ETV Bharat / entertainment

'ಟಾಕ್ಸಿಕ್'​​ ಸಿನಿಮಾದಲ್ಲಿ ಶಾರುಖ್​​ ಖಾನ್​​? 'ಅಧಿಕೃತ ಮಾಹಿತಿ ನಂಬಿ' ಎಂದು ಯಶ್ ಸಲಹೆ​​ - Toxic

'ಟಾಕ್ಸಿಕ್'​​ ಸಿನಿಮಾದಲ್ಲಿ ಶಾರುಖ್​​ ಖಾನ್ ಅತಿಥಿ ಪಾತ್ರ ವಹಿಸಲಿದ್ದಾರೆ ಎಂಬ ವದಂತಿಗಳನ್ನು ಉದ್ದೇಶಿಸಿ ರಾಕಿಂಗ್​​ ಸ್ಟಾರ್ ಯಶ್​ ಮಾತನಾಡಿದ್ದಾರೆ.

Yash Addresses Reports Of SRK Doing Cameo In Toxic
'ಟಾಕ್ಸಿಕ್'​​ ಸಿನಿಮಾದಲ್ಲಿ ಶಾರುಖ್​​ ಖಾನ್​​? ಅಧಿಕೃತ ಮಾಹಿತಿಗೆ ಒತ್ತು ಕೊಡಿ ಎಂದ ಯಶ್​​
author img

By ETV Bharat Karnataka Team

Published : Feb 16, 2024, 5:26 PM IST

ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಕಿಂಗ್​ ಸ್ಟಾರ್ ಯಶ್​ ಮುಖ್ಯಭೂಮಿಕೆಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 2023ರ ಡಿಸೆಂಬರ್‌ನಲ್ಲಿ ತಮ್ಮ ಮುಂಬರುವ ಗ್ಯಾಂಗ್‌ಸ್ಟರ್ ಆ್ಯಕ್ಷನ್ ಥ್ರಿಲ್ಲರ್ ''ಟಾಕ್ಸಿಕ್'' ಅನ್ನು ಅವರು ಘೋಷಿಸಿದ್ದರು. ಗೀತು ಮೋಹನ್‌ದಾಸ್ ನಿರ್ದೇಶಿಸಲಿರುವ ಈ ಚಿತ್ರದ ಬಗ್ಗೆ ಅನೌನ್ಸ್​​ಮೆಂಟ್​ ವಿಡಿಯೋ ಬಿಟ್ಟರೆ ಬೇರಾವುದೇ ಅಧಿಕೃತ ಮಾಹಿತಿ ಹೊರಬರಲಿಲ್ಲ. ಆದರೆ ಅಭಿಮಾನಿಗಳು, ಸಿನಿಪ್ರಿಯರ ಕುತೂಹಲ ಮಾತ್ರ ಮುಂದುವರಿದಿದೆ. ಈ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂತಾದರೂ, ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.

ಅಧಿಕೃತ ಮಾಹಿತಿ ನೀಡುತ್ತೇವೆ: ಪ್ರೇಮಿಗಳ ದಿನದಂದು ಸಂದರ್ಶನವೊಂದರಲ್ಲಿ ರಾಕಿಂಗ್​ ಸ್ಟಾರ್ ಯಶ್ ಊಹಾಪೋಹಗಳನ್ನು ಉದ್ದೇಶಿಸಿ ಮಾತನಾಡಿ, ಇನ್ನೂ ಯಾವುದನ್ನೂ ದೃಢೀಕರಿಸಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ಅಲ್ಲದೇ, ನಿರ್ಮಾಪಕರು ಶೀಘ್ರದಲ್ಲೇ ಸಿನಿಮಾದ ತಾರಾಗಣವನ್ನು ಘೋಷಿಸಲಿದ್ದಾರೆ ಮತ್ತು ಅಭಿಮಾನಿಗಳು ಅಧಿಕೃತ ಮಾಹಿತಿಗಳ ಮೇಲಷ್ಟೇ ನಂಬಿಕೆ ಇಡುವಂತೆಯೂ ಕೇಳಿಕೊಂಡರು. ಇತರೆ ವರದಿಗಳ ಪ್ರಕಾರ, ಕಿಂಗ್​ ಖಾನ್​ ಈ ಆಫರ್​ ಅನ್ನು ಇನ್ನೂ ಸ್ವೀಕರಿಸಿಲ್ಲ. ಹಾಗಂತ ನಿರಾಕರಿಸಿಯೂ ಇಲ್ಲ. ಶೀಘ್ರದಲ್ಲೇ ತಮ್ಮ ನಿರ್ಧಾರವನ್ನು ಚಿತ್ರತಂಡಕ್ಕೆ ತಿಳಿಸಲಿದ್ದಾರೆ ಎಂದು ಹೇಳಲಾಗಿದೆ.

