ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಒಂಬತ್ತನೇ ವಾರಾಂತ್ಯ ಸಮೀಪಿಸಿದೆ. ಈ ವಾರ ಬಿಗ್ ಬಾಸ್ ಸಾಮ್ರಾಜ್ಯ ಕಾನ್ಸೆಪ್ಟ್ ಅಡಿ ಟಾಸ್ಕ್ನಲ್ಲಿ ನಡೆದಿದ್ದು, ಇದೀಗ ಕಳಪೆ ಮತ್ತು ಉತ್ತಮ ಸ್ಪರ್ಧಿಗಳನ್ನು ಸೂಚಿಸುವ ಸಮಯ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಆರಂಭದಲ್ಲಿ ಅಬ್ಬರಿಸಿದ್ದ ಶೆಟ್ಟಿಯೀಗ ಥಂಡಾ ಹೊಡೆದಿದ್ದಾರೆ ಅನ್ನೋದು ಹಲವು ವೀಕ್ಷಕರ ಅಭಿಪ್ರಾಯ. ಅದರಂತೆ ಇದೀಗ ಮನೆಯಲ್ಲೂ ಕಳಪೆ ಪಟ್ಟ ಹೊತ್ತು ಜೈಲಿಗೆ ಹೋಗಿದ್ದಾರೆ.
''ನಿರೀಕ್ಷೆಗಳಿಗೆ ಬಿತ್ತಾ ಪೆಟ್ಟು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಪ್ರೋಮೋ ಅನಾವರಣಗೊಳಿಸಿದೆ. ಇದರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಕಳಪೆ ಪಟ್ಟ ಸ್ವೀಕರಿಸಿ ಕಣ್ಣೀರಿಟ್ಟಿರೋದನ್ನು ಕಾಣಬಹುದು. ನಂತರ ಕಳಪೆ ಉಡುಗೆ ಧರಿಸಿ, ಜೈಲಿನೊಳಗೆ ಹೋಗಿದ್ದಾರೆ.
ಧನರಾಜ್ ಅವರು ಶೋಭಾ ಶೆಟ್ಟಿ ಅವರಿಗೆ ಕಳಪೆ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಕಾರಣಕ್ಕೆ ಶೋಭಾ ಅಸಮಧಾನಗೊಂಡಿದ್ದಾರೆ. ಈ ವಾರ ನಿಮ್ಮ ಆ್ಯಕ್ಟಿವಿಟೀಸ್ ಸ್ವಲ್ಪ ಕಡಿಮೆ ಎಂದು ತಮ್ಮ ಕಾರಣ ತಿಳಿಸಿದ್ದಾರೆ. ಚಪ್ಪಾಳೆ ತಟ್ಟಿದ ಶೋಭಾ, ನೀವ್ ಯಾಕ್ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದೀರ. ಲೈಫಲ್ಲಿ ಏನೇನೋ ಫೇಸ್ ಮಾಡಿದ್ದೀನಿ, 24 ಗಂಟೆಯ ಜೈಲು ನನಗೇನೂ ಅಲ್ಲ ಎಂದು ತಿಳಿಸಿದ್ದಾರೆ. ನಂತರ ಅಮ್ಮಾ ಇವತ್ತು ನಾನ್ ಜೈಲಿಗೆ ಹೋಗ್ತಿದ್ದೀನಿ. ನೀನ್ ಅದನ್ನು ನೋಡಿ ಅಳ್ಬೇಡ ಎಂದು ಹೇಳಿದ್ದಾರೆ. ನಂತರ ಜೈಲಿಗೆ ಹೋಗಿ ಕಣ್ಣೀರಿಟ್ಟಿದ್ದಾರೆ. ನನಗೆ ಕಳಪೆ ಕೊಡುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಸಮಂತಾ ರುತ್ ಪ್ರಭು ತಂದೆ ಜೋಸೆಫ್ ಪ್ರಭು ಇನ್ನಿಲ್ಲ! "ನಾವು ಮತ್ತೆ ಭೇಟಿಯಾಗುವವರೆಗೆ" ಎಂದ ನಟಿ
ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿಗಳು. ಬಿಗ್ ಬಾಸ್ಗೆ ಆಗಮಿಸಿ ಎರಡು ವಾರ ಸಮೀಪಿಸುತ್ತಿದೆ. ಕಳೆದ ವಾರ, ಮನೆಗೆ ಮೊದಲು ಪ್ರವೇಶಿಸಿದ ರಜತ್ ಅವರಿಗೆ ಕಳಪೆ ಪಟ್ಟ ಸಿಕ್ಕಿತ್ತು. ಈ ವಾರ ಶೋಭಾ ಅವರಿಗೆ ಸಿಕ್ಕಿದೆ.
ಇದನ್ನೂ ಓದಿ: ಕಿಚ್ಚ vs ಉಪ್ಪಿ: ಮ್ಯಾಕ್ಸ್ - ಯುಐ ಬಾಕ್ಸ್ ಆಫೀಸ್ ಫೈಟ್; ಯಾರಾದರೂ ಹಿಂದೆ ಸರಿಯುತ್ತಾರಾ?
ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ ಇವರು ಮೊದಲ ಎರಡ್ಮೂರು ದಿನ ದೊಡ್ಡ ಮಟ್ಟದಲ್ಲೇ ದನಿ ಏರಿಸಿದ್ದರು. ಅದರಲ್ಲೂ ಶೋಭಾ ಅವರು ಮಂಜು ವಿರುದ್ಧ ವಾದಕ್ಕಿಳಿದಿದ್ದ ರೀತಿ ನೋಡಿ ಬಹುತೇಕರು ಹುಬ್ಬೇರಿಸಿದ್ದರು. ಇದರ ಬೆನ್ನಲ್ಲೇ ರಜತ್ ಅವರ ದನಿಯೂ ಏರತೊಡಗಿತು. ಈಗಲೂ ರಜತ್ ಮಾತೇನು ಕಮ್ಮಿ ಇಲ್ಲ. ಹಾಗಂತ ಮನೆಯ ಹಳೇ ಸ್ಪರ್ಧಿಗಳು ಕೂಡಾ ಕಡಿಮೆಯೇನಿಲ್ಲ. ವಾದ ವಿವಾದಗಳು ಜೋರಾಗೇ ನಡೆಯುತ್ತಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಮಾನಿಗಳಿದ್ದಾರೆ.