ETV Bharat / health

ಮಕ್ಕಳು ಹೆಚ್ಚು ಓದುವುದೂ ಕೂಡಾ ಸಮಸ್ಯೆಯೇ: ದಕ್ಷಿಣ ಕೊರಿಯಾದಲ್ಲಿ ಏನಾಗ್ತಿದೆ? ಪೋಷಕರು ತಿಳಿದುಕೊಳ್ಳಿ - South Korea School Children - SOUTH KOREA SCHOOL CHILDREN

ದಕ್ಷಿಣ ಕೊರಿಯಾ ದೇಶದಲ್ಲಿ ಮಕ್ಕಳು ಅತಿ ಹೆಚ್ಚು ಸಮಯವನ್ನು ಓದಿನಲ್ಲೇ ಕಳೆಯುವುದರಿಂದ ನಿದ್ರಾ ಸಮಸ್ಯೆ ಸೇರಿದಂತೆ ಹಲವು ಅನಾರೋಗ್ಯ ಬಾಧೆಗಳಿಂದ ಬಳಲುತ್ತಿದ್ದಾರೆ. ಈ ವಿದ್ಯಮಾನ ಅಲ್ಲಿನ ಶಿಕ್ಷಣ ತಜ್ಞರು, ಪೋಷಕರಲ್ಲಿ ಕಳವಳ ಉಂಟುಮಾಡಿದೆ.

South Korean school children spend more hours studying than recommended

author img

By ETV Bharat Karnataka Team

Published : May 2, 2024, 4:22 PM IST

ಸಿಯೋಲ್(ದಕ್ಷಿಣ ಕೊರಿಯಾ)​: ನಮ್ಮ ಮಕ್ಕಳು ಚೆನ್ನಾಗಿ ಓದುವುದಿಲ್ಲ ಎಂಬ ದೂರು ಸಾಮಾನ್ಯವಾಗಿ ಪೋಷಕರಿಂದ ಕೇಳಿಬರುತ್ತದೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಪರಿಸ್ಥಿತಿ ವಿಭಿನ್ನ. ಈ ದೇಶದಲ್ಲಿ ಮಕ್ಕಳು ಹೆಚ್ಚು ಓದುತ್ತಿರುವುದೇ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಈ ಸಂಗತಿ ಅಚ್ಚರಿಯಾದರೂ ಹೌದು. ದಕ್ಷಿಣ ಕೊರಿಯಾದ ಶಾಲೆಗಳಲ್ಲಿ ಪ್ರತಿ 10ರ ಪೈಕಿ 6 ಮಕ್ಕಳು ತಮಗೆ ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಓದಿನಲ್ಲೇ ಕಳೆಯುತ್ತಿದ್ದಾರಂತೆ. ಇದರಿಂದೇನು ತೊಂದರೆ ಅಂದ್ರಾ? ಮುಂದೆ ಓದಿ.

ಕೊರಿಯಾದ ಚಿಲ್ಡ್ರನ್ ವೆಲ್​ಫೇರ್​​ ಫೌಂಡೇಷನ್​ ಎಂಬ ಸಂಸ್ಥೆ ಒಂದು ಸಮೀಕ್ಷೆ ನಡೆಸಿದೆ. ಚೈಲ್ಡ್​​ಫಂಡ್​ ಕೊರಿಯಾದಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ. ಈ ಅಧ್ಯಯನಕ್ಕಾಗಿ ಡಿಸೆಂಬರ್ ತಿಂಗಳಲ್ಲಿ​ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಹಂತದವರೆಗೆ 10,140 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಶೇ.65.1ರಷ್ಟು ಮಕ್ಕಳು ಓದಿಗಾಗಿ ತಮಗೆ ಸೂಚಿರುವುದಕ್ಕಿಂತ ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಶೇ.13ರಷ್ಟು ಮಧ್ಯಮ ಮತ್ತು ಹೈಸ್ಕೂಲ್​ ಮಕ್ಕಳು ಅತಿ ಹೆಚ್ಚು ಎನ್ನುವಂತೆ ಓದಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಗೊತ್ತಾಗಿದೆ.

