ETV Bharat / entertainment

ದಳಪತಿ ವಿಜಯ್ ಅಭಿನಯದ 'ಗೋಟ್' ಸ್ಪೆಷಲ್​ ಶೋ​​: ಬೆ.9ರಿಂದ ಮಧ್ಯರಾತ್ರಿ 2ರವರೆಗೆ ನಿರಂತರ ಪ್ರದರ್ಶನ! - GOAT Movie Special Screening

author img

By ETV Bharat Karnataka Team

Published : Sep 4, 2024, 6:44 PM IST

Updated : Sep 4, 2024, 6:57 PM IST

ಗುರುವಾರ ಬೆಳಗ್ಗೆ 9 ಗಂಟೆಗೆ ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ದಳಪತಿ ವಿಜಯ್ ಅಭಿನಯದ 'ಗೋಟ್' ಪ್ರದರ್ಶನ ಪ್ರಾರಂಭಿಸಲಿದೆ. ಬೆಳಗ್ಗೆ 9 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ 5 ವಿಶೇಷ ಶೋಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದೆ. ನಾಳೆ ಮಾತ್ರ ಈ ವಿಶೇಷ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ, 2 ದಿನಗಳ ಕಾಲ (ಸೆ.5 ಮತ್ತು 6) ವಿಶೇಷ ಪ್ರದರ್ಶನಕ್ಕೆ ಚಿತ್ರತಂಡ ಅನುಮತಿ ಕೇಳಿತ್ತು.

GOAT Movie Special Screening
'ಗೋಟ್' ವಿಶೇಷ ಪ್ರದರ್ಶನಕ್ಕೆ ಅವಕಾಶ (Film Poster)

ಹೈದರಾಬಾದ್: ಸೌತ್​ ಸೂಪರ್​​ ಸ್ಟಾರ್ ದಳಪತಿ ವಿಜಯ್ ಮುಖ್ಯಭೂಮಿಕೆಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರ ಗುರುವಾರ (ಸೆಪ್ಟೆಂಬರ್ 5) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಇದೀಗ ತಮಿಳುನಾಡು ಸರ್ಕಾರವು ಸಿನಿಮಾದ 'ಮುಂಜಾನೆ ಶೋ'ಗೆ ವಿಶೇಷ ಆದೇಶ ಹೊರಡಿಸಿದೆ. ಬೆಳಗ್ಗೆ 9 ಗಂಟೆಗೆ ಶೋ ಶುರುವಾಗಲಿದೆ. ಸರ್ಕಾರದ ವಿಶೇಷ ಆದೇಶವು 9 ರಿಂದ 2ರವರೆಗೆ (ನಾಳೆ ಮಧ್ಯರಾತ್ರಿ) ನಿರಂತರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ವಿಜಯ್ ಅವರ ಅಭಿಮಾನಿಗಳಿಗೆ ಒಂದು ಸಂಪೂರ್ಣ ದಿನ ಸಿನಿಮೀಯ ಹಬ್ಬ ಎಂದೇ ಹೇಳಬಹುದು.

'GOAT' ಈ ಸಾಲಿನ ಬಿಗ್​​​ ಬಜೆಟ್​​​​ ಮತ್ತು ಬಹುನಿರೀಕ್ಷಿತ ಪ್ರಾಜೆಕ್ಟ್​​. ಚಿತ್ರದ ಬಜೆಟ್​​ ಅಂದಾಜು 400 ಕೋಟಿ ರೂಪಾಯಿ. ಆ್ಯಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್​ ಸಿನಿಮಾದಲ್ಲಿ ವಿಜಯ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ಮತ್ತು ಮಗನ ಪಾತ್ರ ನಿರ್ವಹಿಸಿದ್ದಾರೆ. ಆ್ಯಕ್ಷನ್​​ ಪ್ಯಾಕ್ಡ್ ಸಿನಿಮಾದಲ್ಲಿ ಹಲವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯಿದೆ. ಚಿತ್ರದ ತಾರಾಬಳಗದಲ್ಲಿ ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಸ್ನೇಹ, ಲೈಲಾ, ಮೀನಾಕ್ಷಿ ಚೌಧರಿ ಸೇರಿದಂತೆ ಹಲವರು ಇದ್ದಾರೆ. ಇದು ಸಿನಿಮಾ ಸುತ್ತಲಿನ ಉತ್ಸಾಹ ಹೆಚ್ಚಿಸಿದೆ.

ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದು, ಸಾಂಗ್ಸ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿವೆ. ಚಿತ್ರದ ನಾಲ್ಕನೇ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸಿಬಿಎಫ್​​​ಸಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಈ ಸಿನಿಮಾ ಸುಮಾರು 3 ಗಂಟೆಗಳ ಅವಧಿಯನ್ನು ಹೊಂದಿದೆ. ಚಿತ್ರ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಲಿದೆ.

ಇದನ್ನೂ ಓದಿ: ತೆಲುಗು ರಾಜ್ಯಗಳಲ್ಲಿ ಪ್ರವಾಹ: ಪರಿಹಾರ ಕಾರ್ಯಕ್ಕೆ 6 ​​ಕೋಟಿ ರೂ. ಘೋಷಿಸಿದ ಡಿಸಿಎಂ ಪವನ್​ ಕಲ್ಯಾಣ್​​ - Pawan Kalyan Donation

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ವರದಿ ಪ್ರಕಾರ, ಚಿತ್ರ ಸುಮಾರು 1 ಮಿಲಿಯನ್ ಅಡ್ವಾನ್ಸ್​​ ಟಿಕೆಟ್‌ಗಳು (ಮೊದಲ ದಿನಕ್ಕೆ) ಮಾರಾಟವಾಗಿವೆ. ಚಿತ್ರ ವಿಶ್ವದಾದ್ಯಂತ ಅಡ್ವಾನ್ಸ್​​ ಟಿಕೆಟ್​​​ ಬುಕಿಂಗ್‌ ವಿಷಯದಲ್ಲಿ 50 ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ವರ್ಷದ ಬ್ಲಾಕ್‌ಬಸ್ಟರ್ ಲಿಯೋ ನಂತರ ಈ ಮೈಲಿಗಲ್ಲನ್ನು ಸಾಧಿಸಿದ ವಿಜಯ್ ಅವರ ಸತತ ಎರಡನೇ ಚಿತ್ರ ಇದಾಗಿದೆ. ಲಿಯೋ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಬಾಕ್ಸ್​ ಆಫೀಸ್​ನಲ್ಲಿ ಬಹುಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ಇದೀಗ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ಸಿನಿಮಾ ಮೇಲೂ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್​ವುಡ್​ನಲ್ಲೂ ಕಮಿಟಿ ರಚಿಸಿ : ಸಿಎಂಗೆ FIRE ಒತ್ತಾಯ - FIRE Urges To Form Committee

Last Updated : Sep 4, 2024, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.