ETV Bharat / entertainment

ವಿಜಯ್ ವರ್ಮಾ, ತಮನ್ನಾ ಡಿನ್ನರ್ ಡೇಟ್: ಮೋಹಕ ವಿಡಿಯೋ ನೋಡಿ - Vijay Varma Tamannaah - VIJAY VARMA TAMANNAAH

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಜೊತೆಯಾಗಿ ಕಾಣಿಸಿಕೊಂಡಿದ್ದು, ಫೋಟೋ-ವಿಡಿಯೋಗಳು ವೈರಲ್​​ ಆಗಿವೆ.

Tamannaah Bhatia Vijay Varma
ತಮನ್ನಾ ಭಾಟಿಯಾ ವಿಜಯ್ ವರ್ಮಾ (ANI image)
author img

By ETV Bharat Karnataka Team

Published : May 8, 2024, 2:31 PM IST

ಸಿನಿಮಾ ಎಂಬ ಬಣ್ಣದ ಲೋಕದ ಪ್ರೇಮಪಕ್ಷಿಗಳಾದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಜೋಡಿ ಪರಸ್ಪರರ ಕೆಲಸಗಳಿಗೆ ಬೆಂಬಲ ಕೊಡುತ್ತಾ, ಇಬ್ಬರ ಗೆಲುವನ್ನು ಒಟ್ಟಿಗೆ ಆಚರಿಸುತ್ತಲೇ ಇರುತ್ತಾರೆ. ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು, ಸೋಷಿಯಲ್​​ ಮೀಡಿಯಾಗಳಲ್ಲಿ ಸದ್ದು ಮಾಡುವುದರ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಕೆಲ ದಿನಗಳ ನಂತರ, ವಿಜಯ್ ಮತ್ತು ತಮನ್ನಾ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಲವ್​​​ಬರ್ಡ್ಸ್ ನಿನ್ನೆ (ಮೇ 7, ಬುಧವಾರ) ರಾತ್ರಿ ಸಿಂಪ್ಲಿ ಸ್ಟೈಲಿಶ್ ಲುಕ್​ನಲ್ಲಿ ಮುಂಬೈ ನಗರದಲ್ಲಿ ಕಾಣಿಸಿಕೊಂಡರು. ಭಾರತೀಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಒಡೆತನದ ರೆಸ್ಟೋರೆಂಟ್​ನಿಂದ ತಮನ್ನಾ ಮತ್ತು ವಿಜಯ್​​​ ಒಟ್ಟಿಗೆ ಹೊರಬರುವ ವೇಳೆ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾಗಳಲ್ಲಿ ಈ ಇಬ್ಬರ ನಗು ಸೆರೆಯಾಗಿದೆ. ವಿಡಿಯೋಗಳಲ್ಲಿ, ಕಲಾವಿದರು ಮನಬಿಚ್ಚಿ ನಗುತ್ತಿರುವುದನ್ನು, ನಾಚಿ ನೀರಾಗುತ್ತಿರುವುದನ್ನು ಕಾಣಬಹುದು. ಒಟ್ಟಿಗೆ ಪೋಸ್ ಕೊಡುವ ಮೂಲಕ ಪಾಪರಾಜಿಗಳ ಮನವಿಗೆ ಸ್ಪಂದಿಸಿದರು.

ಕಾರ್ ಹತ್ತುವ ಮೊದಲು, ತಮನ್ನಾ ಭಾಟಿಯಾ ಕ್ಯಾಮರಾಗಳತ್ತ ಕೈ ಬೀಸಿದರು. ಜೊತೆಗೆ ಕೆಲ ಸಿಂಗಲ್​​​ ಶಾಟ್‌ಗಳಿಗೆ ಪೋಸ್ ನೀಡಿದರು. ಈ ವಿಶೇಷ ಕ್ಷಣಕ್ಕಾಗಿ ನಟಿ ಸರಳ ಸಾಂಪ್ರದಾಯಿಕ ಉಡುಗೆ ಆರಿಸಿಕೊಂಡಿದ್ದರು. ಸಡಿಲ ಕೇಶರಾಶಿ, ಮಿನಿಮಮ್ ಮೇಕ್ಅಪ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡರು. ಇನ್ನೂ ಗೆಳೆಯ ವಿಜಯ್ ಬಿಳಿ ಶರ್ಟ್, ನೀಲಿ ಜೀನ್ಸ್​​ ಧರಿಸಿದ್ದರು.

