ETV Bharat / entertainment

ಇನ್​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಬಳಿಕ ಪ್ರಿಯಾಂಕಾ ಚೋಪ್ರಾರನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಈಗ ನಂಬರ್ 1 ನಟಿ - Most Followed Indian actress - MOST FOLLOWED INDIAN ACTRESS

'ಸ್ತ್ರೀ 2' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್‌ನ ಬೆಡಗಿ ಶ್ರದ್ಧಾ ಕಪೂರ್ ಇತ್ತೀಚೆಗಷ್ಟೇ ಇನ್​​​ಸ್ಟಾಗ್ರಾಮ್ ಫಾಲೋವರ್ಸ್ ವಿಷಯದಲ್ಲಿ ಪಿಎಂ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದರು. ಇದೀಗ ಗ್ಲೋಬಲ್​ ಐಕಾನ್​​​ ಪ್ರಿಯಾಂಕಾ ಚೋಪ್ರಾ ಅವರನ್ನೂ ಹಿಂದಿಕುವ ಮೂಲಕ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ನಟಿಯಾಗಿ ಹೊರಹೊಮ್ಮಿದ್ದಾರೆ.

Shraddha Kapoor
ನಟಿ ಶ್ರದ್ಧಾ ಕಪೂರ್​​ (ANI)
author img

By ETV Bharat Karnataka Team

Published : Aug 24, 2024, 2:55 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ತಮ್ಮ 'ಸ್ತ್ರೀ 2' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್‌ನ ಬೆಡಗಿ ಶ್ರದ್ಧಾ ಕಪೂರ್ ಅವರೀಗ ಹೊಸದೊಂದು ದಾಖಲೆ ಬರೆದಿದ್ದಾರೆ. ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ 'ಸ್ತ್ರೀ 2' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿ ಗಡಿ ದಾಟಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂ. ಗಳಿಸಿ ಗೆಲುವಿನ ನಗೆ ಬೀರಿದೆ. ತಮ್ಮ 'ಸ್ತ್ರೀ 2' ಸಾಧನೆ ಜೊತೆಗೆ ನಾಯಕಿ ಶ್ರದ್ಧಾ ಕಪೂರ್ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. ಇದೀಗ ಅತ್ಯಂತ ಜನಪ್ರಿಯ ಸೋಷಿಯಲ್​​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​​ ಇನ್​​​ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಫಾಲೋವರ್​​ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ.

ಬಿಟೌನ್​​ ಬ್ಯೂಟಿ ಶ್ರದ್ಧಾ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಕ್ರೇಜ್​​ ಹೆಚ್ಚಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ 'ದೇಸಿ ಹುಡುಗಿ' ಪ್ರಿಯಾಂಕಾ ಚೋಪ್ರಾ ಅವರು ಮೊದಲಿದ್ದರು. ನಂತರದ ಸ್ಥಾನದಲ್ಲಿ ಶ್ರದ್ಧಾ ಕಪೂರ್ ಇದ್ದರು. ಪ್ರಿಯಾಂಕಾ ಚೋಪ್ರಾ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ 91.8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಶ್ರದ್ಧಾ ಈ ಗಡಿ ದಾಟಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಶ್ರದ್ಧಾ ಇನ್ಸ್ಟಾ ಫಾಲೋವರ್ಸ್ ವಿಷಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದರು.

ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಿವರು:

  • ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ - 636 ಮಿಲಿಯನ್ (ವಿಶ್ವದಲ್ಲೇ ಅತಿ ಹೆಚ್ಚು ಇನ್​ಸ್ಟಾ ಫಾಲೋವರ್ಸ್ ಹೊಂದಿರುವವರು).
  • ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ - 270 ಮಿಲಿಯನ್ (ಭಾರತದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು).
  • ಶ್ರದ್ಧಾ ಕಪೂರ್ - 91.9 ಮಿಲಿಯನ್ (ಭಾರತದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ).
  • ಪ್ರಿಯಾಂಕಾ ಚೋಪ್ರಾ - 91.8 ಮಿಲಿಯನ್ (ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಡನೇ ನಟಿ, ಒಟ್ಟಾರೆ ಭಾರತದಲ್ಲಿ ಮೂರನೇ ಸ್ಥಾನ).
  • ನರೇಂದ್ರ ಮೋದಿ - 91.3 ಮಿಲಿಯನ್ (ಅತಿ ಹೆಚ್ಚು ಫಾಲೋವರ್ಸ್ ವಿಷಯದಲ್ಲಿ ಭಾರತದಲ್ಲಿ ನಾಲ್ಕನೇ ಸ್ಥಾನ).
  • ಆಲಿಯಾ ಭಟ್ - 85.1 ಮಿಲಿಯನ್.
  • ಕತ್ರಿನಾ ಕೈಫ್ - 80.4 ಮಿಲಿಯನ್.
  • ದೀಪಿಕಾ ಪಡುಕೋಣೆ - 79.8 ಮಿಲಿಯನ್.

ಇದನ್ನೂ ಓದಿ: ಇನ್​​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಅತಿ ಹೆಚ್ಚು ಫಾಲೋವರ್ಸ್​​​ ಲಿಸ್ಟ್​​ನಲ್ಲಿ ಮೂರನೇ ಸ್ಥಾನ - Most Followed Indian

ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ 'ಸ್ತ್ರೀ 2' ಕಳೆದ 8 ದಿನಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್​ ಮಾಡಿದೆ. ಈವರೆಗೆ 400 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ. 'ಸ್ತ್ರೀ 2' ಸಿನಿಮಾ ಜೊತೆಗೆ ಆಗಸ್ಟ್ 15ರಂದು ಜಾನ್ ಅಬ್ರಹಾಂ ಅವರ ಆ್ಯಕ್ಷನ್​​ ಡ್ರಾಮಾ 'ವೇದಾ' ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಬಹುತಾರಾಗಣದ ಕಾಮಿಡಿ ಡ್ರಾಮಾ 'ಖೇಲ್-ಖೇಲ್ ಮೇ' ಸಹ ತೆರೆಗಪ್ಪಳಿಸಿತ್ತು. 'ಸ್ತ್ರೀ 2' ನಿರೀಕ್ಷೆಗೆ ತಕ್ಕಂತೆ ಅಭೂತಪೂರ್ವ ಯಶಸ್ಸು ಕಂಡಿದೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಘಮಘಮಿಸುತ್ತಿರುವ 'ಪೌಡರ್'​ ಮೊದಲ ದಿನ ಗಳಿಸಿದ್ದೆಷ್ಟು? - Powder Collection

ETV Bharat Logo

Copyright © 2025 Ushodaya Enterprises Pvt. Ltd., All Rights Reserved.