ETV Bharat / entertainment

'ಯುವ' ಅಡ್ವಾನ್ಸ್ ಬುಕಿಂಗ್ ಶುರು: ರಾಜ್​ಕುಮಾರ್​ ಮೊಮ್ಮಗನ ಚೊಚ್ಚಲ ಚಿತ್ರ ಬಿಡುಗಡೆಗೆ ಇನ್ನೊಂದೆ ದಿನ ಬಾಕಿ - Yuva

author img

By ETV Bharat Karnataka Team

Published : Mar 27, 2024, 4:09 PM IST

ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ'ನ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದೆ.

Yuva advance bookings
ಯುವ ಮುಂಗಡ ಬುಕಿಂಗ್

'ಯುವ', ಈ ವರ್ಷದ ಬಹುನಿರೀಕ್ಷಿತ ಸ್ಯಾಂಡಲ್​ವುಡ್​​ ಸಿನಿಮಾಗಳಲ್ಲೊಂದು. ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ವೀಕ್ಷಿಸಲು ಸಿನಿಪ್ರಿಯರು ಕಾತುರರಾಗಿದ್ದಾರೆ.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ಗೆ ಸಿಕ್ಕ ಭರ್ಜರಿ ರೆಸ್ಪಾನ್ಸ್, ಟ್ರೇಲರ್​​, ಸಾಂಗ್ಸ್ ಸ್ವೀಕರಿಸಿರುವ ಸ್ಪಂದನೆ ನೋಡಿದ್ರೆ ಸಿನಿಮಾ ಗೆಲ್ಲೋದ್ರಲ್ಲಿ ಸಂದೇಹವೇ ಇಲ್ಲ ಅಂತಿದ್ದಾರೆ ಅಭಿಮಾನಿಗಳು. ರಾಘವೇಂದ್ರ ರಾಜ್​ಕುಮಾರ್ ಕಿರಿಮಗನ ಚೊಚ್ಚಲ ಚಿತ್ರವಾಗಿರೋ ಹಿನ್ನೆಲೆ ಭಾರಿ ಕುತೂಹಲ ಮೂಡಿದೆ.

ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಬಹು ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಚಿತ್ರತಂಡವಿನ್ನೂ ಚಿಂತನೆ ನಡೆಸಿಲ್ಲ. ಒಂದು ವೇಳೆ ಸಿನಿಮಾ ಡಬ್ ಮಾಡಿಕೊಡುವಂತೆ ಬೇರೆ ಭಾಷೆಗಳಿಂದ ಬೇಡಿಕೆ ಬಂದರೆ ಆ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯೂ ಇದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಹಾಗೂ ಡೆಲಿವರಿ ಬಾಯ್ ಆಗಿ ಎರಡು ಶೇಡ್‌ಗಳಲ್ಲಿ ಯುವ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಥಿಯೇಟರ್‌ಗಳ ಎದುರು ಯುವ ಕಟೌಟ್‌ಗಳು ರಾರಾಜಿಸುತ್ತಿವೆ. ಅದ್ಧೂರಿಯಾಗಿ ಅಣ್ಣಾವ್ರ ಮೊಮ್ಮಗನನ್ನು ಸ್ವಾಗತಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್​ ಕೂಡ ಇಂದು ಓಪನ್‌ ಆಗಿದೆ.

ಇದನ್ನೂ ಓದಿ: ತಿರುಪತಿಯಲ್ಲಿ ರಾಮ್ ಚರಣ್ ಮಗಳ ಫೇಸ್ ರಿವೀಲ್: ಫೋಟೋ - ವಿಡಿಯೋ ವೈರಲ್ - Ram Charan Daughter

ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಬುಕಿಂಗ್​ ಶುರುವಾಗಿದೆ. ಬೆಂಗಳೂರಿನ ಕೆ.ಜಿ ರಸ್ತೆಯ ಸಂತೋಷ್, ನವರಂಗ್, ಸಿದ್ದೇಶ್ವರ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಫ್ಯಾನ್ಸ್ ಶೋ, ಮಿಡ್‌ ನೈಟ್ ಶೋ ಇರುವುದಿಲ್ಲವೆಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ಬಳಿಕವೇ 'ಯುವ' ಸಿನಿಮಾ ಪ್ರದರ್ಶನಗಳು ಶುರುವಾಗಲಿವೆ. ಗುಡ್‌ಫ್ರೈಡೇ ಹಿನ್ನೆಲೆ ಶುಕ್ರವಾರವೇ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗುವ ಸಾಧ್ಯತೆಯಿದೆ. ಮತ್ತೊಂದೆಡೆ, ಐಪಿಎಲ್ ಕ್ರೇಜ್​​ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ.

ಇದನ್ನೂ ಓದಿ: 'ಹುಯ್ಯೋ ಹುಯ್ಯೋ ಮಳೆರಾಯ'ವೆಂದು ಹಾಡುತ್ತಾ ಬಂದ ಕಿರಣ್ ರಾಜ್ - Bharjari Gandu

ಆ್ಯಕ್ಷನ್ ಹೀರೋ ಆಗಿ ಯುವ ರಾಜ್‌ಕುಮಾರ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಸಾಥ್ ಕೊಟ್ಟಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಚಿತ್ರದ ಪ್ರಮುಖ ಭಾಗಗಳಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ. ಚಿತ್ರದ ಕಾಲಾವಧಿ 153 ನಿಮಿಷ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಇದೇ ಶುಕ್ರವಾರ, 29ಕ್ಕೆ ರಾಜ್ಯಾದ್ಯಂತ 'ಯುವ' ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.