ಪಾಪರಾಜಿಗಳು ತಾರಾ ಜೋಡಿಯ ಫೋಟೋ-ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ, ಅವು ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಗಮನ ಸೆಳೆಯಿತು. ಇಬ್ಬರ ಕೆಮಿಸ್ಟ್ರಿ, ಸಿಂಪ್ಲಿಸಿಟಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಹಾರ್ಟ್ ಎಮೋಜಿಯೊಂದಿಗೆ ಕಾಮೆಂಟ್​ ಸೆಕ್ಷನ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನೇಮದಲ್ಲಿ ಪಾಲ್ಗೊಂಡ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ: ಮತ್ತಷ್ಟು ಎತ್ತರಕ್ಕೆ ಬೆಳೆಯುವ ಅಭಯ ನೀಡಿದ ದೈವ - Srinidhi Shetty

ಸಿನಿ ಕ್ಷೇತ್ರದಲ್ಲಿ ಸಾಧನೆಗೈದಿರುವ ಈ ಇಬ್ಬರು ಸದ್ಯ ತಮ್ಮ ಡೇಟಿಂಗ್​​​ ಸಲುವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ತಮ್ಮ ಆತ್ಮೀಯ ಸಂಬಂಧ, ಪರಸ್ಪರ ಪ್ರೋತ್ಸಾಹದಂತಹ ವಿಚಾರಗಳ ಸಲುವಾಗಿ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ತಮನ್ನಾ ಸದ್ಯ ಅರಣ್ಮನೈ ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದು, ವಿಜಯ್​ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆ ಮೂಲಕ ಗೆಳತಿಯ ಸಾಧನೆಗಳನ್ನು ಪ್ರಶಂಸಿಸಿದ್ದಾರೆ. ಮೂರು ರೆಡ್ ಹಾರ್ಟ್​ ಎಮೋಜಿಗಳೊಂದಿಗೆ ಪೋಸ್ಟ್ ಅನ್ನು ರೀ ಶೇರ್ ಮಾಡುವ ಮೂಲಕ ತಮನ್ನಾ ಪ್ರತಿಕ್ರಿಯಿಸಿದ್ದಾರೆ. ಇದು ಪರಸ್ಪರರ ಬಾಂಧವ್ಯ, ಬೆಂಬಲವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಕಮಲ್ ಹಾಸನ್​ ನಟನೆಯ 'ಥಗ್​​ ಲೈಫ್​​'ನಿಂದ ಸಿಲಂಬರಸನ್ ಫಸ್ಟ್ ಲುಕ್ ಔಟ್​ - Silambarasan First Look

ಲಸ್ಟ್ ಸ್ಟೋರಿಸ್ 2ರ ಸೆಟ್‌ನಲ್ಲಿ ಮೊದಲ ಬಾರಿ ಇಬ್ಬರೂ ಭೇಟಿಯಾದರು. ಸೆಟ್​ನಲ್ಲೇ ಪ್ರೇಮಾಂಕುರವಾಯಿತು ಎಂದು ಹೇಳಲಾಗಿದೆ. ಕಳೆದ ಒಂದುವರೆ ವರ್ಷದಿಂದ ಇಬ್ಬರ ಡೇಟಿಂಗ್​ ವರದಿಗಳು ಸದ್ದು ಮಾಡುತ್ತಿವೆ. ಮೊದ ಮೊದಲು ಸಾರ್ವಜನಿಕ ವಲಯದಿಂದ ದೂರ ಉಳಿದಿದ್ದ ಈ ಜೋಡಿಯೀಗ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.