ETV Bharat / entertainment

ಮುಂಬೈ ವಿಮಾನ ನಿಲ್ದಾಣದಲ್ಲಿ ಹಸಿರು ಉಡುಗೆಯಲ್ಲಿ ಕಂಗೊಳಿಸಿದ ಬಾಲಿವುಡ್​ ಜೋಡಿ - ಬಾಲಿವುಡ್​ ಜೋಡಿ

ಸಿದ್ದಾರ್ಥ್​​ ಮತ್ತು ಕಿಯಾರಾ ಮುಂಬೈಗೆ ಬಂದಿಳಿದಿರುವ ಲುಕ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

siddharth-malhotra-kiara-advani-twin-in-green-as-they-return-to-mumbai-watch

author img

By ETV Bharat Karnataka Team

Published : Feb 12, 2024, 12:15 PM IST

ಹೈದರಾಬಾದ್​: ಬಾಲಿವುಡ್​ನ ಪ್ರಣಯದ ಜೋಡಿ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸಾಮಾಜಿಕ ಜಾಲತಾಣ, ಸಾರ್ವಜನಿಕ ತಾಣದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ಸದಾ ಮುಂದಿರುತ್ತಾರೆ. ತಮ್ಮ ಸ್ಟೈಲಿಶ್​ ಲುಕ್​ನಿಂದ ಹಿಡಿದು ಪ್ರತಿಯೊಂದು ಅಂಶದಲ್ಲೂ ಅವರು ಗಮನ ಸೆಳೆಯುತ್ತಾರೆ. ಇದೇ ರೀತಿ ಈ ಜೋಡಿ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.

ತಮ್ಮ ರಜೆ ಸಮಯವನ್ನು ಕಳೆದುಕೊಂಡು ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಪ್ಯಾಪರಾಜಿಗಳಿಗೆ ಸೆರೆ ಸಿಕ್ಕಿದ್ದಾರೆ. ಅವರು ಬ್ಯುಸಿನೆಸ್​ ಜೊತೆಗೆ ವೈಯಕ್ತಿಕ ಸಮಯದಲ್ಲಿ ಕಾಲ ಕಳೆಯುವುದಕ್ಕೆ ಮುಂಬೈ ತೊರೆದಿದ್ದರು. ಇದೀಗ ಮರಳಿದ ಅವರು ವಿಮಾನ ನಿಲ್ದಾಣದಿಂದ ತಮ್ಮ ಕಾರಿನತ್ತ ಹೆಜ್ಜೆ ಹಾಕಿದ ಇವರಿಬ್ಬರು ಹಸಿರು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಹತ್ತಿ ಮುನ್ನಡೆಯುವ ಮುನ್ನ ಪ್ಯಾಪರಾಜಿಗಳತ್ತ ಇಬ್ಬರು ಕೈಬೀಸಿ ಹೂವಿನ ನಗೆ ಬೀರಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಿದ್ದಾರ್ಥ್​​ ಮತ್ತು ಕಿಯಾರಾ ಹಸಿರು ಮತ್ತು ಬಿಳಿ ಬಣ್ಣದ ಕ್ಯಾಶುವಲ್​ ಲುಕ್​ನಲ್ಲಿ ಅಂದವಾಗಿ ಕಂಡಿದ್ದಾರೆ. ಕಿಯಾರಾ ಬಿಳಿ ಜೀನ್ಸ್​, ಬಿಳಿ ಟೀ ಶರ್ಟ್​​ ಮೇಲೆ ಹಸಿರು ಶ್ರಗ್​​ ಜೊತೆಗೆ ಐಗ್ಲಾಸ್​ ಹಾಗೂ ಸ್ಲಿಂಗ್​ ಬ್ಯಾಗ್​ನಲ್ಲಿ ಮನಮೋಹಕವಾಗಿ ಕಂಡರೆ, ನಟ ಸಿದ್ದಾರ್ಥ್​​ ಬಿಳಿ ಟೀಶರ್ಟ್​​ಗೆ ಆಲಿವ್​ ಹಸಿರಿನ ಜಾಕೆಟ್​​ಗೆ ಕಪ್ಪು ಬಣ್ಣದ ಟ್ರಾಕ್​ ಪ್ಯಾಂಟ್​ ಧರಿಸಿದ್ದರು.

ಈ ದಂಪತಿ ಇತ್ತೀಚಿಗೆ ದುಬೈನಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಜೆನ್ನಿಫರ್ ಲೋಪೆಜ್, ನವೋಮಿ ಕ್ಯಾಂಪ್ಬೆಲ್, ಮಾರ್ಕ್ ರಾನ್ಸನ್, ವನೆಸ್ಸಾ ಹಡ್ಜೆನ್ಸ್, ಇಡ್ರಿಸ್ ಎಲ್ಬಾ, ಇಸಾಬೆಲ್ಲೆ ಹಪ್ಪರ್ಟ್, ವಿನ್ಸೆಂಟ್ ಕ್ಯಾಸೆಲ್, ಏಂಜೆಲಾಬಾಬಿ, ಎಸೈ ಮೊರೇಲ್ಸ್, ಡೇವಿಡ್ ಗ್ಯಾಂಡಿ, ನ್ಯಾನ್ಸಿ ಅಜ್ರಾಮ್ ಮತ್ತು ಬಾಸೆಲ್ ಖಯಾತ್ ಸೇರಿದಂತೆ ವಿಶ್ವದ ಪ್ರಮುಖ ತಾರೆಯರ ಸಮಾರಂಭದಲ್ಲಿ ನಟಿ ಕಿಯಾರಾ ಕೂಡ ಹಾಜರಾಗಿ ಗಮನ ಸೆಳೆದಿದ್ದರು.

ಇನ್ನು ವೃತ್ತಿ ಜೀವನದೆಡೆಗೆ ನೋಡಿದರೆ, ನಟ ಸಿದ್ಧಾರ್ಥ್​​ ಕರಣ್​ ಜೋಹರ್​ ನಿರ್ದೇಶನದ ಯೋಧ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಿಶಾ ಪಟಾಣಿ ಮತ್ತು ರಾಶಿ ಖನ್ನಾ ಅವರಿಗೆ ಜೊತೆಯಾಗಿದ್ದಾರೆ. ಇನ್ನು ನಟಿ ಕಿಯಾರಾ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆರ್​ ಶಂಕರ್​ ನಿರ್ದೇಶಿಸುತ್ತಿರುವ ರಾಮ್​ ಚರಣ್​ ಅಭಿನಯದ ಗೇಮ್​ ಚೇಂಜರ್​ನಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಹಿಡಿತ ಸಾಧಿಸುತ್ತಿರುವ ಶಾಹಿದ್​ - ಕೃತಿ ಸಿನಿಮಾ: ಚೆನ್ನೈ ಬಳಿಕ ಬೆಂಗಳೂರಿನಲ್ಲೇ ಹೆಚ್ಚು ವೀಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.