ETV Bharat / entertainment

ಇನ್​​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಅತಿ ಹೆಚ್ಚು ಫಾಲೋವರ್ಸ್​​​ ಲಿಸ್ಟ್​​ನಲ್ಲಿ ಮೂರನೇ ಸ್ಥಾನ - Most Followed Indian - MOST FOLLOWED INDIAN

'ಸ್ತ್ರೀ 2' ಸಿನಿಮಾದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಇನ್​​ಸ್ಟಾಗ್ರಾಮ್​ನಲ್ಲಿ 91.4 ಮಿಲಿಯನ್ ಫಾಲೋವರ್​ಗಳನ್ನು ಸಂಪಾದಿಸುವ ಮೂಲಕ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ವಿರಾಟ್​ ಕೊಹ್ಲಿ ಹಾಗೂ ಪ್ರಿಯಾಂಕಾ ಚೋಪ್ರಾ ಅವರಿದ್ದಾರೆ.

PM Modi, Shraddha Kapoor
ಪಿಎಂ ಮೋದಿ, ಶ್ರದ್ಧಾ ಕಪೂರ್​​ (ANI photo)
author img

By ETV Bharat Karnataka Team

Published : Aug 21, 2024, 1:41 PM IST

ಹೈದರಾಬಾದ್: ಇತ್ತೀಚೆಗಷ್ಟೇ ಚಿತ್ರಮಂದಿರ ಪ್ರವೇಶಿಸಿ ಅದ್ಭುತ ಪ್ರದರ್ಶನ ಕಾಣುತ್ತಿರುವ 'ಸ್ತ್ರೀ 2' ಸಿನಿಮಾದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ಹೊಸದೊಂದು ದಾಖಲೆ ಬರೆದಿದ್ದಾರೆ. ಇನ್‌ಸ್ಟಾಗ್ರಾಮ್ ಹೈಯೆಸ್ಟ್ ಫಾಲೋವರ್ಸ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದಾರೆ.

ಮೂರನೇ ಭಾರತೀಯ; ಕ್ರಿಕೆಟ್ ಲೆಜೆಂಡ್​​​ ವಿರಾಟ್ ಕೊಹ್ಲಿ ಹಾಗೂ ಗ್ಲೋಬಲ್​​ ಐಕಾನ್ ಪ್ರಿಯಾಂಕಾ ಚೋಪ್ರಾ ಅವರ ನಂತರದ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ ಇನ್​ಸ್ಟಾಗ್ರಾಮ್​​​​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​​​ ಹೊಂದಿರುವ ಮೂರನೇ ಭಾರತೀಯರಾಗಿ ಹೊರಹೊಮ್ಮಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಎಕ್ಸ್​​​ ಖಾತೆಯಲ್ಲಿ ಮೋದಿ ಮುಂದು: ಹಲವು ಯಶಸ್ವಿ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿರುವ ಬಾಲಿವುಡ್​​ ನಟಿ ಶ್ರದ್ಧಾ ಕಪೂರ್ ಇನ್​​ಸ್ಟಾಗ್ರಾಮ್​ನಲ್ಲಿ 91.4 ಮಿಲಿಯನ್ ಫಾಲೋವರ್​ಗಳನ್ನು ಸಂಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 91.3 ಮಿಲಿಯನ್ ಫಾಲೋವರ್​​​ಗಳನ್ನು ಹೊಂದಿದ್ದು, ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಕುತೂಹಲಕಾರಿಯಾಗಿ, ನಟಿ ಇನ್​​ಸ್ಟಾಗ್ರಾಮ್​ನಲ್ಲಿ ಮುಂದೆ ಹೋಗುತ್ತಿದ್ದರೂ ಕೂಡಾ ಮೋದಿ ಅವರು 101.2 ಮಿಲಿಯನ್ ಫಾಲೋವರ್​​​ಗಳೊಂದಿಗೆ ಮತ್ತೊಂದು ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಪಾರ್ಮ್​​​ ಎಕ್ಸ್​​ (ಟ್ವಿಟರ್​​) ನಲ್ಲಿ ಹೆಚ್ಚು ಅನುಸರಿಸಲ್ಪಡುವ ಗ್ಲೋಬಲ್​​ ಲೀಡರ್​ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದು ಡಿಜಿಟಲ್ ವೇದಿಕೆಯಲ್ಲಿನ ಅವರ ಪ್ರಭಾವವನ್ನು ಒತ್ತಿ ಹೇಳುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಸ್ಟಾರ್​ ಕ್ರಿಕೆಟರ್​​ ವಿರಾಟ್ ಕೊಹ್ಲಿ ಅವರು 271 ಮಿಲಿಯನ್ ಫಾಲೋವರ್​ಗಳೊಂದಿಗೆ ಭಾರತೀಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೆಚ್ಚು ಫಾಲೋವರ್​​ಗಳನ್ನೊಳಗೊಂಡಿರುವ ಭಾರತೀಯ ಸೆಲೆಬ್ರಿಟಿ ಇವರು. ಎರಡನೇ ಸ್ಥಾನದಲ್ಲಿರುವ ಬಾಲಿವುಡ್​ ನಟಿ, ಪ್ರಸ್ತುತ ಜಾಗತಿಕ ತಾರೆಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ 91.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಕ್ಯಾಮರಾಗೆ ಪೋಸ್​ ಕೊಡುತ್ತಿದ್ದಂತೆ ಉರ್ಫಿ ಜಾವೇದ್​​​ ಗೌನ್​​​​​ನಲ್ಲಿ ಉರಿದ ಬೆಂಕಿ: ವಿಡಿಯೋ ನೋಡಿ - Urfi Javed

