ETV Bharat / health

ಪಾಕಿಸ್ತಾನದಲ್ಲಿ ಪತ್ತೆಯಾಯ್ತು 5ನೇ ಪೋಲಿಯೊ ಪ್ರಕರಣ; ಲಸಿಕಾ ಕಾರ್ಯಕರ್ತರ ಮೇಲೆ ಭಯೋತ್ಪಾದಕರ ದಾಳಿ - 5th polio case detected in pakistan

ದೇಶದಲ್ಲಿ ಪೋಲಿಯೊ ಪ್ರಕರಣಗಳನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಲಸಿಕಾಕರಣಕ್ಕೆ ಮುಂದಾಗಿದ್ದ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

5th polio case detected in pakistan separate incident terrorist attack on polio team
ಪೋಲಿಯೊ ಲಸಿಕೀಕರಣ (ಐಎಎನ್​ಎಸ್​)
author img

By IANS

Published : Jun 10, 2024, 10:14 AM IST

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಐದನೇ ಪೋಲಿಯೊ ಪ್ರಕರಣ ಪತ್ತೆಯಾಗಿದೆ. ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ನಗರದಲ್ಲಿ ಪೋಲಿಯೊ ಪೀಡಿತ ಮಗು ಪಾರ್ಶ್ವವಾಯುಗೆ ತುತ್ತಾಗಿ ಸಾವನ್ನಪ್ಪಿದೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ. 2 ವರ್ಷದ ಮಗುವಿನ ಎರಡು ಕಾಲುಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದೆ. ಬಳಿಕ ಮಗುವಿನ ತೋಳುಗಳು ಕೂಡ ದುರ್ಬಲಗೊಂಡು ಕ್ರಮೇಣ ಮಗು ಅನಾರೋಗ್ಯಕ್ಕೆ ಒಳಗಾಗಿದೆ. ಬಳಿಕ ವಾರದ ನಂತರ ಕರಾಚಿಯ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಗು, ಅದರ ಜೊತೆ ಮನೆಯಲ್ಲಿ ವಾಸ ಮಾಡುತ್ತಿದ್ದ ಆತನ ಸಹೋದರ ಮತ್ತು ಸಹೋದರ ಸಂಬಂಧಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಮಗುವಿನಲ್ಲಿ ಪೋಲಿಯೊ ವೈರಸ್​ ಟೈಪ್​ 1 ಇರುವುದು ದೃಢಪಟ್ಟಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಗುವಿನಿಂದ ಸಂಗ್ರಹಿಸಿದ ಮಾದರಿಯನ್ನು ಪ್ರತ್ಯೇಕಿಸಲಾಗಿದ್ದು, ಅದನ್ನು ಡಬ್ಲೂಪಿವಿ1ನಿಂದ ಪಡೆಯಲಾದ ವೈಬಿ3ಎ ಕ್ಲಸ್ಟರ್​​ಗೆ ಸೇರಿಸಲಾಗಿದೆ.

ಸರ್ಕಾರ ಪೋಲಿಯೊ ಲಸಿಕೆಗೆ ಪ್ರೋತ್ಸಾಹ ನೀಡುವ ಮೂಲಕ ವೈರಸ್​ ಕೊನೆಗಣಿಸುವ ಪ್ರಯತ್ನದತ್ತ ಗುರಿ ನೆಟ್ಟಿದೆ. ಲಸಿಕೆ ದರ ಹೆಚ್ಚಿಸುವ ಮೂಲಕ ಕೇಂದ್ರೀಕರಿಸುತ್ತಿದೆ. ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುವ ಕಾರ್ಯ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಬಲೂಚಿಸ್ತಾನದಲ್ಲಿ 50ಕ್ಕೂ ಹೆಚ್ಚು ಪರಿಸರ ಮಾದರಿ ಪೋಲಿಯೊ ವೈರಸ್ ಪತ್ತೆಯಾಗಿದ್ದು,​​ ಪರೀಕ್ಷೆಗಳಲ್ಲಿ ಪಾಸಿಟಿವ್​ ಬಂದಿದೆ. ಕ್ವೆಟ್ಟಾ ಸ್ಥಳದಲ್ಲೇ 21 ವೈರಸ್​ಗಳು ಪತ್ತೆಯಾಗಿದೆ. 2024ರಲ್ಲಿ ಬಲೂಚಿಸ್ತಾನದಲ್ಲಿ ಒಂದು ಮತ್ತು ಸಿಂಧ್​ ಪ್ರದೇಶದಲ್ಲಿ ಒಂದು ವೈರಸ್​ ದೃಢಪಟ್ಟಿತು.

ಪೋಲಿಯೊ ಕಾರ್ಯಕರ್ತರ ಮೇಲೆ ಭಯೋತ್ಪಾದಕ ದಾಳಿ: ದೇಶದಲ್ಲಿ ಪೋಲಿಯೊ ಪ್ರಕರಣಗಳನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಲಸಿಕಾಕರಣಕ್ಕೆ ಮುಂದಾಗಿದ್ದ ಕಾರ್ಯಕರ್ತರು, ಪೊಲೀಸರ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ಲಸಿಕೆ ತಂಡದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್​ ಅಧಿಕಾರಿಗಳ ಪ್ರಕಾರ, ಪ್ರಾಂತ್ಯದ ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕುಲಾಚಿ ಪ್ರದೇಶದಲ್ಲಿ ಲಸಿಕಾಕರಣಕ್ಕೆ ಮುಂದಾದ ಅಪರಿಚಿತ ದಾಳಿಕೋರರ ಗುಂಪು ಪೋಲಿಯೊ ತಂಡದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ಸುತ್ತಮುತ್ತಲ ಪ್ರದೇಶದಲ್ಲಿ ಕಾರ್ಯಾಚರಣೆಗೆ ನಡೆಸಲಾಗಿದೆ. ಘಟನೆ ಕುರಿತು ಯಾವುದೇ ಗುಂಪು ಹೊಣೆ ಹೊತ್ತಿಲ್ಲ.

ಪ್ರಾಂತ್ಯದಲ್ಲಿ ಐದು ದಿನಗಳ ಕಾಲದ ಪೋಲಿಯೊ ವಿರೋಧಿ ಅಭಿಯಾನವನ್ನು ಆರಂಭಿಸಲಾಗಿದ್ದು, ಐದು ವರ್ಷದೊಳಗಿನ 3.56 ಮಿಲಿಯನ್​ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. (ಐಎಎನ್ಎಸ್​)

ಇದನ್ನೂ ಓದಿ: ಪೋಲಿಯೋಮುಕ್ತ ಪಾಕಿಸ್ತಾನ ನಿರ್ಮಾಣಕ್ಕೆ ಅವಿರಹಿತ ಪ್ರಯತ್ನ: ಪ್ರಧಾನಿ ಶೆಹಬಾಜ್ ಷರೀಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.