ETV Bharat / entertainment

25 ದಿನ ಪೂರೈಸಿದ 'Love...ಲಿ': ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ವಸಿಷ್ಠ ಸಿಂಹ ಮನವಿ - Love li Movie - LOVE LI MOVIE

ವಸಿಷ್ಠ ಸಿಂಹ ಮುಖ್ಯಭೂಮಿಕೆಯ 'Love ಲಿ' ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ.

Love Li Poster
'Love ಲಿ' ಸಿನಿಮಾ ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 10, 2024, 7:03 AM IST

ಕನ್ನಡ ಚಿತ್ರರಂಗದಲ್ಲಿ ಅಮೋಘ ಅಭಿನಯದೊಂದಿಗೆ ಅದ್ಭುತ ಕಂಠದಿಂದಲೂ ಜನಮನಸೂರೆಗೊಳಿಸಿರುವ ನಟ ವಸಿಷ್ಠ ಸಿಂಹ. ಇವರ ಲೇಟೆಸ್ಟ್ 'Love ಲಿ' ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ. ಪ್ರಸ್ತುತ ರಾಜ್ಯದ 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ‌. ಈ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಿದ್ದ ನಿರ್ಮಾಪಕರು, ಚಿತ್ರತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ವಸಿಷ್ಠ ಸಿಂಹ, "ಜೂನ್ ತಿಂಗಳು ನಮಗೆ ಮಾರಕ ಎಂದರೆ ತಪ್ಪಾಗದು. ನಮ್ಮ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಒಂದಲ್ಲೊಂದು ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳ ನಡುವೆ ಚಿತ್ರ ತೆರೆಗೆ ಬಂದಿತ್ತು. ಚೇತನ್ ಕೇಶವ ತಮ್ಮ ಮೊದಲ ನಿರ್ದೇಶನದಲ್ಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಚಿತ್ರ ನೋಡಿದವರು ಕಥೆ ಮೆಚ್ಚಿಕೊಂಡಿದ್ದಾರೆ‌. ನಾವು ನಿರೀಕ್ಷಿಸಿದಷ್ಟು ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲವೆಂಬ ಬೇಸರವಿದೆ. ಆದಾಗ್ಯೂ, 25 ದಿನಗಳನ್ನು ಪೂರೈಸಿದೆ. ದಯವಿಟ್ಟು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ಈಗಾಗಲೇ ಚಿತ್ರ ವೀಕ್ಷಿಸಿರುವವರಿಗೆ ಧನ್ಯವಾದಗಳು. ನೋಡದೇ ಇರುವವರು ಈಗಲೇ ನೋಡಿ" ಎಂದು ಮನವಿ ಮಾಡಿದರು.

"ಮಫ್ತಿ ನಿರ್ದೇಶಕ ನರ್ತನ್, ಪ್ರಶಾಂತ್ ನೀಲ್ ಅಂಥವರ ಬಳಿ ಕೆಲಸ ಮಾಡಿ ಬಂದಿರುವ ನನಗಿದು ಮೊದಲ ನಿರ್ದೇಶನದ ಚಿತ್ರ. ಕನ್ನಡದಲ್ಲಿ ಒಂದೊಳ್ಳೆ ಕಂಟೆಂಟ್ ಆಧರಿಸಿದ ಚಿತ್ರವನ್ನು ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ‌. ಜನ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡುತ್ತಿದ್ದು, ಬಹಳ ಖುಷಿಯಿದೆ‌. ಆದರೆ ಎಲ್ಲರೂ ಹೇಳಿದಂತೆ ನಿರೀಕ್ಷಿಸಿದಷ್ಟು ಜನರು ನಮ್ಮ ಚಿತ್ರ ನೋಡಿಲ್ಲ ಎಂಬ ಬೇಸರ ನನಗೂ ಇದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನರು ವೀಕ್ಷಿಸಿ ಪ್ರೋತ್ಸಾಹಿಸಿ" ಎಂಬುದು ನಿರ್ದೇಶಕ ಚೇತನ್ ಕೇಶವ್ ಮಾತು.

ಇದನ್ನೂ ಓದಿ: ವಿಜಯ್​ ದೇವರಕೊಂಡ ಸಮಾಜಸೇವೆಗೆ ಮಂಗಳಮುಖಿ ಸೇರಿ ಹಲವರಿಂದ ಗುಣಗಾನ: ವಿಡಿಯೋ - Vijay Devarakonda Social Service

ಬಳಿಕ‌ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಮಾತನಾಡುತ್ತಾ, "ಮೊದಲು ನಮ್ಮ ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಚಿತ್ರ ನೋಡಿದವರು ಬಹಳ ಇಷ್ಟಪಟ್ಟಿದ್ದಾರೆ. ಆದರೆ ಇಲ್ಲಿನ ಜನರು ಬೇರೆ ಭಾಷೆಗಳ ಚಿತ್ರಗಳಿಗೆ ನೀಡುವ ಪ್ರೋತ್ಸಾಹವನ್ನು ನಮ್ಮ ಕನ್ನಡ ಚಿತ್ರಗಳಿಗೆ ನೀಡುವುದಿಲ್ಲ ಎಂಬ ಬೇಸರವಿದೆ. ದಯಮಾಡಿ, ಕರ್ನಾಟಕದ ಜನರು ಕನ್ನಡ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ. ಒಬ್ಬ ನಿರ್ಮಾಪಕ ಗೆದ್ದರೆ, ಅದರಿಂದ ಬಂದ ಹಣವನ್ನು ಮತ್ತೊಂದು ಚಿತ್ರಕ್ಕೆ ಹಾಕುತ್ತಾನೆ. ಅದರಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ: 'ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರು': ಭೈರವನ ಕೊನೆ ಪಾಠದ ಬಗ್ಗೆ ಶಿವಣ್ಣ ಹೀಗಂದ್ರು - Bhairavana Kone PaaTa

ಸ್ಟೆಫಿ ಪಟೇಲ್ ಅವರು ಕನ್ನಡದಲ್ಲೇ ಎಲ್ಲರಿಗೂ ಧನ್ಯವಾದ ಹೇಳಿದರು. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಕಾಕ್ರೋಜ್ ಸುಧೀ, ಶೇಖರ್, ವರ್ಧನ್, ಬೇಬಿ ವಂಶಿಕ ಸೇರಿದಂತೆ ಹಲವರಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳನ್ನು ಬರೆದಿದ್ದಾರೆ. ಛಾಯಾಗ್ರಹಣದ ಕೆಲಸ ಅಶ್ವಿನ ಕೆನ್ನೆಡಿ ಅವರದ್ದು. ಸಂಕಲನಕಾರ ಹರೀಶ್ ಕೊಮ್ಮೆ. ಸೌಂಡ್ ಡಿಸೈನರ್ ಆಗಿ ಅಭಿನಂದನ್ ಚಿತ್ರತಂಡದ ಭಾಗವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.