ETV Bharat / entertainment

ಶಾರುಖ್ ಖಾನ್​ ನಟಿಸಿದ 1989ರ 'ಫೌಜಿ' ಸೀರಿಯಲ್ ದೂರದರ್ಶನದಲ್ಲಿ ಮರುಪ್ರಸಾರ

ಶಾರುಖ್ ಖಾನ್ ಅಭಿನಯದ ಫೌಜಿ ಧಾರಾವಾಹಿ ದೂರದರ್ಶನದಲ್ಲಿ ಮರುಪ್ರಸಾರವಾಗಲಿದೆ.

ಫೌಜಿ ಸೀರಿಯಲ್​ನ 'ಅಭಿ' ಪಾತ್ರದಲ್ಲಿ ಶಾರುಖ್ ಖಾನ್
ಫೌಜಿ ಸೀರಿಯಲ್​ನ 'ಅಭಿ' ಪಾತ್ರದಲ್ಲಿ ಶಾರುಖ್ ಖಾನ್ (IANS)
author img

By ETV Bharat Entertainment Team

Published : 2 hours ago

ಮುಂಬೈ, ಮಹಾರಾಷ್ಟ್ರ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಸಿನಿಜೀವನದ ಮೊದಲ ಪ್ರಮುಖ ಧಾರಾವಾಹಿ 'ಫೌಜಿ' 1989 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈಗ ಈ ಧಾರಾವಾಹಿಯ ಎಲ್ಲ 13 ಎಪಿಸೋಡ್​ಗಳನ್ನು ದೂರದರ್ಶನ ಮರುಪ್ರಸಾರ ಮಾಡಲಿದೆ. ಅಕ್ಟೋಬರ್ 24ರ ಗುರುವಾರದಿಂದ ಫೌಜಿ ಧಾರಾವಾಹಿಯ ಮರು ಪ್ರಸಾರ ಪ್ರಾರಂಭವಾಗಲಿದೆ. ಪ್ರತಿ ಸೋಮವಾರದಿಂದ ಗುರುವಾರದವರೆಗೆ ಡಿಡಿ ನ್ಯಾಷನಲ್​ನಲ್ಲಿ ಎಪಿಸೋಡ್​ಗಳು ಪ್ರಸಾರವಾಗಲಿದ್ದು, ಶಾರುಖ್ ಖಾನ್ ಅಭಿಮಾನಿಗಳು ಮತ್ತೊಮ್ಮೆ ಅವರ ಅಪ್ರತಿಮ ಅಭಿನಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇನ್ನೇನು ಕೆಲ ದಿನಗಳಲ್ಲಿ ಫೌಜಿ 2 ಪ್ರಸಾರ: ಈ ಕುರಿತು ಮಾಹಿತಿ ನೀಡಿದ ದೂರದರ್ಶನದ ಮಹಾನಿರ್ದೇಶಕ ಕಾಂಚನ್ ಪ್ರಸಾದ್, "ಫೌಜಿ ಒಂದು ಕಾಲಾತೀತ ಕ್ಲಾಸಿಕ್ ಆಗಿದ್ದು, ಅದು ಪ್ರೇಕ್ಷಕರೊಂದಿಗೆ ಅನುರಣಿಸುತ್ತಲೇ ಇದೆ. ಇನ್ನೇನು ಕೆಲ ದಿನಗಳಲ್ಲಿ ಫೌಜಿ 2 ಪ್ರಸಾರವಾಗಲಿದ್ದು, ಅದಕ್ಕೂ ಮುನ್ನ ಮೂಲ ಸರಣಿಯನ್ನು ಪ್ರಸಾರ ಮಾಡುವುದರಿಂದ ಹಿಂದಿನ ಕಥೆಯೊಂದಿಗೆ ಮರುಸಂಪರ್ಕಿಸಲು ಮತ್ತು ಅದರ ಮುಂದಿನ ಅಧ್ಯಾಯವು ತೆರೆದುಕೊಳ್ಳುವ ಮೊದಲು ಅದರ ಪರಂಪರೆಯನ್ನು ಸಂಭ್ರಮಿಸಲು ಪರಿಪೂರ್ಣ ಮಾರ್ಗವಾಗಿದೆ." ಎಂದರು.

