ETV Bharat / entertainment

ಸಲ್ಮಾನ್-ರಶ್ಮಿಕಾ ನಟನೆಯ 'ಸಿಖಂದರ್‌'ಗೆ ವಿಲನ್​ ಬೇಕಿದ್ದಾರೆ!: ಈ ಮೂವರಲ್ಲಿ ಯಾರಿಗೆ ಚಾನ್ಸ್? - Villain For Sikandar - VILLAIN FOR SIKANDAR

ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಖಂದರ್'​​ ತಂಡ ವಿಲನ್​​ ಹುಡುಕಾಟದಲ್ಲಿದೆ.

Salman khan
ಸಲ್ಮಾನ್ ಖಾನ್ (ETV Bharat)
author img

By ETV Bharat Karnataka Team

Published : May 26, 2024, 10:23 AM IST

ಬಾಲಿವುಡ್​​ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಆ್ಯಕ್ಷನ್-ಡ್ರಾಮಾ 'ಸಿಖಂದರ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಶೂಟಿಂಗ್ ಮುಂದಿನ ತಿಂಗಳು ಜೂನ್​​ನಲ್ಲಿ ಆರಂಭವಾಗಲಿದೆ. ಸಿಖಂದರ್ ಭಾಯ್​​​ಜಾನ್ ಅಭಿಮಾನಿಗಳಿಗೆ ಈದ್ ಉಡುಗೊರೆ ಅಂತಲೇ ಹೇಳಬಹುದು. ಹೌದು, ಚಿತ್ರ 2025ರ ಈದ್ ಸಂದರ್ಭದಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಅಮೀರ್ ಖಾನ್ ಜೊತೆ ಗಜಿನಿ ಸಿನಿಮಾ ಮಾಡಿದ್ದ ನಿರ್ದೇಶಕ ಎ.ಆರ್.ಮುರುಗದಾಸ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಸದ್ಯ ವಿಲನ್‌ ಹುಡುಕಾಟ ನಡೆಯುತ್ತಿದೆ. ಚಿತ್ರಕ್ಕಾಗಿ ಮೂವರು ಸೌತ್​​ ಸ್ಟಾರ್​​ಗಳ ಹೆಸರುಗಳು ಕೇಳಿ ಬರುತ್ತಿದೆ.

ಸಾಜಿದ್ ನಾಡಿಯಾಡ್ವಾಲಾ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ತಯಾರಾಗುತ್ತಿರುವ ಸಿಖಂದರ್‌ಗಾಗಿ ಸೌತ್​ ಸ್ಟಾರ್​ಗಳ ಹೆಸರುಗಳು ಮುಂಚೂಣಿಯಲ್ಲಿವೆ. ದಕ್ಷಿಣ ಪ್ರೇಕ್ಷಕರನ್ನು ಆಕರ್ಷಿಸಲು ಇದೊಂದು ಪ್ರಯತ್ನ ಎನ್ನಲಾಗುತ್ತಿದೆ. ಮೊದಲನೆಯದಾಗಿ, ವಾಂಟೆಡ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿರುವ ಪ್ರಕಾಶ್ ರಾಜ್ ಹಾಗು ರೋಜಾ, ಬಾಂಬೆ ನಟ ಅರವಿಂದ್ ಸ್ವಾಮಿ ಹೆಸರೂ ಕೇಳಿಬಂದಿದೆ. ಸಿಖಂದರ್​ನ ವಿಲನ್ ಆಗಿ ಅರವಿಂದ್ ಸ್ವಾಮಿ ಆಯ್ಕೆಯಾದರೆ, ಇವರಿಬ್ಬರ ಕಾಂಬಿನೇಶನ್​ನ ಚೊಚ್ಚಲ ಚಿತ್ರವಾಗಲಿದೆ. ಇವರೊಟ್ಟಿಗೆ, ದಕ್ಷಿಣ ಚಿತ್ರರಂಗದ ಯಂಗ್​ ಸ್ಟಾರ್ ಕಾರ್ತಿಕೇಯ ಗುಮ್ಮಕೊಂಡ ಅವರ ಹೆಸರು ಮುಂಚೂಣಿಗೆ ಬಂದಿದೆ. 31ರ ಹರೆಯದ ಗುಮ್ಮಕೊಂಡ 2017 ರಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರೇಮಥೋ ಮೀ ಕಾರ್ತಿಕ್, ಆರ್​​ಎಕ್ಸ್ 100, ಬೆದುರುಲಂಕಾ 2012 ರಂತಹ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಸದ್ಯ ಈ ಮೂವರ ಹೆಸರು ಕೇಳಿಬರುತ್ತಿದ್ದು, ಯಾರು ವಿಲನ್​ ಎಂಬ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಕೊಡಬೇಕಿದೆ. ಆದ್ರೀಗ ಭಾಯ್​​ಜಾನ್ ಅಭಿಮಾನಿಗಳು ಸಿಖಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ಯಾರು ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna

ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ನ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರದ ನಿರ್ಮಾಪಕ. 2014ರಲ್ಲಿ ಬಿಡುಗಡೆಯಾದ 'ಕಿಕ್' ನಂತರ ಬರುತ್ತಿರುವ ಸಾಜಿದ್‌ ಮತ್ತು ಸಲ್ಮಾನ್‌ ಕಾಂಬಿನೇಶನ್​ನ ಸಿನಿಮಾವಿದು. ಸದ್ಯ ಚಿತ್ರ ಪ್ರೀ-ಪ್ರೊಡಕ್ಷನ್‌ ಹಂತದಲ್ಲಿದ್ದು, ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಯ 'ವಿಶ್ವಂಭರ'ದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ - Ashika Ranganath In Vishwambhara

ಬಹುಭಾಷೆಗಳಲ್ಲಿ ಸಕ್ರಿಯರಾಗಿರುವ ಕನ್ನಡದ ನ್ಯಾಶನಲ್​ ಕ್ರಶ್​​​ ಖ್ಯಾತಿಯ ರಶ್ಮಿಕಾ ಮಂದಣ್ಣ 2022ರಲ್ಲಿ ಗುಡ್​ಬೈ ಸಿನಿಮಾ ಮೂಲಕ​​​ ಬಾಲಿವುಡ್‌ ಪ್ರವೇಶಿಸಿದರು. ಬಳಿಕ ಮಿಷನ್ ಮಜ್ನು ಮತ್ತು ಅನಿಮಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮುಂದೆ ವಿಕ್ಕಿ ಕೌಶಲ್ ಜೊತೆ ಛಾವಾದಲ್ಲಿಯೂ ಪಾತ್ರ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.