ಕರ್ನಾಟಕದಲ್ಲಿ ಸಿನಿಮಾ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರವನ್ನು 1,000 ರೂಪಾಯಿಯಿಂದ 1,500 ರೂಪಾಯಿವರೆಗೂ ಹೆಚ್ಚು ಮಾಡಿದ್ದಾರೆ. ಇದರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಮಾಜಿ ಅಧ್ಯಕ್ಷ ಸಾ. ರಾ. ಗೋವಿಂದು ಸೇರಿದಂತೆ ಕೆಲ ನಿರ್ಮಾಪಕರು ಎರಡು ದಿನದ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಈ ವಿಚಾರವಾಗಿ ಇಂದು ನಿರ್ಮಾಪಕ ಸಾ.ರಾ ಗೋವಿಂದು, ಫಿಲ್ಮ್ ಚೇಂಬರ್ ಖಜಾಂಚಿ ಜಯಸಿಂಹ ಮುಸರಿ ಹಾಗೂ ನಿರ್ದೇಶಕ ಟೇಶಿ ವೆಂಕಟೇಶ್ ಸಮ್ಮುಖದಲ್ಲಿ ಮಾಧ್ಯಮಗೋಷ್ಟಿ ನಡೆಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರ ಸಾ.ರಾ ಗೋವಿಂದು, ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಹೆಚ್ಚಳ ಮಾಡಿದ್ದಾರೆ. 100 ರೂಪಾಯಿದಿಂದ 1500 ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಕನ್ನಡ ಪ್ರೇಕ್ಷಕರು ಚಿತ್ರಮಂದಿಗಳಿಗೆ ಬರುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆ ಎರಡು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಬೆಲೆಯನ್ನು 200 ರೂಪಾಯಿಗಿಂತ ಹೆಚ್ಚು ಮಾಡದಂತೆ ಸರ್ಕಾರ ಕಾನೂನು ತರುವಂತೆ ಮನವಿ ಸಲ್ಲಿಸಿದ್ದೇವೆ ಎಂದರು.
ಸದ್ಯದಲ್ಲೇ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಬಿಡುಗಡೆ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು 200 ರೂಪಾಯಿಗಿಂತ ಹೆಚ್ಚು ಮಾಡಿದ್ರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಜಿಮ್ ಟ್ರೇನರ್ಗೆ ಅಮೆರಿಕದಿಂದ ಪುನೀತ್ ತರಿಸಿದ್ದರು ಈ ಸ್ಪೆಷಲ್ ಗಿಫ್ಟ್: ಇಲ್ಲಿದೆ ಎಕ್ಸ್ಕ್ಲ್ಯೂಸಿವ್ ಸಂದರ್ಶನ
ಪರಭಾಷೆಯ ನಿರ್ಮಾಪಕರು ಅವರ ಸಿನಿಮಾ ಮೇಲೆ ಕೋಟಿ ಕೋಟಿ ಹಣ ಹಾಕುತ್ತಾರೆ. ಇದರ ಹೊರೆಯನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಉಳಿದ ಭಾಷೆಗಳ ಸಿನಿಮಾಗಳು ಕರ್ನಾಟಕದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿವೆ. ಕರ್ನಾಟಕದ ಹಣ ಪರಭಾಷೆಯ ನಿರ್ಮಾಪಕರ ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪುನೀತ್ 'ಗಂಧದಗುಡಿ'ಗೆ 2 ವರ್ಷ: 'ಅಭಿಮಾನಿಗಳ ಪ್ರೀತಿ ವರ್ಣನಾತೀತ' ಎಂದ ಅಪ್ಪು ಸ್ಪೆಷಲ್ ವಿಡಿಯೋ ರಿಲೀಸ್
ಕೆಲ ದಿನಗಳ ಹಿಂದೆ ಬಿಡುಗಡೆ ಆದ ಹಿರಿಯ ನಟ ರಜನಿಕಾಂತ್ ಅವರ ವೆಟ್ಟೈಯನ್ ಸಿನಿಮಾಗೆ ಟಿಕೆಟ್ ಬೆಲೆ ತಮಿಳುನಾಡಿನಲ್ಲೇ 150 ರೂಪಾಯಿ ಇತ್ತು. ಆದ್ರೆ ಇಲ್ಲಿ ಮಾತ್ರ 1,500 ರೂ.ಗೆ ಮಾರಾಟ ಮಾಡಲಾಯ್ತು. ನಮ್ಮವರ ದುಡ್ಡು ಅಲ್ಲಿಗೆ ಹೋಗುತ್ತಿದೆ. ಇದರಿಂದ ನಮ್ಮ ಸಿನಿಮಾಗಳನ್ನು ನೋಡೋಕೆ ಪ್ರೇಕ್ಷಕರ ಹತ್ತಿರ ಹಣನೇ ಇಲ್ಲ. ನಾವೇನು ರಣಹೇಡಿಗಳಲ್ಲ. ಸರ್ಕಾರ ಈ ವಿಚಾರವಾಗಿ ಎಚ್ಚರ ವಹಿಸಬೇಕು. ಇಲ್ಲಾ ಅಂದ್ರೆ ನವೆಂಬರ್ 16ರಿಂದ ಹೋರಾಟ ನಡೆಸುತ್ತೇವೆ ಅಂತಾ ಸಾ ರಾ ಗೋವಿಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.