ETV Bharat / entertainment

ಬಹುಕಾಲದ ಗೆಳೆಯನನ್ನು ವರಿಸಿದ ನಟಿ ತಾಪ್ಸಿ ಪನ್ನು: ಪ್ರಿ ವೆಡ್ಡಿಂಗ್​ ಫೋಟೋ ಹಂಚಿಕೊಂಡ ಸಹೋದರಿ - Taapsee Pannu marries Mathias Boe - TAAPSEE PANNU MARRIES MATHIAS BOE

ಈ ಜೋಡಿಗಳು ತಮ್ಮ ಈ ವಿಶೇಷ ದಿನಕ್ಕೆ ಮಾಧ್ಯಮದ ಪ್ರಚಾರ ಬೇಡ ಎಂದು ನಿರ್ಧರಿಸಿದ್ದು, ತಮ್ಮ ಸಂಬಂಧದ ಕುರಿತು ಖಾಸಗಿತನಕ್ಕೆ ಮೊದಲಿನಿಂದಲೂ ಆದ್ಯತೆ ನೀಡಿಕೊಂಡೇ ಬಂದಿದೆ.

Taapsee Pannu marries longtime boyfriend Mathias Boe with  intimate affair

author img

By ETV Bharat Karnataka Team

Published : Mar 25, 2024, 5:10 PM IST

ಹೈದರಾಬಾದ್​: ವಿಶೇಷ ಪಾತ್ರಗಳ ಮೂಲಕವೇ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಹೆಚ್ಚು ಸದ್ದಿಲ್ಲದೇ ಕೇವಲ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಉದಯಪುರದಲ್ಲಿ ಮದುವೆ ಆಗಿದ್ದಾರೆ. ಈ ಖಾಸಗಿ ವಿವಾಹ ಸಮಾರಂಭದಲ್ಲಿ ಪಾವೈಲ್ ಗುಲಾಟಿ ಮತ್ತು ಅನುರಾಗ್​ ಕಶ್ಯಪ್​ ಭಾಗಿಯಾಗಿದ್ದರು.

ತಾಪ್ಸಿ- ಮಧಿಯಾಸ್​ ವಿವಾಹ ಮಾರ್ಚ್​ 23ರಂದೇ ನಡೆದಿದೆ. ಮಾರ್ಚ್​ 20 ರಿಂದಲೇ ಈ ಮದುವೆ ಪೂರ್ವ ಸಮಾರಂಭದ ಸಿದ್ದತೆ ಆರಂಭವಾಗಿದ್ದವು. ಕುಟುಂಬಸ್ಥರು ಮತ್ತು ಸ್ನೇಹಿತರು ಬುಧವಾರದಿಂದಲೇ ಮದುವೆ ಸಿದ್ದತೆಯಲ್ಲಿ ಭಾಗಿಯಾಗಿದ್ದರು ಎಂದು ನ್ಯೂಸ್​ ವೈರ್​​ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉದಯಪುರದಲ್ಲಿ ಖಾಸಗಿ ಸಮಾರಂಭ ನಡೆದಿದೆ. ಈ ಜೋಡಿಗಳು ತಮ್ಮ ಈ ವಿಶೇಷ ದಿನಕ್ಕೆ ಮಾಧ್ಯಮದ ಯಾವುದೇ ಪ್ರಚಾರ ಬೇಡ ಎಂದು ನಿರ್ಧರಿಸಿದ್ದರು. ಈ ಮದುವೆ ವಿಚಾರ ಕುರಿತು ಇಬ್ಬರೂ ಖಾಸಗಿತನ ಬಯಸಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ಈ ಮದುವೆ ಕಾರ್ಯಕ್ರಮದಲ್ಲಿ ಕೆಲವೇ ಬಾಲಿವುಡ್​ ಸೂಪರ್​ಸ್ಟಾರ್​ಗಳು ಭಾಗಿಯಾಗಿದ್ದರು. ಮೂಲಗಳ ಪ್ರಕಾರ, ತಾಪ್ಸಿ ಅವರ 'ತಪ್ಪಡ್'​ ಚಿತ್ರದ ಸಹ ನಟಿ 'ಪಾವೈಲ್ ಗುಲಾಟಿ' ಮದುವೆ ಸಮಾರಂಭದಲ್ಲಿ ಹಾಜರಿದ್ದರು. ತಾಪ್ಸಿ ಜೊತೆಗೆ 'ಮನ್ಮಾರ್ಜಿಯನ್'​​ ಮತ್ತು 'ದುಬಾರಾ' ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅನುರಾಗ್​ ಕಶ್ಯಪ್​ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕನಿಕಾ ಧಿಲೊನ್​ ಮತ್ತು ಆಕೆಯ ಗಂಡ ಹಿಮಾಂಶು ಶರ್ಮಾ ಕೂಡ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಕನಿಕಾ ಮದುವೆ ಅನೇಕ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹಿಮಾಂಶು ನೀಲಿ ಮತ್ತು ಬಿಳಿ ಕುರ್ತಾಗೆ ಪೈಜಾಮಾ ಮತ್ತು ಜಾಕೆಟ್​ ಧರಿಸಿದ್ದಾರೆ. ಪಾವೈಲಿ ಕೂಡ ಪ್ರಿ ವೆಡ್ಡಿಂಗ್​ ಫೋಟೋ ಹಂಚಿಕೊಂಡಿದ್ದು, ಚಿತ್ರದಲ್ಲಿ ತಾಪ್ಸಿಯ ಸಹೋದರಿ ಶಗುನ್ ಪನ್ನು ಮತ್ತು ಆಕೆಯ ಸೋದರ ಸಂಬಂಧಿ ಇವಾನಿಯಾ ಪನ್ನು. ಅಭಿಲಾಷ್ ಥಪ್ಲಿಯಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಅವರು ಕೂಡ ಕಂಡು ಬಂದಿದ್ದಾರೆ.

ವೃತ್ತಿಯಲ್ಲಿ ನಟಿ ತಾಪ್ಸಿ ತಮ್ಮ ಮುಂದಿನ ಚಿತ್ರ 'ಫಿರ್​ ಆಯಿ ಹಸೀನ್​ ದಿಲ್ರುಬಾ'ದಲ್ಲಿ ನಟ ವಿಕ್ರಾಂತ್​​ ಮೆಸ್ಸಿ ಮತ್ತು ಸನ್ನಿ ಕುಶಲ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಫಿರ್​ ಆಯಿ ಹಸೀನ್​ ದಿಲ್ರುಬಾ' ಸಿನಿಮಾ 'ಹಸೀನ್​ ದಿಲ್ರುಬಾ' ಚಿತ್ರದ ಸಿಕ್ವೇನ್ಸ್​ ಆಗಿದೆ. 2021ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದ್ದ 'ಹಸೀನ್​ ದಿಲ್ರುಬಾ' ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇದನ್ನೂ ಓದಿ: ರಾಮಾಯಣ: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸಿದ ಯಶ್​, ರಣ್​ಬೀರ್, ಸಾಯಿ ಪಲ್ಲವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.