ಅಭಿಮನ್ಯು ರಾಯ್ ಪಾತ್ರ: ರಾಜ್ ಕುಮಾರ್ ಕಪೂರ್ ನಿರ್ದೇಶನದ 'ಫೌಜಿ' ಧಾರಾವಾಹಿಯಲ್ಲಿ ಭಾರತೀಯ ಸೇನೆಯ ಕಮಾಂಡೋ ರೆಜಿಮೆಂಟ್​ ತರಬೇತಿಯನ್ನು ಚಿತ್ರಿಸಲಾಗಿದೆ. ಇದು ದೂರದರ್ಶನದಲ್ಲಿ ಪ್ರಸಾರವಾದ ಶಾರುಖ್ ಖಾನ್ ಅವರ ಮೊದಲ ಧಾರಾವಾಹಿ ಅಥವಾ ಚಿತ್ರವಾಗಿತ್ತು. ಇದರಲ್ಲಿ ಶಾರುಖ್ ಖಾನ್ ಲೆಫ್ಟಿನೆಂಟ್ ಅಭಿಮನ್ಯು ರಾಯ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಹೊಸ ಯೋಧರ ಕಥೆ ಇದು: ಭಾರತೀಯ ಸೇನೆಯಲ್ಲಿ ಕಮಾಂಡೋಗಳಾಗಲು ತರಬೇತಿ ಪಡೆಯಲು ಪ್ರಾರಂಭಿಸುವ ಹೊಸ ಯೋಧರ ಕಥೆ ಇದಾಗಿದೆ. ಈ ಸರಣಿಯು ದೈಹಿಕ ತರಬೇತಿ, ಪರಸ್ಪರ ತಮಾಷೆಗಳು ಮತ್ತು ತಮ್ಮ ಅಧಿಕಾರಿಗಳಿಂದ ಅವರು ಪಡೆಯುವ ಶಿಕ್ಷೆಗಳು ಸೇರಿದಂತೆ ನೇಮಕಗೊಂಡವರ ದೈನಂದಿನ ಹೋರಾಟಗಳನ್ನು ಎತ್ತಿ ತೋರಿಸಿದೆ.

ಈ ಧಾರಾವಾಹಿಯಲ್ಲಿ ಮೇಜರ್ ವಿಕ್ರಮ್ "ವಿಕ್ಕಿ" ರಾಯ್ ಪಾತ್ರದಲ್ಲಿ ರಾಕೇಶ್ ಶರ್ಮಾ, ಕಿರಣ್ ಕೊಚಾರ್ ಪಾತ್ರದಲ್ಲಿ ಅಮೀನಾ ಶೆರ್ವಾನಿ, ಕ್ಯಾಪ್ಟನ್ ಮಧು ರಾಥೋಡ್ ಪಾತ್ರದಲ್ಲಿ ಮಂಜುಳಾ ಅವತಾರ್, ವಿಶ್ವಜೀತ್ ಪ್ರಧಾನ್, ಸಂಜಯ್ ತನೇಜಾ, ವಿಕ್ರಮ್ ಚೋಪ್ರಾ ಮತ್ತು ಜಯಶ್ರೀ ಅರೋರಾ ನಟಿಸಿದ್ದಾರೆ. ಆರಂಭಿಕ ಯೋಜನೆಯ ಪ್ರಕಾರ ರಾಕೇಶ್ ಶರ್ಮಾ ಅವರೇ ಅಭಿಮನ್ಯು ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಈ ಪಾತ್ರ ಶಾರುಖ್ ಖಾನ್​ರಿಗೆ ದಕ್ಕಿತು.

ಫೌಜಿ ಧಾರಾವಾಹಿಯ ನಂತರ ಶಾರುಖ್ ಅವರು ಅಜೀಜ್ ಮಿರ್ಜಾ ಅವರ ಟಿವಿ ಸರಣಿ ಸರ್ಕಸ್ ನಲ್ಲಿ ನಟಿಸಿದರು. ಅಲ್ಲದೆ ಈಡಿಯಟ್, ಉಮೀದ್, ವಾಗ್ಲೆ ಕಿ ದುನಿಯಾ ಮತ್ತು ಇಂಗ್ಲಿಷ್ ಭಾಷೆಯ ಚಿತ್ರ ಇನ್ ವಿಚ್ ಅನ್ನಿ ಗಿವ್ಸ್ ಇಟ್ ದೋಸ್ ಒನ್ಸ್​ ನಲ್ಲಿ ಅವರು ಕಾಣಿಸಿಕೊಂಡರು.

ದೀವಾನಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ :

ನಂತರ ಎಸ್​ಆರ್​ಕೆ 1992 ರಲ್ಲಿ "ದೀವಾನಾ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ದಿವ್ಯಾ ಭಾರತಿ ಮತ್ತು ರಿಷಿ ಕಪೂರ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಂಡರು. ಈ ಚಿತ್ರವು ಬ್ಲಾಕ್ ಬಸ್ಟರ್ ಆಗಿ ಅವರ ವೃತ್ತಿಜೀವನವು ಗಗನಕ್ಕೇರಿತು ಮತ್ತು ಇಂದು ಅವರು ಜಾಗತಿಕ ಐಕಾನ್ ಆಗಲು ಮುನ್ನುಡಿ ಬರೆಯಿತು.

ಇದನ್ನೂ ಓದಿ : ಶಾರುಖ್​​-ಸಮಂತಾ ಸಿನಿಮಾಗೆ ರಾಜ್‌ಕುಮಾರ್ ಹಿರಾನಿ ನಿರ್ದೇಶನ - Shah Rukh Samantha Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.