ETV Bharat / entertainment

ಚಿತ್ರತಂಡದವರಿಗೆ ಊಟ ಬಡಿಸಿದ ಚಿಯಾನ್​​ ವಿಕ್ರಮ್​​: 'ತಂಗಲಾನ್' ಸಂಭ್ರಮಾಚರಣೆಯ ವಿಡಿಯೋ ನೋಡಿ - Thangalaan Success Party - THANGALAAN SUCCESS PARTY

'ತಂಗಲಾನ್' ಬಾಕ್ಸ್ ಆಫೀಸ್‌ನಲ್ಲಿ ಕಮಾಲ್​​ ಮಾಡಿದೆ. ನಾಯಕ ನಟ ಚಿಯಾನ್ ವಿಕ್ರಮ್ ಚಿತ್ರತಂಡ ಮತ್ತು ಅವರ ಕುಟುಂಬಗಳಿಗೆ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಚಿಯಾನ್ ವಿಕ್ರಮ್ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದು, ಫೋಟೋ, ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ.

Thangalaan Success Party
ತಂಗಲಾನ್ ಸಕ್ಸಸ್​ ಪಾರ್ಟಿ (ETV Bharat)
author img

By ETV Bharat Karnataka Team

Published : Aug 28, 2024, 5:15 PM IST

ಚೆನ್ನೈ (ತಮಿಳುನಾಡು): ತಮಿಳು ಚಿತ್ರರಂಗದ ಬಹುಬೇಡಿಕೆ​ ನಟ ಚಿಯಾನ್​ ವಿಕ್ರಮ್​ ಮುಖ್ಯಭೂಮಿಕೆಯ 'ತಂಗಲಾನ್​' ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ. ಪಾ ರಂಜಿತ್​​ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಬಾಕ್ಸ್​​ ಆಫೀಸ್​ನಲ್ಲೂ ಕಮಾಲ್​ ಮಾಡಿದ್ದು, ಚಿತ್ರತಂಡ ಯಶಸ್ಸಿನಲೆಯಲ್ಲಿ ತೇಲುತ್ತಿದೆ. ಸದ್ಯ ಸಂಪೂರ್ಣ ಚಿತ್ರತಂಡ ಒಂದೆಡೆ ಸೇರಿ ಸಿನಿಮಾ ಸಕ್ಸಸ್​ನ ಸಂಭ್ರಮಾಚರಿಸಿದೆ.

ಚಿತ್ರತಂಡದವರಿಗೆ ಊಟ ಬಡಿಸಿದ ಚಿಯಾನ್​​ ವಿಕ್ರಮ್​​: ಸ್ಟಾರ್​ ನಿರ್ದೇಶಕ - ನಟ ಕಾಂಬಿನೇಶನ್​​ನ​​ ತಂಗಲಾನ್ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ತೆರೆಗಪ್ಪಳಿಸಿತ್ತು. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಸ್ವೀಕರಿಸಿ ಬಾಕ್ಸ್ ಆಫೀಸ್​​ನಲ್ಲಿಯೂ ಕಮಾಲ್​​ ಮಾಡಿದೆ. ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈ ಹಿನ್ನೆಲೆ ವಿಕ್ರಮ್ ಅವರು ತಂಗಲಾನ್​​​ ಚಿತ್ರತಂಡಕ್ಕೆ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಸಾಂಪ್ರದಾಯಿಕ ಸಮಾರಂಭದಲ್ಲಿ ಸ್ವತಃ ನಾಯಕ ನಟ ಚಿಯಾನ್​​ ವಿಕ್ರಮ್ ಚಿತ್ರತಂಡದವರಿಗೆ ಊಟ ಬಡಿಸೋ ಮೂಲಕ ಗಮನ ಸೆಳೆದಿದ್ದಾರೆ.

100 ಕೋಟಿ ರೂ.ನ ಕ್ಲಬ್​​ ಸೇರುವ ವಿಶ್ವಾಸ: 'ತಂಗಲಾನ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 70 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಚಿತ್ರ ಶೀಘ್ರದಲ್ಲೇ 100 ಕೋಟಿ ರೂ.ನ ಕ್ಲಬ್​​ ಸೇರುವ ವಿಶ್ವಾಸವಿದೆ. ವಿಕ್ರಮ್ ಪಾತ್ರ ಮತ್ತು ಅವರ ನಟನಾ ಸಾಮರ್ಥ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಳವಿಕಾ ಮೋಹನನ್ ಮತ್ತು ಪಾರ್ವತಿ ಕೂಡ ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಸ್ವೀಕರಿಸಿದ್ದಾರೆ. ಜಿ.ವಿ ಪ್ರಕಾಶ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ತಂಗಲಾನ್ ಸಕ್ಸಸ್​ ಪಾರ್ಟಿ (ETV Bharat)

ಇದನ್ನೂ ಓದಿ: ಜಯಸೂರ್ಯ, ಸಿದ್ದಿಕ್​ ವಿರುದ್ಧ ದೂರು: ಮಲಯಾಳಂ ಫಿಲ್ಮ್ ಪಾಲಿಸಿ ಕಮಿಟಿಯಿಂದ ಕೆಳಗಿಳಿದ ಶಾಸಕ ಮುಖೇಶ್​​ - Case Against Actor Jayasurya

ಈ ಯಶಸ್ಸಿನ ಹಿನ್ನೆಲೆ ಚಿತ್ರತಂಡ ಮತ್ತು ಅವರ ಕುಟುಂಬಗಳಿಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ಚಿಯಾನ್​​ ವಿಕ್ರಮ್​​ ತಮ್ಮ ಕೈಯಿಂದಲೇ ಊಟ ಬಡಿಸೋ ಮುಖೇನ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಾಳೆ ಎಲೆ ಮೇಲೆ ಊಟ ಬಡಿಸಲಾಯಿತು. ವಿಕ್ರಮ್ ಕೂಡಾ ಪಂಚೆ, ಶರ್ಟ್​ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರು. ಖ್ಯಾತ ಬಾಣಸಿಗ ಮಾದಪಟ್ಟಿ ರಂಗರಾಜ್ ಅವರು ತಂಗಲಾನ್​​ ಯಶಸ್ಸಿನ ಕೂಟಕ್ಕೆ ಆಹಾರ ತಯಾರಿಸಿದರು.

ಇದನ್ನೂ ಓದಿ: ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ಬಿಗಿ ಬಂದೋಬಸ್ತ್ - DARSHAN JUDICIAL CUSTODY

ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಯಾನ್​​ ವಿಕ್ರಮ್ ಅವರ ಅಭಿಮಾನಿಗಳ ಸಂಖ್ಯೆ ಉತ್ತರದಲ್ಲೂ ದೊಡ್ಡದಿದೆ. ತಂಗಲಾನ್​ ಚಿತ್ರದ ಹಿಂದಿ ಆವೃತ್ತಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾಯುತ್ತಿದ್ದಾರೆ. ಸೆಪ್ಟೆಂಬರ್ 6 ರಂದು ಹಿಂದಿಯಲ್ಲೂ ತಂಗಲಾನ್​​ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.