ETV Bharat / entertainment

'ದಿ ಗರ್ಲ್​​ಫ್ರೆಂಡ್​​​' ಪೋಸ್ಟರ್: ಒಂದಲ್ಲ, ಎರಡು ಲುಕ್ ಅನಾವರಣಗೊಳಿಸಿ ರಶ್ಮಿಕಾಗೆ ಸ್ಪೆಷಲ್ ವಿಶ್ - The Girlfriend - THE GIRLFRIEND

ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ 'ದಿ ಗರ್ಲ್​​ಫ್ರೆಂಡ್​​​' ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

The Girlfriend Posters
'ದಿ ಗರ್ಲ್​​ಫ್ರೆಂಡ್​​​' ಪೋಸ್ಟರ್
author img

By ETV Bharat Karnataka Team

Published : Apr 5, 2024, 11:05 AM IST

Updated : Apr 5, 2024, 11:26 AM IST

ರಶ್ಮಿಕಾ ಮಂದಣ್ಣ 2024ರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ನಟಿ ಕೈಯಲ್ಲಿ 4 ಚಿತ್ರಗಳಿದ್ದು, ಇದೀಗ ಒಂದು ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ದಿ ಗರ್ಲ್​​ಫ್ರೆಂಡ್​​​'ನ ಎರಡು ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ. ದಿ ಗರ್ಲ್​​ಫ್ರೆಂಡ್ ರಶ್ಮಿಕಾ ಅವರನ್ನು ಒಳಗೊಂಡ ಸೋಲೋ ಲೀಡ್​​ ಥ್ರಿಲ್ಲರ್ ಎಂದು ಹೇಳಲಾಗಿದೆ. ಚಿತ್ರ ತಯಾರಕರು ನಟಿಯ ಎರಡು ಲುಕ್‌ಗಳನ್ನು ಬಿಡುಗಡೆ ಮಾಡೋ ಮೂಲಕ ರಶ್ಮಿಕಾ ಅವರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

'ದಿ ಗರ್ಲ್​​ಫ್ರೆಂಡ್​​​' ಚಿತ್ರದ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲಚನಚಿತ್ರ ನಿರ್ಮಾಣ ಸಂಸ್ಥೆ 'ಗೀತಾ ಆರ್ಟ್ಸ್' ಇಂದು ಎರಡು ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಚಿತ್ರದಿಂದ ನಟಿಯ ನೋಟವನ್ನು ಪರಿಚಯಿಸಿದ ಚಿತ್ರ ತಯಾರಕರು "ಜನ್ಮದಿನದ ಶುಭಾಶಯಗಳು ರಶ್ಮಿಕಾ" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ..

ಪೋಸ್ಟರ್​ಗಳಲ್ಲಿ ನಟಿ ಕಾಲೇಜು ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಸಂಪ್ರದಾಯವೂ ಅಲ್ಲ, ಇತ್ತ ಕಂಪ್ಲೀಟ್​​ ಮಾರ್ಡನ್​ ಕೂಡ ಅಲ್ಲ ಎಂಬಂತೆ ಸೆಮಿ ಮಾರ್ಡನ್ ಲುಕ್​ನಲ್ಲಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸರಳ ಸುಂದರಿಯಂತ ನೋಟ ಈ ಪೋಸ್ಟರ್​ಗಳಲ್ಲಿದೆ. ಒಂದು ಪೋಸ್ಟರ್‌ನಲ್ಲಿ, ನೋಟ್​ಬುಕ್​ ಮತ್ತು ಪೆನ್‌ ಹಿಡಿದು ನಮ್ಮತ್ತ ನೋಡಿದ್ದಾರೆ. ಮತ್ತೊಂದರಲ್ಲಿ, ಕಾಲೇಜ್ ಬ್ಯಾಗ್​ ಹಿಡಿದು ಹೊರಟಿದ್ದಾರೆ. ಕಾಲೇಜು ಕ್ಯಾಂಪಸ್ ಸುತ್ತ ಜರುಗುವ ಕಥೆ ಎಂಬುದು ಸದ್ಯ ಅನಾವರಣಗೊಂಡಿರುವ ಪೋಸ್ಟರ್ ಹೇಳುತ್ತಿದೆ.

ರಶ್ಮಿಕಾ ಲೀಡ್​ ರೋಲ್​ನಲ್ಲಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರವನ್ನು 2023ರ ಏಪ್ರಿಲ್​​ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಮಹಿಳಾ ಕೇಂದ್ರಿತ ಚಿತ್ರವನ್ನು ಅಲ್ಲು ಅರವಿಂದ್ ಪ್ರಸ್ತುತಪಡಿಸುತ್ತಿದ್ದಾರೆ. ಈ ಹಿಂದೆ, ರಶ್ಮಿಕಾ ಅವರ ಹುಟ್ಟುಹಬ್ಬದಂದು ಟೀಸರ್ ರಿಲೀಸ್​ ಮಾಡುವುದಾಗಿ ಚಿತ್ರತಯಾರಕರು ತಿಳಿಸಿದ್ದರು. ಅದಾಗ್ಯೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ವಿಳಂಬವಾದ ಕಾರಣ, ಅಭಿಮಾನಿಗಳಿಗೀಗ ಚಿತ್ರದ ಪೋಸ್ಟರ್‌ಗಳಷ್ಟೇ ಲಭ್ಯವಾಗಿದೆ. ರಶ್ಮಿಕಾ ಬಣ್ಣ ಹಚ್ಚಿರುವ ಸಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ರಶ್ಮಿಕಾ: 'ಕಿರಿಕ್​ ಪಾರ್ಟಿ' ಬೆಡಗಿಯ ಸಿನಿಪಯಣ - HBD Rashmika Mandanna

ಈ ಹಿಂದೆ ಡಬ್ಬಿಂಗ್ ಸೆಷನ್ ಬಗ್ಗೆ ನಿರ್ದೇಶಕ ರಾಹುಲ್ ರವೀಂದ್ರನ್ ಟ್ವೀಟ್ ಮಾಡಿದ್ದರು. ರಶ್ಮಿಕಾ ಅವರು ಮೊದಲ ಬಾರಿ ಮಲಯಾಳಂ ಡಬ್ ಮಾಡಿದ್ದರೂ ಬಹಳ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ನಿರ್ದೇಶಕರು ಹೊಗಳಿದ್ದರು. ರಶ್ಮಿಕಾ 'ದಿ ಗರ್ಲ್​​ಫ್ರೆಂಡ್​​​' ಟೀಸರ್‌ಗೆ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ್ದಾರೆ. ಇಂದು ಟೀಸರ್ ಅನಾವರಣಗೊಳ್ಳಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಶೀಘ್ರವೇ ಬಿಡುಗಡೆ ಆಗಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಟಾಪ್​ 10 ಸಿನಿಮಾಗಳ ಪಟ್ಟಿ ಇಲ್ಲಿದೆ: ಮುಂದಿನ ಚಿತ್ರಗಳ್ಯಾವುವು? - Rashmika Mandanna

Last Updated : Apr 5, 2024, 11:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.