ETV Bharat / entertainment

'ಸ್ತ್ರೀ 2' ಟ್ರೇಲರ್​ ರಿಲೀಸ್: ಶ್ರದ್ಧಾ ಕಪೂರ್, ರಾಜ್​ಕುಮಾರ್​​​ ರಾವ್​ ಸಿನಿಮಾ ಮೇಲೆ ಗರಿಗೆದರಿದ ಕುತೂಹಲ - Stree 2 Trailer - STREE 2 TRAILER

ಬಹುನಿರೀಕ್ಷಿತ 'ಸ್ತ್ರೀ 2' ಟ್ರೇಲರ್ ಅನಾವರಣಗೊಂಡಿದ್ದು, ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Stree 2 Trailer Out
'ಸ್ತ್ರೀ 2' ಟ್ರೇಲರ್ ಅನಾವರಣ (Maddock Films Youtube Page)
author img

By ETV Bharat Karnataka Team

Published : Jul 18, 2024, 6:39 PM IST

ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯ ಹಾರರ್ - ಕಾಮಿಡಿ ಸಿನಿಮಾ ಸ್ತ್ರೀ ಸೀಕ್ವೆಲ್‌ ಬಿಡುಗಡೆಗೆ ಸಜ್ಜಾಗಿದೆ. ಈ ಸಾಲಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಸ್ತ್ರೀ 2'ರ ಟ್ರೇಲರ್​​ ಅನ್ನು ಇಂದು ಅನಾವರಣಗೊಳಿಸಲಾಗಿದೆ. ಮಧ್ಯಪ್ರದೇಶದ ಚಂದೇರಿಯಲ್ಲಿ ಸ್ತ್ರೀ ಸ್ಟೋರಿ ಸಾಗಲಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ಕಾತರ ವ್ಯಕ್ತಪಡಿಸಿದ್ದಾರೆ.

ಸ್ತ್ರೀ ಪುರುಷರನ್ನು ಹೆದರಿಸೋದನ್ನು ಮುಂದುವರಿಸಿದ್ದು, ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಟ್ರೇಲರ್ ಹಂಚಿಕೊಂಡ ನಾಯಕ ನಟಿ ಶ್ರದ್ಧಾ ಕಪೂರ್, "ಯೇ ರಹಾ ಟ್ರೇಲರ್, ಭಾರತದ ಬಹು ನಿರೀಕ್ಷಿತ ಗ್ಯಾಂಗ್ ಚಂದೇರಿಯ ಆತಂಕದ ವಿರುದ್ಧ ಹೋರಾಡಲು ಮರಳಿದೆ. ಈ ವರ್ಷದ ಅತಿದೊಡ್ಡ ಹಾರರ್-ಕಾಮಿಡಿ ಸಿನಿಮಾ ವೀಕ್ಷಿಸಲು ಸಿದ್ಧರಾಗಿ. ಸ್ತ್ರೀ 2 ಟ್ರೇಲರ್​​​ ರಿಲೀಸ್​​​ ಆಗಿದೆ. 2024ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಲೆಜೆಂಡ್​​ ಹಿಂತಿರುಗಲಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಮೊದಲ ಭಾಗದ ಕೊನೆ ಕ್ಷಣದ ವಿಚಾರದಿಂದ ಸೀಕ್ವೆಲ್​​ನ ಟ್ರೇಲರ್ ಶುರುವಾಗಲಿದೆ. ಮೊದಲ ಭಾಗ ಯಶ ಕಂಡಿದ್ದ ಹಿನ್ನೆಲೆ ಮತ್ತೊಂದು ಭಾಗದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಟ್ರೇಲರ್​​ ಮೂಡಿ ಬಂದಿದೆ.

ಚಿತ್ರ ನಿರ್ಮಾಪಕರು ಈವರೆಗೆ ಪೋಸ್ಟರ್‌ಗಳ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದ್ದರು. ಸೀಕ್ವೆಲ್​​​ನ ಒಂದು ನೋಟಕ್ಕಾಗಿ ಅಭಿಮಾನಿಗಳು ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದರು. ಫೈನಲಿ ಟ್ರೇಲರ್​ ಇಂದು ಅನಾವರಣಗೊಂಡಿದೆ. ಟ್ರೇಲರ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ಓ ಸ್ತ್ರೀ ಆಗಸ್ಟ್ 15ರ ವರೆಗೆ ಕಾಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ "ಈ ಸಿನಿಮಾ ನಮ್ಮ ನಿರೀಕ್ಷೆಗಳನ್ನು ಮೀರಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಟ್ರೇಲರ್​ಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 76ನೇ ಎಮ್ಮಿ ಅವಾರ್ಡ್ಸ್: ದಿನಾಂಕ, ಸ್ಥಳ, ನಾಮನಿರ್ದೇಶನದ ಪಟ್ಟಿ ಬಿಡುಗಡೆ - Emmy Awards 2024

ಶ್ರದ್ಧಾ ಕಪೂರ್​​ ಮತ್ತು ರಾಜ್‌ಕುಮಾರ್ ರಾವ್​​ ಜೊತೆಗೆ, ಅಭಿಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ, ಅಪರಶಕ್ತಿ ಖುರಾನಾ ಸೇರಿದಂತೆ ಹಲವರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಮರ್ ಕೌಶಿಕ್ ಆ್ಯಕ್ಷನ್​​ ಕಟ್​ ಹೇಳಿರುವ ಈ ಬಹುನಿರೀಕ್ಷಿತ ಸಿನಿಮಾ ಈ ಸಾಲಿನ ಸ್ವಾತಂತ್ರ್ಯ ದಿನ - ಆಗಸ್ಟ್ 15 ರಂದು ತೆರೆ ಕಾಣಲಿದೆ. 2018ರಲ್ಲಿ ಬಂದ ಮೊದಲ ಭಾಗದಲ್ಲೂ ರಾಜ್‌ಕುಮಾರ್ ಮತ್ತು ಶ್ರದ್ಧಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರವನ್ನು ದಿನೇಶ್ ವಿಜನ್ ಒಡೆತನದ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಜಾಹ್ನವಿ ಕಪೂರ್ - Janhvi Kapoor Hospitalised

ETV Bharat Logo

Copyright © 2025 Ushodaya Enterprises Pvt. Ltd., All Rights Reserved.