ETV Bharat / entertainment

'ಯುವ' ಟ್ರೇಲರ್​ ರಿಲೀಸ್​: ಮೊದಲ ಚಿತ್ರವೇ ಪವರ್​ಫುಲ್​ ಅಂತಿದ್ದಾರೆ ಫ್ಯಾನ್ಸ್ - Yuva Trailer - YUVA TRAILER

ಬಹುನಿರೀಕ್ಷಿತ 'ಯುವ' ಸಿನಿಮಾದ ಟ್ರೇಲರ್ ಇಂದು ಅನಾವರಣಗೊಂಡಿದೆ.

Yuva trailer
ಯುವ ಟ್ರೇಲರ್
author img

By ETV Bharat Karnataka Team

Published : Mar 21, 2024, 2:24 PM IST

Updated : Mar 21, 2024, 2:31 PM IST

ಕನ್ನಡದ ವರನಟ ಡಾ.ರಾಜ್​​ಕುಮಾರ್​​​ ಅವರ ಮೊಮ್ಮಗ ಯುವ ರಾಜ್​​ಕುಮಾರ್ ಅವರು ತೆರೆ ಮೇಲೆ ರಾರಾಜಿಸಲು ಇನ್ನೊಂದೇ ವಾರ ಬಾಕಿ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಉದಯೋನ್ಮುಖ ನಟನ ಚೊಚ್ಚಲ ಚಿತ್ರದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಮೂಲಕ ರಾಜ್​​ಕುಮಾರ್ ಕುಟುಂಬದ ಕುಡಿ ತಮ್ಮ ಸಿನಿಪಯಣ ಪ್ರಾರಂಭಿಸಿದ್ದಾರೆ. ಮೊದಲ ಚಿತ್ರದಲ್ಲಿ ಲೋಕಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಪ್ರತೀ ದೃಶ್ಯವೂ ಸಖತ್​ ಪವರ್​ಫುಲ್ ಆಗಿದೆ​ ಅಂತಿದ್ದಾರೆ ಅಭಿಮಾನಿಗಳು. ಟ್ರೇಲರ್​ ಮೂಲಕ ಸಂತೋಷ್ ಆನಂದ್ ರಾಮ್‌ ನಿರ್ದೇಶನದ ಚಿತ್ರ ಗೆಲ್ಲುವ ಭರವಸೆ ಮೂಡಿಸಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: 25M ಇನ್‌ಸ್ಟಾಗ್ರಾಮ್ ಫಾಲೋವರ್ಸ್​ ಸಂಪಾದಿಸಿದ ದಕ್ಷಿಣ ಭಾರತದ ಮೊದಲ ನಟ ಇವರು! - Allu Arjun

ವಿಭಿನ್ನ ಪ್ರಚಾರದ ಮೂಲಕ 'ಯುವ' ಸಿನಿಪ್ರಿಯರ ಗಮನ ಸೆಳೆದಿದೆ. ಸಿನಿಮಾದ ಟೀಸರ್, ಹಾಡುಗಳು, ಪೋಸ್ಟರ್​ಗಳು ಅನಾವರಣಗೊಂಡು ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿವೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್‌, ರಾಜ್​​ಕುಮಾರ್ ಮೊಮ್ಮಗನ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿರೋ ಹಿನ್ನೆಲೆಯಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇದೆ. ಅಲ್ಲದೇ ಬಹುತೇಕ ಹಿಟ್​ ಸಿನಿಮಾಗಳನ್ನೇ ನೀಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ​ ನಿರ್ಮಾಣವಾಗಿರುವ ಕಾರಣಕ್ಕೂ ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋ ಕುತೂಹಲ ಪ್ರೇಕ್ಷಕರದ್ದು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ದೀಪಿಕಾ ಪಡುಕೋಣೆ: ಕೆಲಸದಿಂದ ವಿರಾಮ ಪಡೆಯಲಿರುವ ರಣ್​​ವೀರ್​ ಸಿಂಗ್ - Deepika Padukone

ಯುವ ರಾಜ್​​​​ಕುಮಾರ್​ಗೆ ಜೋಡಿಯಾಗಿ 'ಕಾಂತಾರ' ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಶ್ರೀಶು ಕುದವಳ್ಳಿ ಛಾಯಾಗ್ರಹಣವಿದೆ. ಮಾರ್ಚ್ 29ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

Last Updated : Mar 21, 2024, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.