ಶ್ರದ್ಧಾ ಕಪೂರ್​​ ಸಿನಿಮಾ ವಿಚಾರ ಗಮನಿಸುವುದಾದರೆ, ಬಹು ನಿರೀಕ್ಷೆಗಳೊಂದಿಗೆ ಚಿತ್ರಮಂದಿರ ಪ್ರವೇಶಿಸಿದ 'ಸ್ತ್ರೀ 2' ಸಿನಿಮಾ ಸೂಪರ್​ ಡೂಪರ್​​ ಹಿಟ್​ ಆಗಿದೆ. 2024ರ ಆಗಸ್ಟ್​​ 15, ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಆದ ಈ ಚಿತ್ರ ವಿಮರ್ಷಕರು, ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ. ವಿಮರ್ಷಕರು ಚಿತ್ರದ ಆಕರ್ಷಕ ಕಥಾಹಂದರ, ತಾರೆಯರ ಅಭಿನಯ ಮತ್ತು ಅತ್ಯುತ್ತಮ ನಿರ್ದೇನಾ ಶೈಲಿಯನ್ನು ಶ್ಲಾಘಿಸಿದ್ದಾರೆ. ಚಿತ್ರ ಬಾಕ್ಸ್​​​ ಆಫೀಸ್​​​ ವಿಚಾರದಲ್ಲೂ ಕಮಾಲ್​ ಮಾಡಿದೆ. ವಿಶ್ವದಾದ್ಯಂತ 367.86 ಕೋಟಿ ರೂಪಾಯಿ ಗಳಿಸೋ ಮೂಲಕ 2024ರಲ್ಲಿ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಮತ್ತು ಅತಿ ಹೆಚ್ಚು ಹಣ ಸಂಪಾದಿಸಿದ ವರ್ಷದ ಹಿಂದಿ ಸಿನಿಮಾವಾಗಿ ಹೊರಹೊಮ್ಮಿದೆ. ಕೊನೆಯದಾಗಿ ಕಳೆದ ವರ್ಷ ತೆರೆಕಂಡ 'ತು ಜೂಟಿ ಮೇ​ ಮಕ್ಕಾರ್' ಸಿನಿಮಾ ಕೂಡಾ ಸೂಪರ್​​ ಹಿಟ್​ ಆಗಿತ್ತು.

ಇದನ್ನೂ ಓದಿ: 'ಮೈ ಹೀರೋ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಹಾಲಿವುಡ್ ನಟರು: ಟ್ರೇಲರ್​​ ನೋಡಿ - My Hero Trailer

ETV Bharat Logo

Copyright © 2025 Ushodaya Enterprises Pvt. Ltd., All Rights Reserved.