ETV Bharat / entertainment

ರಾಜಕೀಯಕ್ಕೆ ಬರ್ತಾರಾ ಅಲ್ಲು ಅರ್ಜುನ್? ನಟ ಕೊಟ್ಟ ಸ್ಪಷ್ಟನೆ ಹೀಗಿದೆ - Allu Arjun

author img

By ETV Bharat Karnataka Team

Published : May 14, 2024, 8:56 AM IST

ರಾಜಕೀಯ ಕ್ಷೇತ್ರ ಪ್ರವೇಶಿಸುವ ಕುರಿತ ವದಂತಿಗಳಿಗೆ ಟಾಲಿವುಡ್​ ನಟ ಅಲ್ಲು ಅರ್ಜುನ್​​ ಸ್ಪಷ್ಟನೆ ಕೊಟ್ಟಿದ್ದಾರೆ.

Allu Arjun
ಅಲ್ಲು ಅರ್ಜುನ್ (ANI)

ನಟ ಅಲ್ಲು ಅರ್ಜುನ್ ರಾಜಕೀಯದಿಂದ ಅಂತರ ಕಾಯ್ದುಕೊಂಡವರು. ಆದರೆ ಈ ಬಾರಿ ತಮ್ಮ ಆಪ್ತ ಸ್ನೇಹಿತ, ವೈಎಸ್‌ಆರ್‌ಸಿಪಿ ಶಾಸಕ ಶಿಲ್ಪಾ ರವಿ (ಸಿಂಗಾರೆಡ್ಡಿ ರವಿಚಂದ್ರ ಕಿಶೋರ್ ರೆಡ್ಡಿ)ಅವರಿಗೆ ಬೆಂಬಲ ಸೂಚಿಸಿ ವಿವಾದ ಎಬ್ಬಿಸಿದ್ದರು. ಇತ್ತೀಚೆಗೆ ಆಂಧ್ರಪ್ರದೇಶದ ನಂದ್ಯಾಲ್​ಗೆ ಭೇಟಿ ನೀಡಿದ್ದ ಅವರು, ಶಿಲ್ಪಾ ರವಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.

ತಮ್ಮ ಕುಟುಂಬ ಸದಸ್ಯ ಹಾಗು ಸ್ಟಾರ್ ನಟ ಪವನ್ ಕಲ್ಯಾಣ್ (ಜನಸೇನಾ ಪಕ್ಷ) ಅವರ ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಬಂಧಿ ಪವನ್ ಕಲ್ಯಾಣ್ ಅವರನ್ನು ಬಿಟ್ಟು, ಬೇರೆ ವ್ಯಕ್ತಿಯನ್ನು ಬೆಂಬಲಿಸಿರುವುದಕ್ಕೆ ಹಲವರು ನಕಾರಾತ್ಮಕ ಕಾಮೆಂಟ್​ ಮಾಡಿದ್ದಾರೆ.

2024ರ ಲೋಕಸಭೆ ಚುನಾವಣೆಯ ನಾಲ್ಕನೇ ಹಂತಕ್ಕೆ ಸೋಮವಾರ ಮತದಾನ ನಡೆದಿದೆ. ತೆಲಂಗಾಣದಲ್ಲಿ ಲೋಕಸಭೆ ಹಾಗೂ ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಿತು. ತಮ್ಮ ತಮ್ಮ ಮತಕೇಂದ್ರಗಳಲ್ಲಿ ಹಕ್ಕು ಚಲಾಯಿಸಿದ ಟಾಲಿವುಡ್​ ನಟರು, ಎಲ್ಲರೂ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದ್ದರು.

ಮತದಾನದ ಬಳಿಕ ಮಾತನಾಡಿದ್ದ ಅಲ್ಲು ಅರ್ಜುನ್​​, "ಮತ ಚಲಾವಣೆ ನಮ್ಮ ಹಕ್ಕು. ಮುಂದಿನ 5 ವರ್ಷದ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಹಕ್ಕು ಚಲಾಯಿಸಿ. ಈ ಬಾರಿ ಹೆಚ್ಚಿನ ಮತದಾನವಾಗುವ ವಿಶ್ವಾಸವಿದೆ" ಎಂದು ತಿಳಿಸಿದ್ದರು.

