ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಯಪುತ್ರ ಅನಂತ್ ಅಂಬಾನಿ ಮದುವೆ ವಿಶ್ವದ ಗಮನ ಸೆಳೆಯುತ್ತಿದೆ. ಇದೇ ಜುಲೈ 12ರಂದು ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಸಪ್ತಪದಿ ತುಳಿಯಲಿದ್ದಾರೆ. ಮದುವೆ ಜುಲೈ 12ರಂದು ನಿಗದಿಯಾಗಿದ್ದು, ಕಾರ್ಯಕ್ರಮಗಳು ಜೂನ್ 29ರಂದೇ ಶುರುವಾಗಿವೆ. ಎರಡು ವೈಭವೋಪೇತ ವಿವಾಹಪೂರ್ವ ಕಾರ್ಯಕ್ರಮಗಳ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಶ್ರೀಮಂತ ಕುಟುಂಬವೀಗ ಮದುವೆಯನ್ನೂ ಬಹಳ ಅದ್ಧೂರಿಯಾಗಿ ಹಮ್ಮಿಕೊಂಡಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಂಗೀತ ಸಮಾರಂಭದ್ದೇ ಸದ್ದು.
ಹೌದು, ಶುಕ್ರವಾರ ಸಂಜೆ ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ನಲ್ಲಿ ಅದ್ಧೂರಿ ಸಂಗೀತ ಸಮಾರಂಭ ನಡೆದಿದೆ. ಬಾಲಿವುಡ್ ತಾರೆಯರು ಮತ್ತು ಕ್ರಿಕೆಟರ್ಸ್ ಈ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ನೆನೆ, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ, ವರುಣ್ ಧವನ್-ನತಾಶಾ ದಲಾಲ್, ಜಾಹ್ನವಿ ಕಪೂರ್, ಖ್ಯಾತ ಕ್ರಿಕೆಟಿಗರಾದ ಮಹೇಂದ್ರಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹೆಚ್ಚಿನ ಸೂಪರ್ ಸ್ಟಾರ್ಸ್ ಜುಲೈ 5ರಂದು ಎನ್ಎಂಎಸಿಸಿ ನಲ್ಲಿ ಕಾಣಿಸಿಕೊಂಡರು.
ಕಿಯಾರಾ ಕಾರ್ಸೆಟ್-ಕಾನ್ಸೆಪ್ಟ್ ಸೀರೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದರೆ, ಪತಿ-ನಟ ಸಿದ್ಧಾರ್ಥ್ ಮಲ್ಹೋತ್ರಾ ಕಸೂತಿ ಮಾಡಿದ ಜಾಕೆಟ್‌ನೊಂದಿಗೆ ಬ್ಲ್ಯಾಕ್ ಕುರ್ತಾ ಧರಿಸಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪೋಷಕರಾಗಿರುವ ವರುಣ್ ಮತ್ತು ನತಾಶಾ ಕ್ಯಾಮರಾಗಳಿಗೆ ಬಹಳ ಸುಂದರವಾಗಿ ಪೋಸ್ ನೀಡಿದರು. ವರುಣ್ ಕುರ್ತಾ ಧರಿಸಿದ್ದರೆ, ನತಾಶಾ ಲೆಹೆಂಗಾದಲ್ಲಿ ಕಂಗೊಳಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಕೂಡ ಸಮಾರಂಭಕ್ಕೆ ಸಾಕ್ಷಿಯಾದರು. ಆಲಿಯಾ ಬ್ಲ್ಯಾಕ್ ಲೆಹೆಂಗಾದಲ್ಲಿ, ರಣ್ಬೀರ್ ಬ್ಲ್ಯಾಕ್ ಬಂದ್ ಗಾಲಾ ಸೂಟ್‌ನಲ್ಲಿ ಕಾಣಿಸಿಕೊಂಡರು. ಮ್ಯಾಚಿಂಗ್ ಡ್ರೆಸ್ ತೊಟ್ಟು ಬಂದ ಜೋಡಿಗೆ ಮೇಡ್ ಫಾರ್ ಈಚ್ ಅದರ್ ಅಂತಿದ್ದಾರೆ ಫ್ಯಾನ್ಸ್. ಜೊತೆಗೆ ತಾರಾ ದಂಪತಿಯ ಫ್ಯಾಶನ್ ಸೆನ್ಸ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಅನಂತ್ ಅಂಬಾನಿ ಸಂಗೀತ ಸಮಾರಂಭದಲ್ಲಿ ಜಸ್ಟಿನ್ ಬೀಬರ್: 83 ಕೋಟಿ ಪಡೆದ ವಿಶ್ವವಿಖ್ಯಾತ ಗಾಯಕ - Justin Bieber
ಅದ್ಧೂರಿ ವಿವಾಹ ಸಮಾರಂಭದ ಅಂಗವಾಗಿ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜುಲೈ 2ರಂದು ಪಾಲ್ಘರ್‌ನಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಜುಲೈ 3ರಂದು ಮಾಮೆರು ಸಮಾರಂಭ ಆಯೋಜಿಸಿದ್ದರು. ಇದೊಂದು ಗುಜರಾತಿ ಸಂಪ್ರದಾಯವಾಗಿದ್ದು, ವಧುವಿನ ಮಾವ (ತಾಯಿ ಕಡೆ) ಉಡುಗೊರೆಗಳು, ಸಿಹಿತಿಂಡಿಗಳೊಂದಿಗೆ ವಧುವನ್ನು ಭೇಟಿ ಮಾಡುವ ಆಚರಣೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಮೊಬೈಲ್ ವಾಲ್ಪೇಪರ್ಗೆ ಯಾರ ಫೋಟೋ? ಮಡದಿ, ಮಕ್ಕಳ ಫೋಟೋವಲ್ಲ! - Virat Kohli Phone Wallpaper
ಹಿಂದೂ ವೈದಿಕ ಪದ್ಧತಿಯಂತೆ ವಿವಾಹ ಸಮಾರಂಭಗಳು ನಡೆಯಲಿವೆ. ಶುಕ್ರವಾರ, ಜುಲೈ 12ರಂದು ಶುಭ ವಿವಾಹ ಕಾರ್ಯಕ್ರಮ. ಜುಲೈ 13ರ ಶನಿವಾರದಂದು, ಶುಭ ಆಶೀರ್ವಾದ ಸಮಾರಂಭ. ಜುಲೈ 14ರಂದು ಆರತಕ್ಷತೆ ನಿಗದಿಯಾಗಿದೆ.