ETV Bharat / entertainment

ಹುಬ್ಬಳ್ಳಿ ಶ್ರೀಸಿದ್ದಾರೂಢ ಮಠದ ಧರ್ಮದರ್ಶಿಯಿಂದ ದರ್ಶನ್​​​​​ಗೆ ಸಿದ್ದಾರೂಢರ ಚರಿತ್ರೆ ಪುಸ್ತಕ ರವಾನೆ - Siddharoodha Charitre to Darshan

author img

By ETV Bharat Entertainment Team

Published : Aug 1, 2024, 1:06 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್​ ಅವರಿಗೆ ಶ್ರೀ ಸಿದ್ದಾರೂಢ ಮಠದಿಂದ ಸಿದ್ದಾರೂಢರ ಚರಿತ್ರೆ ಪುಸ್ತಕವನ್ನು ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಶ್ರೀಮಠದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರು ಮಾಹಿತಿ ನೀಡಿದ್ದಾರೆ.

Actor Darshan
ನಟ ದರ್ಶನ್​ (ETV Bharat)

ಹುಬ್ಬಳ್ಳಿ (ಧಾರವಾಡ): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಶ್ರೀ ಸಿದ್ದಾರೂಢ ಮಠದ ಟ್ರಸ್ಟಿಯೊಬ್ಬರು ಹುಬ್ಬಳ್ಳಿ 'ಸಿದ್ದಾರೂಢರ ಚರಿತ್ರೆ ಪುಸ್ತಕ' ಹಾಗೂ ಅಂಗಾರವನ್ನು ಕೊರಿಯರ್ ಮೂಲಕ ಕಳುಹಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಸತ್ಯ ಎಂದು ಧರ್ಮದರ್ಶಿಗಳು ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ನೀಡಿದ ಶ್ರೀಮಠದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ: ಈ ಕುರಿತಂತೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಶ್ರೀಮಠದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರು, ಈ ಹಿಂದೆ ದರ್ಶನ್​​​ ಶ್ರೀಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೊರಿಯರ್ ಮೂಲಕ ಸಿದ್ದಾರೂಢರ ಚರಿತ್ರೆ ಪುಸ್ತಕ ಹಾಗೂ ಅಂಗಾರವನ್ನು ಕಳುಹಿಸಿದ್ದೇವೆ ಎಂದು ದೃಢಪಡಿಸಿದ್ದಾರೆ.

'ಮನಶಾಂತಿ ದೊರಕಲಿದೆ': ಶ್ರೀ ಸಿದ್ದಾರೂಢರ ಕಥಾಮೃತ ಪುಸ್ತಕ 400 ಪುಟಗಳನ್ನು ಒಳಗೊಂಡಿದೆ. ಈ ಪುಸ್ತಕ ಓದುವುದರಿಂದ ಮಾನಸಿಕ ಖಿನ್ನತೆ ತೊಲಗುವುದರ ಜೊತೆಗೆ ಮಾನಸಿಕ ಶಾಂತಿ ಹಾಗೂ ನೆಮ್ಮದಿ ಸಿಗಲಿದೆ. ಶ್ರೀ ಸಿದ್ದಾರೂಢರ ಜೀವನದ ಹಲವು ಘಟನೆಗಳನ್ನು ‌ಒಳಗೊಂಡಿರುವುದರಿಂದ, ಆಧ್ಯಾತ್ಮಿಕದತ್ತ ಒಲವು ಮೂಡಲಿದ್ದು, ಮನಶಾಂತಿಯೂ ದೊರಕಲಿದೆ ಎಂದು ಅವರು ತಿಳಿಸಿದರು.

