Allu Arjun Released: ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧಿತರಾಗಿರುವ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿಯವರೆಗೂ ಅಲ್ಲು ಅರ್ಜುನ್ ಬಿಡುಗಡೆಯ ಪ್ರಕ್ರಿಯೆ ಮುಂದುವರೆದಿತ್ತು. ಆರಂಭದಲ್ಲಿ ನಾಂಪಲ್ಲಿ ನ್ಯಾಯಾಲಯದಿಂದ ರಿಮಾಂಡ್ ಪಡೆದ ಪೊಲೀಸರು ಚಂಚಲಗುಡ ಜೈಲಿಗೆ ಕರೆದೊಯ್ದರು.
ನಂತರ ಹೈಕೋರ್ಟ್ ನಟನಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ರಾತ್ರಿ 10.30ಕ್ಕೆ ಸೂಕ್ತ ದಾಖಲೆಗಳನ್ನು ಜೈಲು ಅಧಿಕಾರಿಗಳು ಸ್ವೀಕರಿಸಿದ್ದರಿಂದ ಅಲ್ಲು ಅರ್ಜುನ್‌ನನ್ನು ಚಂಚಲಗುಡ ಜೈಲಿನಲ್ಲಿ ಇರಿಸಲಾಗಿತ್ತು. ಸದ್ಯ ಅಲ್ಲು ಅರ್ಜುನ್ ಜೈಲಿನಿಂದ ಹೊರ ಬಂದಿದ್ದಾರೆ.
ಓದಿ: ನಟ ಅಲ್ಲು ಅರ್ಜುನ್‌ಗೆ ರಿಲೀಫ್: ಮಧ್ಯಂತರ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್