'ಟಾಕ್ಸಿಕ್​​' ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಈ ಚಿತ್ರಕ್ಕೆ ಜನಪ್ರಿಯ ನಿರ್ದೇಶಕರಾದ ಗೀತು ಮೋಹನ್‌ದಾಸ್ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಕನ್ನಡದಲ್ಲಿ ಇವರ ಚೊಚ್ಚಲ ಚಿತ್ರವಿದು. ಯಶ್ ಅವರೊಂದಿಗೂ ಮೊದಲ ಪ್ರಾಜೆಕ್ಟ್​​. ಈ ಚಿತ್ರ 'ಗೋವಾದಲ್ಲಿನ ಡ್ರಗ್ ಕಾರ್ಟೆಲ್' ಸುತ್ತ ಸುತ್ತುತ್ತದೆ. ಬಿಗ್​​ ಬಜೆಟ್‌ನಲ್ಲಿ ಸಿನಿಮಾ ತಯಾರಾಗುವ ನಿರೀಕ್ಷೆ ಇದೆ. 'ಟಾಕ್ಸಿಕ್' ಕೇವಲ ಪ್ಯಾನ್-ಇಂಡಿಯನ್ ಚಿತ್ರವಲ್ಲ, ಪ್ಯಾನ್-ವರ್ಲ್ಡ್ ಎಂದು ಸಂದರ್ಶನದಲ್ಲಿ ಯಶ್ ಉಲ್ಲೇಖಿಸಿದ್ದಾರೆ. ಈ ಹಿಂದಿನ ವರದಿಗಳ ಪ್ರಕಾರ, ಕರೀನಾ ಕಪೂರ್ ಖಾನ್​ ನಾಯಕಿಯಾಗಿ ನಟಿಸಲಿದ್ದಾರೆ. ಅದಾಗ್ಯೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ದೊಡ್ಡ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ತಯಾರಾಗುತ್ತಿದೆ: ಯಶ್‌

ವರದಿಗಳ ಪ್ರಕಾರ, ಟಾಕ್ಸಿಕ್​ ಸಿನಿಮಾದ ಸಂಗೀತ ಸಂಯೋಜನೆಗೆ ಚರಣ್ ರಾಜ್ ಅವರನ್ನು ಸಂಪರ್ಕಿಸಲಾಗಿದೆ. ಸ್ಟೀವ್ ಗ್ರಿಫಿನ್ ಅವರನ್ನು ಸಾಹಸ ನೃತ್ಯ ಸಂಯೋಜನೆಗಾಗಿ ಸಂಪರ್ಕಿಸಲಾಗಿದೆ. ಹೆಚ್ಚುವರಿಯಾಗಿ, ಯಶ್ ಈ ಚಿತ್ರದ ಸಹ-ನಿರ್ಮಾಪಕನಾಗಲು ಮುಂದಾಗಿದ್ದಾರೆ. ಇದು ನಟನ ಬ್ಯಾನರ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಚೊಚ್ಚಲ ಚಿತ್ರವಾಗಿದೆ. 2025ರ ಏಪ್ರಿಲ್​ಗೆ ಸಿನಿಮಾವನ್ನು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಈಗಾಗಲೇ ತಿಳಿಸಿದೆ.

ಇದನ್ನೂ ಓದಿ: ನಿರ್ದೇಶನಕ್ಕಿಳಿದ ಮಾತಿನ ಮಲ್ಲ ಸೃಜನ್ ಲೋಕೇಶ್: ತಾಯಿ-ಮಗನಿಗೂ ಹೇಳುತ್ತಿದ್ದಾರೆ ಆ್ಯಕ್ಷನ್​ ಕಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.