ETV Bharat / entertainment

ವಿಜಯ್​​ ದೇವರಕೊಂಡ ಚುಂಬಿಸಿದ ಶಾಹಿದ್​ ಕಪೂರ್​: ಬ್ರೊಮ್ಯಾನ್ಸ್ ವಿಡಿಯೋ ವೈರಲ್​ - Shahid Vijay Video

'ಪ್ರೈಮ್ ವಿಡಿಯೋ' ಈವೆಂಟ್​ನಲ್ಲಿ ವಿಜಯ್​​ ದೇವರಕೊಂಡ ಅವರನ್ನು ಶಾಹಿದ್​ ಕಪೂರ್ ಚುಂಬಿಸಿದ್ದು, ವಿಡಿಯೋ ವೈರಲ್​ ಆಗಿದೆ.

Shahid Kapoor Kisses Vijay Deverakonda
ವಿಜಯ್​​ ದೇವರಕೊಂಡ ಚುಂಬಿಸಿದ ಶಾಹಿದ್​ ಕಪೂರ್
author img

By ETV Bharat Karnataka Team

Published : Mar 20, 2024, 2:43 PM IST

ಮಾರ್ಚ್ 19, ಮಂಗಳವಾರ ಸಂಜೆ ಮುಂಬೈನಲ್ಲಿ ಜರುಗಿದ 'ಪ್ರೈಮ್ ವಿಡಿಯೋ' ಈವೆಂಟ್​ನಲ್ಲಿ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಕಬೀರ್ ಸಿಂಗ್ ನಾಯಕ ಶಾಹಿದ್ ಕಪೂರ್ ಉತ್ತಮ ಕ್ಷಣ ಕಳೆದಿದ್ದಾರೆ. ಸ್ಟಾರ್ - ಸ್ಟಡ್‌ ಈವೆಂಟ್​​​ನಲ್ಲಿ ಶಾಹಿದ್ ಮತ್ತು ವಿಜಯ್ ಪರಸ್ಪರ ಪ್ರೀತಿ - ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಶಾಹಿದ್ ಕಪೂರ್​​, ಸೌತ್​​ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್​​ ಬಗ್ಗೆ ಮಾತನಾಡಿದರು. ಈ ವೇಳೆ, ವಿಜಯ್​ ಕೆನ್ನೆಗೆ ಮುತ್ತಿಕ್ಕುವ ಮೂಲಕ ಶಾಹಿದ್​ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಥಿಯೇಟರ್‌ಗಳಲ್ಲಿ ಪ್ರದರ್ಶನ ಕಂಡ ನಂತರ 'ಫ್ಯಾಮಿಲಿ ಸ್ಟಾರ್' ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಸಿನಿಮಾ ಏಪ್ರಿಲ್​ ಮೊದಲ ವಾರ ತೆರೆಗಪ್ಪಳಿಸಲಿದೆ.

ವೇದಿಕೆಯಲ್ಲಿ ಶಾಹಿದ್, ವಿಜಯ್ ಅವರನ್ನು ಹೊಗಳಿದರು. ಅವರಿಲ್ಲದೇ 'ಅರ್ಜುನ್ ರೆಡ್ಡಿ' ಇರುತ್ತಿರಲಿಲ್ಲ, 'ಅರ್ಜುನ್ ರೆಡ್ಡಿ' ಇಲ್ಲದಿದ್ದರೆ 'ಕಬೀರ್ ಸಿಂಗ್' ಕೂಡ ಇರುತ್ತಿರಲಿಲ್ಲ ಎಂದು ಹೇಳಿದರು. ಸ್ಟಾರ್ ನಟರ ಈ ಹೃದಯಸ್ಪರ್ಶಿ ಕ್ಷಣ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದೇ ಈವೆಂಟ್​ನಲ್ಲಿ ಶಾಹಿದ್ ಕಪೂರ್ ತಮ್ಮ ಹೊಸ ಸಿನಿಮಾ 'ಅಶ್ವತ್ಥಾಮ' (Ashwatthama) ಕೂಡ ಅನೌನ್ಸ್​ ಮಾಡಿದರು. ಜೊತೆಗೆ ಕಾರ್ಯಕ್ರಮದಲ್ಲಿ ತಮ್ಮ ಜನಪ್ರಿಯ ಶೋ ಫಾರ್ಜಿಯ ಯಶಸ್ಸನ್ನು ನಿರ್ದೇಶಕರಾದ ರಾಜ್ ಮತ್ತು ಡಿಕೆ ಜೊತೆ ಆಚರಿಸಿದರು. 2023ರಲ್ಲಿ ಪ್ರೈಮ್ ವಿಡಿಯೋದಲ್ಲಿ ಫಾರ್ಜಿ ಉತ್ತಮ ಪ್ರದರ್ಶನ ಕಂಡಿದೆ.