ಮತ ಚಲಾಯಿಸಿ ಹೊರಬಂದ 'ಪುಷ್ಪ' ಸಿನಿಮಾ ಖ್ಯಾತಿಯ ಅಲ್ಲು ಅರ್ಜುನ್ ಅವರ ಸುತ್ತ ಮಾಧ್ಯಮದವರು ಸುತ್ತುವರೆದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಗೆಳೆಯನ ಗೆಲುವಿಗಾಗಿ ನಂದ್ಯಾಲ್​ ಪ್ರವಾಸ ಕೈಗೊಂಡಿದ್ದೆ ಎಂದು ಸ್ಪಷ್ಟನೆ ಕೊಟ್ಟರು. ಅಲ್ಲದೇ, ರಾಜಕಾರಣಕ್ಕೆ ಎಂಟ್ರಿ ಕೊಡುವ ಬಗ್ಗೆ ಮತ್ತೊಂದು ಪ್ರಶ್ನೆ ನಟನಿಗೆ ಎದುರಾಯಿತು. ಅದಕ್ಕೆ ನಗುನಗುತ್ತಾ ಉತ್ತರ ಕೊಟ್ಟ ಅವರು, ರಾಜಕೀಯ ಸೇರುವ ಇರಾದೆ ನನಗಿಲ್ಲ ಎಂದು ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟರು.

ಇದನ್ನೂ ಓದಿ: ರಾಮ್​ ಚರಣ್​​, ಅಲ್ಲು ಅರ್ಜುನ್​​​ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun

ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ: "ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಚಿಕ್ಕಪ್ಪ ಪವನ್ ಕಲ್ಯಾಣ್ ಅವರಿಗೂ ನನ್ನ ಸಂಪೂರ್ಣ ಬೆಂಬಲವಿದೆ. ಅದು ಯಾವಾಗಲೂ ಇದ್ದೇ ಇರುತ್ತದೆ. ಹಾಗೆಯೇ ನಾನು ನನ್ನ ಗೆಳೆಯ ರವಿಯನ್ನೂ ಸಹ ಬೆಂಬಲಿಸುತ್ತೇನೆ. ನಮ್ಮದು 15 ವರ್ಷಗಳ ಸ್ನೇಹ. ಅವರು ರಾಜಕೀಯಕ್ಕೆ ಬಂದರೆ ನನ್ನ ಬೆಂಬಲವಿದೆ ಎಂದು ಹೇಳಿದ್ದೆ. ಹಾಗಾಗಿ, ನನ್ನ ಸಂಪೂರ್ಣ ಬೆಂಬಲ ಕೊಟ್ಟಿದ್ದೇನೆ. ನಾನು, ನನ್ನ ಪತ್ನಿ ಅವರನ್ನು ಭೇಟಿಯಾಗಿ ಶುಭ ಕೋರಿದ್ದೇವೆ. ಆದ್ರೆ, ನಾನು ರಾಜಕೀಯಕ್ಕೆ ಬರುವ ಉದ್ದೇಶ ಹೊಂದಿಲ್ಲ'' ಎಂದು ಅಲ್ಲು ಅರ್ಜುನ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಟ ಅಲ್ಲು ಅರ್ಜುನ್​ ವಿರುದ್ಧ ಪ್ರಕರಣ ದಾಖಲು: ಕಾರಣ? - Allu Arjun

ಸಿನಿಮಾ ವಿಚಾರ: ಅಲ್ಲು ಅರ್ಜುನ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾದ ಹೆಸರು 'ಪುಷ್ಪ 2: ದಿ ರೂಲ್'. ಸುಕುಮಾರ್ ನಿರ್ದೇಶನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​​ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.