ETV Bharat / entertainment

ವೈರಲ್​ ಆಯ್ತು ರಿಹಾನ್ನಾ - ಶಾರುಖ್​ ಖಾನ್​ ಫೋಟೋ! - ರಿಹಾನ್ನಾ ಶಾರುಖ್​ ಖಾನ್​ ಫೋಟೋ

Shah Rukh Khan with Rihanna Photo viral : ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​​ ಅವರ ವಿವಾಹ ಪೂರ್ವ ಸಮಾರಂಭದಲ್ಲಿನ ಈ ಫೋಟೋಗಳು ವೈರಲ್ ಆಗಿವೆ.

shah-rukh-khan-with-rihanna-photo-viral-pop-star-keeping-hand-on-srk-shoulder-with-rihanna-hu

author img

By ETV Bharat Karnataka Team

Published : Mar 5, 2024, 4:25 PM IST

ಮುಂಬೈ: ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​​ ಅವರ ವಿವಾಹ ಪೂರ್ವ ಸಮಾರಂಭ ಇಂದಿಗೂ ಚರ್ಚಿತ ವಿಷಯವಾಗಿದೆ. ಮಾರ್ಚ್​ 1ರಿಂದ 3ರವರೆಗೆ ನಡೆದ ಈ ಮೆಗಾ ಕಾರ್ಯಕ್ರಮದಲ್ಲಿ ಬಾಲಿವುಡ್​​ ತಾರೆಯರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ವಿದೇಶಿ ತಾರೆಯರು ಕೂಡ ಆಗಮಿಸಿ, ಅದ್ದೂರಿ ಪ್ರದರ್ಶನ ನೀಡಿ, ಗಮನ ಸೆಳೆದಿದ್ದರು. ಈ ತಾರೆಯರ ನೃತ್ಯ ಪ್ರದರ್ಶನ ಸೇರಿದಂತೆ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಅದರಲ್ಲಿ ಒಂದು ಚಿತ್ರ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದುವೇ ಶಾರುಖ್​ ಖಾನ್​ ಮತ್ತು ಪಾಪ್​ ಸ್ಟಾರ್​ ರಿಹಾನ್ನಾ ಫೋಟೋ.

ಪಾಪ್​ ತಾರೆ ರಿಹಾನ್ನಾ ನಟ ಶಾರುಖ್​ ಖಾನ್​ ಹೆಗಲ ಮೇಲೆ ಕೈ ಹಾಕಿ ತೆಗೆಸಿಕೊಂಡಿರುವ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲೆಡೆ ಹರಿದಾಡುತ್ತಿದೆ. ಈ ಚಿತ್ರವನ್ನು ಓರಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಓರಿ, ನನ್ನ ಸಂಪಾದನೆಯ ಪ್ರಯಾಣವೂ ಇದೀಗ ಉತ್ತಮ ಸ್ಥಾನದಲ್ಲಿದೆ. ಇದೀಗ ಜಮ್​ನಗರದಲ್ಲಿ ಪ್ರೀತಿಯನ್ನು ಕಂಡು ಕೊಂಡಿದೆ ಎಂದಿದ್ದಾರೆ. ನನ್ನ ಆರಂಭದ ಪ್ರಯಾಣ ಇದೀಗ ಇಂತಹ ನಟರ ಭೇಟಿ ಮಾಡುವ ಹಂತಕ್ಕೆ ಬೆಳೆದು ನಿಂತಿದೆ. ಅಷ್ಟೇ ಅಲ್ಲದೆ, ಅನಂತ್​ ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಟ್ಟಿಗೆ ಪ್ರೀತಿ ಸಂಪಾದಿಸುವಷ್ಟು ನನ್ನ ಪ್ರಯಾಣ ಸಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಓರಿ ಅನೇಕ ಫೋಟೋ ಹಂಚಿಕೊಂಡಿದ್ದು, ಮೊದಲ ಎರಡು ಚಿತ್ರದಲ್ಲಿ ರಿಹಾನ್ನಾ ಅವರನ್ನು ಕಾಣಬಹುದಾಗಿದೆ, ಇದೇ ವೇಳೆ, ಮೂರನೇ ಫೋಟೋದಲ್ಲಿ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಿಹಾನ್ನಾ ಮತ್ತು ಶಾರುಖ್​ ಖಾನ್​ ಅವರ ಫೋಟೋದಲ್ಲಿ ಗಾಯಕಿ ಗುಲಾಬಿ ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರೆ, ಶಾರುಖ್​ ಖಾನ್​ ಕಪ್ಪು ಬಣ್ಣದ ಸೂಟ್​ನಲ್ಲಿ ಕಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ರಿಹನ್ನಾ ಅನಂತ್​ ಮತ್ತು ರಾಧಿಕ ಅವರಿಗೆ ಪ್ರೀತಿ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದಾಗಿದೆ.

ದೇಸಿ ಉಡುಗೆಯಲ್ಲಿ ಕಂಗೊಳಿಸಿದ ರಿಹಾನ್ನಾ: ಖ್ಯಾತ ಪಾಪ್​ ಗಾಯಕಿ ರಿಹಾನ್ನಾ ದೇಸಿ ಲುಕ್​ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದರು. ಹಸಿರು - ಗುಲಾಬಿ ಬಣ್ಣದ ಕಸೂತಿ ಧಿರಿಸಿಗೆ ಪಚ್ಚೆಯ ಭಾರೀ ಆಭರಣ ಮತ್ತು ಕಿವಿ ಓಲೆಯನ್ನು ತೊಟ್ಟಿದ್ದರು.

ಇದನ್ನೂ ಓದಿ: ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್ ವೈಭವ: ಒಂದೇ ವೇದಿಕೆಯಲ್ಲಿ ಶಾರುಖ್​, ಅಮೀರ್​, ಸಲ್ಮಾನ್ ಡ್ಯಾನ್ಸ್​ ಝಲಕ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.