ಇದನ್ನೂ ಓದಿ: ಒಂದೇ ಈವೆಂಟ್​ನಲ್ಲಿ ಸಮಂತಾ, ನಾಗ ಚೈತನ್ಯ, ಶೋಭಿತಾ ಧೂಳಿಪಾಲ - ಫೋಟೋಗಳಿಲ್ಲಿವೆ

ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್​ ಕಟ್​ ಹೇಳಿದ್ದ 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ವಿಜಯ್ ದೇವರಕೊಂಡ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಜೊತೆಗೆ ಸ್ತ್ರೀದ್ವೇಷ ವಿಚಾರವಾಗಿ ಟೀಕೆಗಳನ್ನೂ ಎದುರಿಸಿದೆ. ನಂತರ, ಇದೇ ಚಿತ್ರವನ್ನು ಹಿಂದಿಯಲ್ಲಿ 'ಕಬೀರ್ ಸಿಂಗ್' ಶೀರ್ಷಿಕೆಯಡಿ ರೀಮೇಕ್ ಮಾಡಲಾಯಿತು. ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ಹಿಂದಿ ವರ್ಷನ್​ ಕೂಡ ಬ್ಲಾಕ್​ಬಸ್ಟರ್ ಹಿಟ್​ ಆಯಿತು. 'ಕಬೀರ್ ಸಿಂಗ್' ಅನ್ನೂ ಸಹ ಸಂದೀಪ್ ರೆಡ್ಡಿ ವಂಗಾ ಅವರೇ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: 'ಆರ್​ಸಿ 16' ಮುಹೂರ್ತ: ರಾಮ್ ಚರಣ್ ಜೊತೆ ಜಾಹ್ನವಿ- ವಿಡಿಯೋ ನೋಡಿ

ನಿನ್ನೆ ಸಂಜೆ ನಡೆದ ''ಪ್ರೈಮ್ ವಿಡಿಯೋ'' ಈವೆಂಟ್​ನಲ್ಲಿ ಪ್ರಿಯಾಂಕಾ ಚೋಪ್ರಾ, ವರುಣ್​ ಧವನ್​, ಸೂರ್ಯ, ಸಮಂತಾ ರುತ್​ ಪ್ರಭು, ಶೋಭಿತಾ ಧೂಳಿಪಾಲ, ಶಾಹಿದ್ ಕಪೂರ್, ಬಾಬಿ ಡಿಯೋಲ್, ನಾಗ ಚೈತನ್ಯ, ತಮನ್ನಾ ಭಾಟಿಯಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಒಂದೇ ಈವೆಂಟ್​ನಲ್ಲಿ ವಿಚ್ಛೇದಿತ ದಂಪತಿ ಸಮಂತಾ ರುತ್​ ಪ್ರಭು - ನಾಗ ಚೈತನ್ಯ ಮತ್ತು ನಾಗ ಚೈತನ್ಯ ಅವರ ವದಂತಿಯ ಗೆಳತಿ ಶೋಭಿತಾ ಧೂಳಿಪಾಲ ಕಾಣಿಸಿಕೊಂಡಿದ್ದು, ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.