ETV Bharat / entertainment

ಸಮಂತಾ ಜಾಗಕ್ಕೆ ಶ್ರೀಲೀಲಾ: ಅಂದು 'ಊ ಅಂಟಾವಾ' ಇಂದು 'ಕಿಸ್ಸಿಕ್​'; ಅಲ್ಲು ಅರ್ಜುನ್​ ಜೊತೆ ಮಸ್ತ್ ಡ್ಯಾನ್ಸ್ - KISSIK SONG RELEASED

'ಪುಷ್ಪ 2: ದಿ ರೂಲ್​​' ಚಿತ್ರದ 'ಕಿಸ್ಸಿಕ್' ಹಾಡು ಅನಾವರಣಗೊಂಡಿದೆ. ಅಲ್ಲು ಅರ್ಜುನ್​ ಜೊತೆ ಶ್ರೀಲೀಲಾ ಮೈ ಬಳುಕಿಸಿದ್ದು, ಹಾಡು ಸಿನಿಮಾಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

Sreeleela Allu Arjun song release
ಕಿಸ್ಸಿಕ್​​ ಸಾಂಗ್​ ರಿಲೀಸ್​​​ (Film Poster)
author img

By ETV Bharat Entertainment Team

Published : Nov 24, 2024, 9:13 PM IST

ಸೌತ್​​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್​ಗಳಾದ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಅಭಿನಯದ 'ಪುಷ್ಪ 2: ದಿ ರೂಲ್​​' ಚಿತ್ರದ ಬಹುನಿರೀಕ್ಷಿತ ಸ್ಪೆಷಲ್​​ ಸಾಂಗ್ 'ಕಿಸ್ಸಿಕ್' ಶನಿವಾರ ಅನಾವರಣಗೊಂಡಿದೆ. ಪುಷ್ಪಾ ಮೊದಲ ಭಾಗದ ಸಿನಿಮಾದ 'ಊ ಅಂಟಾವಾ' ಹಾಡಿನಲ್ಲಿ ಸೌತ್​ ಸುಂದರಿ ಸಮಂತಾ ರುತ್ ಪ್ರಭು ಸೊಂಟ ಬಳುಕಿಸಿದ್ದರು. ಇದೀಗ ಸೆನ್ಸೇಶನಲ್​ ಸ್ಟಾರ್​ ಶ್ರೀಲೀಲಾ ಈ ಸಾಂಗ್​​​ನಲ್ಲಿ ಆಕರ್ಷಕವಾಗಿ ಡ್ಯಾನ್ಸ್ ಮಾಡಿದ್ದಾರೆ. ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು ಮಾತ್ರವಲ್ಲದೇ ಬಂಗಾಳಿ ಭಾಷೆಯಲ್ಲಿಯೂ ಹಾಡು ಲಭ್ಯವಿದೆ.

'ಪುಷ್ಪ 2: ದಿ ರೂಲ್​​​' 2021ರಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್ ಹಿಟ್​ ಆದ ಪುಷ್ಪ: ದಿ ರೈಸ್​​ ಚಿತ್ರದ ಮುಂದುವರಿದ ಭಾಗ. ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದ್ದು, ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಕಳೆದ ಭಾನುವಾರ ಅದ್ಧೂರಿಯಾಗಿ ಟ್ರೇಲರ್​​ ಅನಾವರಣಗೊಂಡಿತ್ತು.

ಸುಕುಮಾರ್ ಆ್ಯಕ್ಷನ್​, ಕಟ್​ ಹೇಳಿರುವ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಟ ಫಹಾದ್​ ಫಾಸಿಲ್​​ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರ ಜೊತೆ ಜಗಪತಿ ಬಾಬು, ರಾವ್ ರಮೇಶ್, ಸುನೀಲ್, ಅನಸೂಯ, ಧನಂಜಯ್ ಸೇರಿದಂತೆ ಹಲವರು ಚಿತ್ರದಲ್ಲಿ ತಮ್ಮದೇ ಆದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಪುಷ್ಪ 2'ಕ್ಕೆ ಅಲ್ಲು ಅರ್ಜುನ್ ಪಡೆದಿದ್ದು 300 ಕೋಟಿ: ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ

ಡಿಸೆಂಬರ್ 5ರಂದು ಸಿನಿಮಾ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದ್ದು, ಪ್ರಮೋಶನ್​ ಜೋರಾಗಿಯೇ ನಡೆಯುತ್ತಿದೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಿಗ್​ ಬಜೆಟ್​ ಪ್ರಾಜೆಕ್ಟ್​ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ: 'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ ಹೇಳಿದ್ದಿಷ್ಟು

ಅಲ್ಲು ಅರ್ಜುನ್​​ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ: ವರದಿಗಳ ಪ್ರಕಾರ, ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿರುವ ಅಲ್ಲು ಅರ್ಜುನ್​​ ಈ ಚಿತ್ರಕ್ಕಾಗಿ 300 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಪುಷ್ಪ 1 ಬಳಿಕ ಅವರ ಜನಪ್ರಿಯತೆ, ಬೇಡಿಕೆ ಹೆಚ್ಚಿದ್ದು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಂಡಿಯನ್​​ ಸೂಪರ್​ ಸ್ಟಾರ್​ಗಳನ್ನು ಹಿಂದಿಕ್ಕಿದ್ದಾರೆ. ಅವರ ಮುಂದಿನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.