಮೀಟಿಂಗ್​​ಗಳು: ಅಧ್ಯಯನ ಏನ್​ ಹೇಳುತ್ತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.