ಕೊನೆಗೂ ಬಹುನಿರೀಕ್ಷೆಯಲ್ಲಿದ್ದ "ಪುಷ್ಪಾ 2" ಸಿನಿಮಾದ ಸಾಮಿ ಸಾಂಗ್ 6 ಭಾಷೆಗಳಲ್ಲಿ ಬಿಡುಗಡೆಯಾಯಿತು. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾದ 2 ನೇ ಸಾಂಗ್ ಇದಾಗಿದೆ.
ಈ ಮೊದಲು ಅಲ್ಲು ಅರ್ಜುನ್ನ 'ಪುಷ್ಪ ಪುಷ್ಪ ಪುಷ್ಪರಾಜ್' ಫುಲ್ ಸಾಂಗ್ ಬಿಡುಗಡೆಗೊಂಡು ಅಭಿಮಾನಿಗಳ ಹರುಷಕ್ಕೆ ಕಾರಣವಾಗಿತ್ತು. ಇದಾಗಿ ಮೇ 23ಕ್ಕೆ ಸಿನಿಮಾದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಶ್ರೀವಲ್ಲಿ ಪುಷ್ಪರಾಜ್ ಜೊತೆ ರೊಮ್ಯಾನ್ಸ್ ಮಾಡುವ ಕ್ಲೂ ಬಿಟ್ಟಿದ್ದರು. ಅದರಂತೆ ಇಂದು ಬೆಳಗ್ಗೆ 11.07 ಕ್ಕೆ ಬಿಡುಗಡೆಯಾದ ಪುಷ್ಪಾ 2 ಕಪಲ್ ಸಾಂಗ್ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದೆ.
6 ಭಾಷೆಗಳಲ್ಲಿ ರಿಲೀಸ್: ಸಾಮಿ ಸಾಮಿ ಸಾಂಗ್ ಒಟ್ಟು 6 ಭಾಷೆಯಲ್ಲಿ ಬಿಡುಗಡೆಯಾಗಿದೆ. ಈ ಸಾಂಗ್ನಲ್ಲಿ ರಿಹರ್ಸಲ್ನಲ್ಲಿ ನಾಯಕ, ನಾಯಕಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ನೋಡಾಕ', ತೆಲುಗುವಿನಲ್ಲಿ 'ಸೋಸೋಕಿ', ತಮಿಳಲ್ಲಿ 'ಸೋಡಾನ' ಹಿಂದಿಯಲ್ಲಿ 'ಅಂಗಾರೋನ್ ಕಾ', ಮಲಯಾಳಂನಲ್ಲಿ 'ಕಂಡಾಲೋ', ಬೆಂಗಾಳಿಯಲ್ಲಿ 'ಆಗೂನರ್' ಎಂಬ ಲಿರಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ತೆಲುಗಿನಲ್ಲಿ 2ಮಿಲಿಯನ್ ವ್ಯೂವ್ಸ್ ದಾಟಿದೆ.
ರಶ್ಮಿಕಾ ಪೋಸ್ಟ್: ಇನ್ಸ್ಟಾಗ್ರಾಮ್ನಲ್ಲಿ ಸಾಂಗ್ ಬಿಡುಗಡೆ ಬಗ್ಗೆ ರಶ್ಮಿಕಾ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾರೆ. ಈ ಹಾಡು ಮತ್ತೆ ಇಡೀ ದೇಶಾದ್ಯಂತ ಸದ್ದು ಮಾಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಅದು ಇಲ್ಲಿದೆ..
ಇದು ಜೋಡಿಯ ಹಾಡು..
ಇದು ಕುಟುಂಬದ ಹಾಡು..
ಇದು ಒಡಹುಟ್ಟಿದವರ ಹಾಡು..
ಇದು ಗೆಳೆಯನ ಹಾಡು..
ಇದು ಬೆಸ್ಟೀಸ್ ಹಾಡು.. ಈ ಹಾಡಿಗೆ ನಾನು ನೃತ್ಯ ಮಾಡುವುದನ್ನು ನೀವು ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ.! ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮ ಮುಂದೆ ಈ ಹಾಡನ್ನು ಪ್ರಸ್ತುತಪಡಿಸುತ್ತೇವೆ' ಎಂದು ಬರೆದು ಪೋಸ್ಟ್ವೊಂದನ್ನು ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಪುಷ್ಪ 2 ಚಿತ್ರದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋ ಅನಾವರಣ - Pushpa 2 Songs