ಸಮೀಕ್ಷೆ ತೋರಿಸುವಂತೆ, ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಎರಡು ಗಂಟೆ 17 ನಿಮಿಷ ಓದುತ್ತಿದ್ದರೆ, ಹಿರಿಯ ಪ್ರಾಥಮಿಕ ಶಾಲೆಯ​ ಮಕ್ಕಳು 2 ಗಂಟೆ 47 ನಿಮಿಷ ಓದಿನಲ್ಲಿ ಮಗ್ನರಾಗುತ್ತಾರೆ. ಮಧ್ಯಮ ಮತ್ತು ಹೈಸ್ಕೂಲ್​ ಶಾಲೆಗಳ ಮಕ್ಕಳು ಕ್ರಮವಾಗಿ ಮೂರು ಗಂಟೆ 12 ನಿಮಿಷ ಮತ್ತು ಮೂರು ಗಂಟೆ 22 ನಿಮಿಷ ಓದಿನಲ್ಲಿ ನಿರತರಾಗಿದ್ದಾರೆ. ಮಕ್ಕಳ ಈ ರೀತಿಯ ಅಧಿಕ ಓದಿನಿಂದಾಗಿ ಶಿಫಾರಸು ಮಾಡಿರುವ ನಿದ್ರಾ ಅವಧಿಗಿಂತ ಶೇ.18.8ರಷ್ಟು ಮಕ್ಕಳು ಕಡಿಮೆ ಅವಧಿಯಲ್ಲಿ ನಿದ್ರೆ ಮಾಡಿರುವುದು ಕಂಡುಬಂದಿದೆ.

ಪ್ರಾಥಮಿಕ ಶಾಲಾ ಮಕ್ಕಳು ಸರಿಸುಮಾರು 9 ಗಂಟೆ ನಿದ್ರಿಸಿದರೆ, ಮಾಧ್ಯಮಿಕ ಶಾಲಾ ಮಕ್ಕಳು 7 ಗಂಟೆ 51 ನಿಮಿಷ ಮತ್ತು ಹೈಸ್ಕೂಲ್​ ಮಕ್ಕಳು ಆರು ಗಂಟೆ 32 ನಿಮಿಷ ನಿದ್ರಿಸುವುದು ತಿಳಿದುಬಂದಿದೆ. ಓದಿನ ಹೊರತಾಗಿ ಶೇ.60ರಷ್ಟು ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ಬದಲಾಗಿ ಸ್ಮಾರ್ಟ್​​ಫೋನ್‌ಗಳಲ್ಲಿ ವೀಡಿಯೊ ಬಳಸುವುದು ಬೆಳಕಿಗೆ ಬಂದಿದೆ. ಶೇ.13ರಷ್ಟು ಮಕ್ಕಳು ನಿದ್ರಾಹೀನತೆ ಕೊರತೆ ಅನುಭವಿಸಿದರೆ, ಬಹುತೇಕ ಮಕ್ಕಳು ರಾತ್ರಿ ಸಮಯದಲ್ಲಿ ಸ್ಮಾರ್ಟ್​ಫೋನ್​ ಬಳಕೆ, ಶಬ್ಧ ಅಥವಾ ಇತರೆ ಪರಿಸರದ ಕಾರಣದಿಂದಾಗಿ ನಿದ್ರಾ ಸಮಸ್ಯೆ ತೊಡಕು ಹೊಂದಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಮಕ್ಕಳ ನಿದ್ರಾ ಅವಧಿ ಮತ್ತು ಓದಿನ ಸಮಯ ಕಡಿಮೆ ಮಾಡಿ, ಮಕ್ಕಳು ಸಮತೋಲಿಕ ಜೀವನಶೈಲಿ ಕಾಯ್ದುಕೊಳ್ಳಲು ರಾಷ್ಟ್ರೀಯ ಮಾರ್ಗಸೂಚಿ ರೂಪಿಸಬೇಕು ಎಂದು ಸಂಸ್ಥೆ ಸರ್ಕಾರವನ್ನು ಒತ್ತಾಯಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳನ್ನು ಕಾಡುವ ನಿದ್ರಾ ಕೊರತೆ ಸಮಸ್ಯೆ; ಇದಕ್ಕೆ ಕಾರಣಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.