ಮುಂಬೈ (ಮಹಾರಾಷ್ಟ್ರ) : ನಟಿ ರಶ್ಮಿಕಾ ಮಂದಣ್ಣ ಮತ್ತು ಜಾರ್ಜಿಯಾ ಆಂಡ್ರಿಯಾನಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ನಗರಕ್ಕೆ ಆಗಮಿಸಿದಾಗ ರಶ್ಮಿಕಾ ಕ್ಯಾಮರಾಗಳ ಕಣ್ಣಿಗೆ ಬಿದ್ದರು. ಇನ್ನು ಜಾರ್ಜಿಯಾ ಮಾಧ್ಯಮಗಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಮುಂಬೈಗೆ ಆಗಮಿಸಿದಾಗ ನಟಿ ರಶ್ಮಿಕಾ ಅವರು ಬಿಳಿ ಶರ್ಟ್ನೊಂದಿಗೆ ಸ್ಕಿನ್ನಿ ಡೆನಿಮ್ ಹಾಕಿಕೊಂಡಿದ್ದರು. ಮುಂಬೈನ ಬಿಸಿಲಿನ ತಾಪ ಮಾನದಿಂದ ರಕ್ಷಣೆ ಪಡೆದುಕೊಳ್ಳುವುದಕ್ಕಾಗಿ ನಟಿ ಕೂಲಿಂಗ್ ಗ್ಲಾಸ್ ಮತ್ತು ಕ್ಯಾಪ್ ಅನ್ನು ಧರಿಸಿದ್ದರು. ಮತ್ತೊಂದೆಡೆ, ಹುಟ್ಟುಹಬ್ಬದ ಹುಡುಗಿ ಜಾರ್ಜಿಯಾ ಕಪ್ಪು ಬಣ್ಣದ ಮೈಕ್ರೋ ಸ್ಕರ್ಟ್‌ನೊಂದಿಗೆ ಬಿಳಿ ಟಾಪ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು.
ಮುಂಬರುವ ಚಿತ್ರ ಸಿಕಂದರ್ಗಾಗಿ ನಟಿ ರಶ್ಮಿಕಾ ಅವರು ಮುಂಬೈಗೆ ಭೇಟಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಎ. ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ : ದೇವರ 'ಭಯ'ವಿಲ್ಲದ ಹಾಡು ಬಿಡುಗಡೆ: ಎನ್ಟಿಆರ್ ಜನ್ಮದಿನಕ್ಕೆ ಸಿನಿಮಾ ತಂಡದಿಂದ ಭರ್ಜರಿ ಗಿಫ್ಟ್ - Devara Song