ಚೆನ್ನೈ(ತಮಿಳುನಾಡು): ಇತ್ತೀಚೆಗಷ್ಟೇ ತಮಿಳಿನ ಜನಪ್ರಿಯ ನಟ ಜಯಂ ರವಿ ತಮ್ಮ ವಿಚ್ಛೇದನ ಘೋಷಿಸಿದ್ದಾರೆ. 15 ವರ್ಷಗಳ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಜಯಂ ರವಿ ಮತ್ತು ಪತ್ನಿ ಆರತಿ ಸೆಪ್ಟೆಂಬರ್ 9ರಂದು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಇದು ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿದೆ. ಕೆಲವೇ ದಿನಗಳಲ್ಲಿ, ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಇಂದು ನಟ ಜಯಂ ರವಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಚೆನ್ನೈನ ಸತ್ಯಂ ಥಿಯೇಟರ್‌ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಂ ರವಿ, ಗಾಸಿಪ್‌ಗಳ ನಡುವೆ ಕೆನಿಶಾ ಅವರ ಖ್ಯಾತಿಯನ್ನು ಹಾಳು ಮಾಡಬೇಡಿ ಎಂದು ಜನರನ್ನು ಒತ್ತಾಯಿಸಿದರು. "ಬದುಕಿ ಮತ್ತು ಬದುಕಲು ಬಿಡಿ. ಇಲ್ಲಿ ಯಾರ ಹೆಸರನ್ನೂ ಎಳೆಯಬೇಡಿ. ಜನರು ರ್ಯಾಂಡಮ್ ಆಗಿ ಮಾತನಾಡುತ್ತಿದ್ದಾರೆ. ಅಂತಹ ಕೆಲಸದಲ್ಲಿ ತೊಡಗಬೇಡಿ. ನಿಮ್ಮ ವೈಯಕ್ತಿಕ ಜೀವನವು ವೈಯಕ್ತಿಕವಾಗಿರಲಿ" ಎಂದು ತಿಳಿಸಿದ್ದಾರೆ.
ಈ ವೇಳೆ, ಗಾಯಕಿ ಕೆನಿಶಾ ಫ್ರಾನ್ಸಿಸ್ ಸಾಧನೆಗಳನ್ನು ಒತ್ತಿ ಹೇಳಿದರು. "ಅವರು 600 ಸ್ಟೇಜ್ ಶೋಗಳಲ್ಲಿ ಹಾಡಿರುವ ಜನಪ್ರಿಯ ಗಾಯಕಿ. ಅವರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದವರು. ಅವರು ಅನೇಕ ಜೀವಗಳನ್ನು ಗುಣಪಡಿಸಿದವರು. ಅವರು ಪರವಾನಗಿ ಪಡೆದ ಮನಶ್ಶಾಸ್ತ್ರಜ್ಞರು. ದಯವಿಟ್ಟು ಅವರ ಹೆಸರನ್ನು ಇಲ್ಲಿ ತರಬೇಡಿ" ಎಂದು ತಿಳಿಸಿದರು.
Grateful for your love and understanding.
— Jayam Ravi (@actor_jayamravi) September 9, 2024
Jayam Ravi pic.twitter.com/FNRGf6OOo8
ಈ ಆಧಾರರಹಿತ ವದಂತಿಗಳು ನಮ್ಮ ಯೋಜನೆಗಳಿಗೆ ಸಮಸ್ಯೆ ಸೃಷ್ಟಿಸಬಹುದು ಎಂದು ಮತ್ತಷ್ಟು ಕಳವಳ ವ್ಯಕ್ತಪಡಿಸಿದರು. "ಕೆನಿಶಾ ಮತ್ತು ನಾನು ಭವಿಷ್ಯದಲ್ಲಿ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದೇವೆ. ಅದು ನಮ್ಮ ಗುರಿಯಾಗಿದೆ. ನಾವು ಅನೇಕ ಜನರಿಗೆ ಸಹಾಯ ಮಾಡಲು ಬಯಸುತ್ತೇವೆ. ದಯವಿಟ್ಟು ಅದನ್ನು ಹಾಳು ಮಾಡಬೇಡಿ. ಯಾರೂ ಅದನ್ನು ಹಾಳುಮಾಡಲು ಸಾಧ್ಯವಿಲ್ಲ. ಅನಗತ್ಯವಾಗಿ ಯಾರ ಹೆಸರನ್ನೂ ತರಬೇಡಿ" ಎಂದು ಕೇಳಿಕೊಂಡರು.
ಕೆಲ ದಿನಗಳ ಹಿಂದಷ್ಟೇ ಜಯಂ ರವಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಆರತಿ ಅವರಿಂದ ಬೇರ್ಪಡಲು ನಿರ್ಧರಿಸಿರುವುದಾಗಿ ಘೋಷಿಸಿದರು. "ಬಹಳ ಆಲೋಚನೆ ಮಾಡಿ, ಚರ್ಚೆಗಳ ನಂತರ, ಆರತಿ ಅವರಿಂದ ಬೇರೆಯಾಗುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರ ತರಾತುರಿಯಲ್ಲಿ ಆಗಿದ್ದಲ್ಲ. ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದು, ಪ್ರತಿಯೊಬ್ಬರ ಹಿತಾಸಕ್ತಿಗಳನ್ನು ಪರಿಗಣಿಸಲಾಗಿದೆ" ಎಂದು ತಿಳಿಸಿದ್ದರು. 2009ರ ಜೂನ್ನಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಜಯಂ ರವಿ ಮತ್ತು ಆರತಿ ಅವರಿಗೆ ಆರವ್ ಮತ್ತು ಅಯಾನ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.