ETV Bharat / entertainment

ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ನಿಧನ! - Usha Uthup Husband Passes Away - USHA UTHUP HUSBAND PASSES AWAY

ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ಚಾಕೋ ಉತ್ತುಪ್​​ ತಮ್ಮ 78ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ.

Usha Uthup Family
ಉಷಾ ಉತುಪ್ ಕುಟುಂಬ (IANS/Anjali Uthup IG)
author img

By ETV Bharat Karnataka Team

Published : Jul 9, 2024, 3:54 PM IST

ಭಾರತದ ಖ್ಯಾತ ಪಾಪ್ ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೋ ಉತ್ತುಪ್​​ (Jani Chacko Uthup) ಅವರು ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಈ ವಿಚಾರವನ್ನು ಅವರ ಕುಟುಂಬ ದೃಢಪಡಿಸಿದೆ. ಜಾನಿ ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಜಾನಿ ಚಾಕೋ ಉತ್ತುಪ್ ಅಸ್ವಸ್ಥಗೊಂಡರು. ಚಿಕಿತ್ಸೆಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ದುರದೃಷ್ಟವಶಾತ್, ಜಾನಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ತೀವ್ರ ಹೃದಯ ಸ್ತಂಭನ ಸಾವಿಗೆ ಕಾರಣ ಎಂದು ಅವರ ಕುಟುಂಬ ಮಾಹಿತಿ ನೀಡಿದೆ.

ಮಗಳು ಅಂಜಲಿ ಸೋಷಿಯಲ್​ ಮೀಡಿಯಾದಲ್ಲಿ ತಂದೆಯ ಫೋಟೋ ಹಂಚಿಕೊಂಡು, ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ಅಪ್ಪಾ, ಬಹಳ ಬೇಗ ಹೋದರು. ಆದರೆ, ನೀವು ಬಹಳ ಸೊಗಸಾಗಿ ಬದುಕಿ ಹೋದಿರಿ. ಜಗತ್ತಿನ ಅತ್ಯಂತ ಹ್ಯಾಂಡ್ಸಂ ವ್ಯಕ್ತಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ. ಅಂಜಲಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೆ, ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳಿಂದ ಸಂತಾಪದ ಸಂದೇಶಗಳು ಬರಲಾರಂಭಿಸಿವೆ.

ಇದನ್ನೂ ಓದಿ: ಮನೆಯಿಂದ ಊಟ, ಹಾಸಿಗೆ, ಪುಸ್ತಕ ಒದಗಿಸಲು ಸೂಚಿಸುವಂತೆ ಕೋರಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ - Darshan Plea For Home Meals

ಚಹಾ ತೋಟ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜಾನಿ, ಉಷಾ ಉತ್ತುಪ್ ಅವರ ಎರಡನೇ ಪತಿ. ಕೋಲ್ಕತ್ತಾದ ಟ್ರಿಂಕಾಸ್ ಎಂಬ ನೈಟ್‌ಕ್ಲಬ್‌ನಲ್ಲಿ ಈ ದಂಪತಿಯ ಪ್ರೇಮಕಥೆ ಪ್ರಾರಂಭವಾಯಿತು. 1970ರ ದಶಕದ ಆರಂಭದಲ್ಲಿ ಅರಳಿದ ಪ್ರೇಮಕ್ಕೆ ನಂತರ ಮದುವೆ ಎಂಬ ಅಧಿಕೃತ ಮುದ್ರೆ ಬಿತ್ತು. ಇದೀಗ ಪತ್ನಿ ಉಷಾ, ಮಗ ಸನ್ನಿ ಮತ್ತು ಮಗಳು ಅಂಜಲಿಯವರನ್ನು ಅಗಲಿದ್ದಾರೆ. ಜಾನಿ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.