ETV Bharat / entertainment

ಅಣ್ಣಾವ್ರಿಗೆ ಇಷ್ಟವಾದ ಹೋಟೆಲ್​ನಲ್ಲಿ ಬಿರಿಯಾನಿ ಸವಿದ ವಿನಯ್ ರಾಜ್​ಕುಮಾರ್- ಧನ್ಯಾ ರಾಮ್​ಕುಮಾರ್ - Vinay Dhanya Interaction - VINAY DHANYA INTERACTION

ತಾತನಿಗೆ ಇಷ್ಟವಾದ ಹೋಟೆಲ್​ನಲ್ಲಿ ಕುಳಿತು ಬಿರಿಯಾನಿ ಊಟ ಸವಿಯುತ್ತಾ ವಿನಯ್​ ರಾಜ್​ಕುಮಾರ್​ ಹಾಗೂ ಧನ್ಯಾ ರಾಮ್​ಕುಮಾರ್​ ಅವರು ತಮ್ಮ ಪೆಪೆ ಹಾಗೂ ಪೌಡರ್​ ಸಿನಿಮಾಗಳ ಬಗ್ಗೆ ಮಾತನಾಡಿಕೊಂಡಿದ್ದು, ಅದರ ಸಣ್ಣ ತುಣುಕು ಇಲ್ಲಿದೆ..

Vinay Rajkumar and Dhanya Ramkumar
ವಿನಯ್​ ರಾಜ್​ಕುಮಾರ್​ ಹಾಗೂ ಧನ್ಯಾ ರಾಮ್​ಕುಮಾರ್​ (ETV Bharat)
author img

By ETV Bharat Karnataka Team

Published : Aug 26, 2024, 10:33 PM IST

Updated : Aug 26, 2024, 10:40 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಕಂಟೆಂಟ್ ಚಿತ್ರಗಳು ಬಂದರೆ, ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಅನ್ನೋದಿಕ್ಕೆ ಒಂದು ತಾಜಾ ಉದಾಹರಣೆ ದಿಗಂತ್ ಹಾಗು ಧನ್ಯಾ ರಾಮ್ ಕುಮಾರ್ ಅಭಿನಯದ ಪೌಡರ್ ಸಿನಿಮಾ. ಈ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ಧನ್ಯಾ ರಾಮ್ ಕುಮಾರ್ ಅವರು ಪೆಪೆ ಸಿನಿಮಾದ ಹೀರೋ ವಿನಯ್ ರಾಜ್ ಕುಮಾರ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ.

ಪೆಪೆ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಚಿತ್ರ. ಟ್ರೈಲರ್​ನಿಂದಲೇ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಪೆಪೆ ಚಿತ್ರ ಇದೇ ಆಗಸ್ಟ್ 30ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ದೊಡ್ಮನೆ ಮಕ್ಕಳಾದ ವಿನಯ್ ರಾಜ್​ಕುಮಾರ್ ಹಾಗು ಧನ್ಯಾ ರಾಮ್ ಕುಮಾರ್ ತಾತ ರಾಜ್​ಕುಮಾರ್ ಅವರಿಗೆ ಇಷ್ಟವಾದ ಮೆಜೆಸ್ಟಿಕ್​ನಲ್ಲಿರುವ ನವಯುಗ ಹೋಟೆಲ್​ನಲ್ಲಿ ಬಿರಿಯಾನಿ ಊಟ ಸವಿಯುತ್ತಾ ಇಬ್ಬರ ಸಿನಿಮಾಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

Vinay Rajkumar and Dhanya Ramkumar
ವಿನಯ್​ ರಾಜ್​ಕುಮಾರ್​ ಹಾಗೂ ಧನ್ಯಾ ರಾಮ್​ಕುಮಾರ್​ (ETV Bharat)