ದರ್ಶನ್​ಗೆ ಒಳ್ಳೆಯದಾಗಲಿ: ಕಳೆದ ಕೆಲ ದಿನಗಳಿಂದ ದರ್ಶನ್​​ ಜೈಲಿನಲ್ಲಿ ಒಬ್ಬಂಟಿಯಾಗಿದ್ದಾರೆ. ಏಕಾಂಗಿಯಾಗಿ ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದರಿಂದ ಶ್ರೀ ಸಿದ್ದಾರೂಢರ ಪುಸ್ತಕ ಕಳುಹಿಸುವುದು ಸೂಕ್ತ ಅನಿಸಿತು. ಅಲ್ಲದೇ ದರ್ಶನ್​​ ಅವರು ಸಿದ್ದಾರೂಢ ಸ್ವಾಮೀಜಿಗಳ ಭಕ್ತರು. ಹಲವು ಬಾರಿ ಹುಬ್ಬಳ್ಳಿಗೆ ಬಂದಾಗ ಶ್ರೀಮಠಕ್ಕೆ ಭೇಟಿ ಕೊಟ್ಟು ಅಜ್ಜನ ಗದ್ದುಗೆ ದರ್ಶನ‌ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರ ಏನು ಆಗಲಿದೆ ಎಂಬುದನ್ನು‌ ನಾವು ಹೇಳಲು ಸಾಧ್ಯವಿಲ್ಲ. ಆದರೆ, ಸಿದ್ದಾರೂಢರ ಕೃಪೆಯಿಂದ ಅವರಿಗೆ ಒಳ್ಳೆಯದಾಗಲಿ ಎಂದು ಪುಸ್ತಕ ಹಾಗೂ ಅಂಗಾರ ಕಳುಹಿಸಿರುವುದಾಗಿ ಈಟಿವಿ ಭಾರತಕ್ಕೆ ಡಾ. ಗೋವಿಂದಪ್ಪ ಮಣ್ಣೂರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮನೆಯೂಟಕ್ಕೆ ದರ್ಶನ್​ ಅರ್ಜಿ: ಎಲ್ಲಾ ವಿಚಾರಣಾಧೀನ ಕೈದಿಗಳು ಒಂದೇ ಎಂದ ಹೈಕೋರ್ಟ್​ - DARSHAN PLEA FOR HOME FOOD

ನಟರ ಪ್ರತಿಕ್ರಿಯೆಗಳು: ಇನ್ನೂ ದರ್ಶನ್​ ಪ್ರಕರಣದ ಬಗ್ಗೆ ಚಿತ್ರರಂಗದ ಗಣ್ಯರು ಪ್ರತಿಕ್ರಿಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ನಟ-ರಾಜಕಾರಣಿ ಕುಮಾರ್ ಬಂಗಾರಪ್ಪ, ರೇಣುಕಾಸ್ವಾಮಿ ಕುಟುಂಬಕ್ಕಿದು ತುಂಬಲಾರದ ನಷ್ಟ. ದರ್ಶನ್​​ ಅವರ ಪ್ರಕರಣ ನ್ಯಾಯಾಲಯದಲ್ಲಿದ್ದು, ಈಗ ಮಾತನಾಡೋದು ಸೂಕ್ತವಲ್ಲ. ಎಲ್ಲವನ್ನೂ ಕನೂನು ನೋಡಿಕೊಳ್ಳಲಿದೆ. ತಪ್ಪು ಮಾಡಿದ್ದೇ ಆದ್ರೆ ಅವರ ಶಿಕ್ಷೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲಿ. ಕೆಳಮಟ್ಟದಿಂದ ಬಂದು ಸೂಪರ್ ಸ್ಟಾರ್ ಆದ ದರ್ಶನ್​ ಅವರಿಗೆ ಹೀಗಾಗಬಾರದಿತ್ತು ಎಂದು ತಿಳಿಸಿದ್ದರು.

ಇದನ್ನೂ ಓದಿ: 'ದರ್ಶನ್​ಗೆ ಹೀಗಾಗಬಾರದಿತ್ತು': ಪ್ರಕರಣದ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದಿಷ್ಟು - Kumar Bangarappa on Darshan

ಇನ್ನೂ ನಟ ಚೇತನ್ ಅಹಿಂಸಾ ಮಾತನಾಡಿ, ನಟ ದರ್ಶನ್ ಅವರು​​ ಅಪರಾಧಿ ಅಲ್ಲ. ಆದ್ರೆ ಅವರ ಮೇಲೆ ಆರೋಪಗಳಿವೆ. ದರ್ಶನ್ ಜೊತೆ ಅಷ್ಟೊಂದು ಒಡನಾಟವಿಲ್ಲ. ಸ್ಟಾರ್ ಸಂಸ್ಕೃತಿ ಹೋಗಬೇಕಿದೆ. ಸಿನಿಮಾ ಯಶಸ್ವಿ ಆಗೋದು ಕಂಟೆಂಟ್​​​ನಿಂದ ಹೊರತು ಸ್ಟಾರ್ ಕಲ್ಚರ್​​​ನಿಂದ ಅಲ್ಲ. ಈ ಪ್ರಕರಣ ಚಿತ್ರರಂಗದ ಮತ್ತು ಅಭಿಮಾನಿಗಳ ಮೇಲೆ ಪರಿಣಾಮ ಬೀಎಉತ್ತದೆ ಎಂದು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.