ಪೆಪೆ ಸಿನಿಮಾದಲ್ಲಿ ನಿನ್ನ ಲುಕ್ ಹಾಗು ಪಂಚೆಯಲ್ಲಿ ನೋಡಿದ್ರೆ ಸಖತ್ ಇಂಟ್ರಸ್ಟ್ರಿಂಗ್ ಆಗಿದೆ. ಯಾವ ತರಹದ ಪಾತ್ರ? ಅನ್ನೋ ಧನ್ಯಾ ರಾಮ್​ಕುಮಾರ್​ ಪ್ರಶ್ನೆಗೆ ಉತ್ತರಿಸಿದ ವಿನಯ್ ರಾಜ್​ಕುಮಾರ್, "ಪೆಪೆ ನಾನು ಇಷ್ಟಪಟ್ಟು ಮಾಡಿದ ಪಾತ್ರ. ಪೆಪೆ ಅನ್ನೋದು ನನ್ನ ಹೆಸರು. ನನ್ನದು ತುಂಬಾ ತಾಳ್ಮೆ ಹಾಗು ವೈಲೆಂಟ್ ಆಗಿರುವ ಪಾತ್ರ. ಈ ಚಿತ್ರದಲ್ಲಿ ಸಣ್ಣ ವಿಷ್ಯಕ್ಕೆಲ್ಲ ಆ ಪಾತ್ರ ತಲೆಕೆಡಿಸಿಕೊಳ್ಳಲ್ಲ. ಆದರೆ ಪೆಪೆ ಬರ್ತಾನೆ ಅಂದರೆ ಅಲ್ಲೊಂದು ವಿಷ್ಯ ಇದೆ ಎನ್ನುವಂತಹ ಪಾತ್ರ ಅದು" ಅಂತಾರೆ.

ಹಾಗೇ ಧನ್ಯಾರಾಮ್ ಕುಮಾರ್ ಅವರ ಪೌಡರ್ ಸಿನಿಮಾ ಬಗ್ಗೆ ವಿನಯ್ ಕೇಳಿದ್ದು, ಅದಕ್ಕೆ ಧನ್ಯಾ, "ಪೌಡರ್ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದಾಗ ಖುಷಿಯಾಯಿತು. ನನ್ನ ಪಾತ್ರ ಬಂದಾಗ ಸಖತ್ ಎಂಜಾಯ್ ಮಾಡ್ತಾ ಇದ್ರು. ಅದು ನನಗೆ ಖುಷಿ ಆಯಿತು." ಎಂದು ಹೇಳಿದರು.

ಧನ್ಯಾ ಹಾಗೂ ವಿನಯ್​ ಮಾತುಕತೆ (ETV Bharat)

ಮತ್ತೆ ಮಾತು ಮುಂದುವರಿಸಿದ ವಿನಯ್​, "ಪೆಪೆ ಸಿನಿಮಾದ ಪಾತ್ರ ಮಾಡೋದು ಕಷ್ಟ ಆಯಿತು. ಕ್ಲೈಮ್ಯಾಕ್ಸ್ ಸನ್ನಿವೇಶದ ಫೈಟ್ ಸೀನ್ ಅನ್ನು ಸಕಲೇಶಪುರದ ಕಾಡಲ್ಲಿ ಮಾಡಬೇಕಾದರೆ ನನಗೆ ಸ್ವಲ್ಪ ಕಷ್ಟ ಆಯಿತು. ಈ ಫೈಟ್ ಸೀನ್ ಸಾಹಸ ನಿರ್ದೇಶಕ ರವಿವರ್ಮ ಸಾರ್ ಫೈಟ್ ಕಂಪೋಸ್ ಮಾಡಿದ್ರು, ಬಹುತೇಕ ಟೈಮಲ್ಲಿ ನಾನು ಫೈಟ್ ಸೀನ್​ ಜಾಗದಲ್ಲಿ ಕಲ್ಲುಗಳಿದ್ರೆ ನಾನೇ ಎತ್ತಿ ಹಾಕ್ತೀನಿ. ಆದರೆ ಕ್ಲೈಮಾಕ್ಸ್ ಫೈಟ್ ಸೀನ್​ ಮಾಡುವಾಗ ಒಂದು ಕಾಲು ಕಲ್ಲಿನ ಮೇಲೆ ಇಟ್ಟಾಗ ರಕ್ತ ಬರುವಂತೆ ಆಯಿತು. ಏನ್ಮಾಡೋದು ಅಂತಾ ಗೊತ್ತಾಗಲಿಲ್ಲ. ಯಾಕಂದ್ರೆ ಶೂಟಿಂಗ್ ಮುಗಿಸಬೇಕಾಗಿತ್ತು" ಎಂದರು.

ಹಾಗೇ ಪೌಡರ್ ಸಿನಿಮಾದ ಕೆಲ ಅನುಭವಗಳನ್ನು ಹಂಚಿಕೊಂಡ ಧನ್ಯಾ, "ಪೌಡರ್ ಸಿನಿಮಾದಲ್ಲಿ ಅಭಿನಯಿಸಬೇಕಾದರೆ ನಮ್ಮ ಸೆಟ್ಟಲ್ಲಿ ರಂಗಾಯಣ ರಘು ಸರ್, ಗೋಪಾಲಕೃಷ್ಣ ದೇಶಪಾಂಡೇ ಸರ್​ ಅವರನ್ನು ನೋಡಿ ತುಂಬಾ ಕಲಿತುಕೊಂಡೆ" ಎಂದರು.

"ಪೆಪೆ ಸಿನಿಮಾದಲ್ಲಿ ಮಗ್ಗು ಅಂತಾ ಕ್ಯಾರೆಕ್ಟರ್ ಇದೆ. ಆ ಕ್ಯಾರೆಕ್ಟರ್ ಜೊತೆ ನನ್ನ ಫೈಟ್ ಇದೆ ಕೊಡಗಿನಲ್ಲಿ, ಪಂಚೆಯಲ್ಲಿ ಶೂಟಿಂಗ್ ಮಾಡಿದ್ವಿ. ಮಳೆ ಟೈಮಲ್ಲಿ ನೆಲದ ಮೇಲೆ ಹೊರಳಾಡಿ ಫೈಟ್ ಮಾಡುವ ಸೀನ್. ಆ ಟೈಮಲ್ಲಿ ಬಿಡುವಿಲ್ಲದೆ ಶೂಟಿಂಗ್ ಮಾಡಿ ನನಗೆ ಸುಸ್ತು ಆಗಿ ತಲೆ ಓಡ್ತಿರಲಿಲ್ಲ. ಡೈರೆಕ್ಟರ್ ಆಕ್ಷನ್ ಅಂದ್ರೆ, ಆ ಮಗ್ಗು ಪಾತ್ರಧಾರಿ ನಿಜವಾಗ್ಲೂ ಫೈಟ್ ಮಾಡೋದಿಕ್ಕೆ ಶುರು ಮಾಡಿದ್ರು. ಆಗ ನನ್ನ ಕೂದಲನ್ನೂ ಹಿಡಿದುಕೊಂಡಿದ್ರು, ಆಗ ಸ್ವಲ್ಪ ಕಷ್ಟ ಆಯ್ತು" ಎಂದರು ವಿನಯ್​.

ಇನ್ನು ಧನ್ಯಾ, "ನಿತ್ಯಾ ಎಂಬ ಪಾತ್ರಕ್ಕೆ ನಾನು ಕೂಡ ಒಂದಿಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಚಿಕ್ಕವಯಸಿನಿಂದಲೇ ಯಾರು ಇರಲ್ಲ, ಸ್ನೇಹಿತರ ಜೊತೆ ಬೆಳೆಯುತ್ತಿರುವ, ಸಹಜವಾಗಿ ದುಡ್ಡಿನ ಮೇಲೆ ಸ್ವಲ್ಪ ಜಾಸ್ತಿ ವ್ಯಾಮೋಹ ಇರುವ ಪಾತ್ರ ನನ್ನದು. ನಾನು ಆನ್ ಸ್ಪಾಟ್​ನಲ್ಲಿ ಕೆಲವೊಂದು ರೆಡಿ ಮಾಡಿ ಅಭಿನಯಿಸಿದ್ದೇನೆ" ಎನ್ನುತ್ತಾರೆ.

ವಿನಯ್, "ನಾನು ಕೂಡ ನನ್ನ ಪಾತ್ರದ ಬಗ್ಗೆ ಒಂದಿಷ್ಟು ನೋಟ್ಸ್​ಗಳನ್ನು ಬರೆದುಕೊಂಡು ಅಭಿನಯಿಸಿದ್ದೇನೆ. ಕಮ್ಮಿ ಅಂದ್ರೂ 30 ಪಾಯಿಂಟ್ಸ್​ಗಳನ್ನು ಬರೆದುಕೊಂಡು ಅಭಿನಯಿಸಿದ್ದೇನೆ. ಪೆಪೆ ಸಿನಿಮಾದಲ್ಲಿ ಒಂದು ಓಲೆ ಹಾಗು ಬಳೆ ಬಹುಮುಖ್ಯ ಪಾತ್ರ ವಹಿಸುತ್ತೆ. ಪೆಪೆಗೆ ಅದು ತುಂಬಾ ಸ್ಫೂರ್ತಿಯಾಗುತ್ತೆ" ಅಂತಾರೆ.

"ನಮ್ಮ ಫ್ಯಾಮಿಲಿಯಲ್ಲಿ ಮೊದಲ ಹೆಣ್ಣು ಮಗಳು ನೀನು ಅಭಿನಯ ಕ್ಷೇತ್ರಕ್ಕೆ ಬಂದಿರೋದು. ಎಷ್ಟು ಚಾಲೆಂಜಿಂಗ್ ಆಗಿದೆ ವಿನಯ್ ಪ್ರಶ್ನೆಗೆ ಧನ್ಯಾ, "ನಮ್ಮ ಫ್ಯಾಮಿಲಿಯಿಂದ ಯಾರೂ ಸಿನಿಮಾ ಹೀರೋಯಿನ್ ಆಗಿರಲಿಲ್ಲ. ಆಗ ನಾನು ಕೂಡ ಬೇಡ ಅಂತಾ ಅಂದುಕೊಂಡಿದ್ದೆ. ಒಂದು ದಿನ ಯಾಕೇ ಟ್ರೈ ಮಾಡ್ಬಾರ್ದು ಅಂತಾ ಅಮ್ಮನಿಗೆ ಕೇಳಿದೆ. ಅಮ್ಮ ಓಕೆ ಅಂದ್ರು. ಆ ಮೇಲೆ ರಾಘು ಮಾಮ, ಅಪ್ಪು ಮಾಮ, ಅಶ್ವಿನಿ ಆಂಟಿ, ಶಿವಣ್ಣ ಮಾಮ ಎಲ್ಲಾರು ಓಕೆ ಒಳ್ಳೆಯದು ಅಂದ್ರು. ಆದ್ರೆ ಅಪ್ಪ ಒಪ್ಪಿರಲಿಲ್ಲ. ಆಮೇಲೆ ಅಪ್ಪನೂ ಒಪ್ಪಿಕೊಂಡ್ರು. ಪಪ್ಪಾ ಮುಂದೆ ಸಾಕಷ್ಟು ಟೈಮ್ ನಾನು ಆ್ಯಕ್ಟ್ ಮಾಡಿದ್ದೀನಿ. ಆದ್ರೆ ಅಪ್ಪ ಒಪ್ಪಿಕೊಂಡಿರಲಿಲ್ಲ" ಎಂದರು.

ವಿನಯ್​ಗೆ ಧನ್ಯಾ, ಪೆಪೆ ಸಿನಿಮಾಗೆ ತಾತ, ಶಿವಣ್ಣ ಮಾಮ, ರಾಘು ಮಾಮ, ಅಪ್ಪಿ ಮಾಮನಿಂದ ಏನು ಸ್ಫೂರ್ತಿ ತೆಗೆದುಕೊಳ್ಳುತ್ತೀಯಾ? ಕೇಳಿದರೆ, "ಪೆಪೆ ಯಾವಾಗ್ಲೂ ಕಾಡಲ್ಲಿ ಇರ್ತಾನೆ. ಕಾಡಲ್ಲಿ ಓಡಾಡುತ್ತಿರುತ್ತಾನೆ. ಅದಕ್ಕೆ ಶಿವಣ್ಣ ದೊಡ್ಡಪ್ಪನಿಂದ ಎನರ್ಜಿ ತೆಗೆದುಕೊಳ್ಳುತ್ತೇನೆ. ತಾತನಿಂದ ಲೀಡರ್​ಶಿಪ್​ ಕ್ವಾಲಿಟಿ. ಅಪ್ಪನಿಂದ ತುಂಬಾ ಸೀರಿಯಸ್ ಜೊತೆಗೆ ಕಾಮಿಡಿ, ಇನ್ನು ಚಿಕ್ಕಪ್ಪನಿಂದ ಅವರ ನಗುವನ್ನು ಎನರ್ಜಿಯಾಗಿ ತೆಗೆದುಕೊಳ್ಳುತ್ತೇನೆ" ಎಂದು ಹೇಳುತ್ತಾರೆ.

"ತಾತನಿಂದ ಹಿಡಿದು ಇಡೀ ನಮ್ಮ ಕುಟುಂಬಕ್ಕೆ ನವಯುಗ ಹೋಟೆಲ್​ನ ನಾನ್​ವೆಜ್ ಊಟ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತೆ. ನಾವು ಕೂಡ ಚಿಕ್ಕ ವಯಸ್ಸಿನಿಂದ ಇಲ್ಲಿ ಊಟ ಮಾಡ್ತಾ ಬಂದಿದ್ದೇವೆ" ಅಂತಾರೆ.

ಹೀಗೆ ವಿನಯ್ ಹಾಗೂ ಧನ್ಯಾ ತಮ್ಮ ಸಿನಿಮಾಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ, ಪೆಪೆ ಹಾಗು ಪೌಡರ್ ಸಿನಿಮಾದ ಬಗ್ಗೆ ಇಬ್ಬರು ಸಮಾನವಾಗಿ ಮಾತನಾಡುತ್ತಾ ಬಿರಿಯಾನಿ ಊಟವನ್ನು ಸವಿದಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್​!: 'ಭೈರತಿ ರಣಗಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Bhairathi Ranagal Release Date

Last Updated : Aug 26, 2024, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.