ETV Bharat / entertainment

ಸ್ಪೇನ್‌ನಲ್ಲಿ ಶಾರುಖ್ ಖಾನ್ 'ಕಿಂಗ್' ಶೂಟಿಂಗ್​? ಫೋಟೋ ವೈರಲ್​ - SRK King Shooting - SRK KING SHOOTING

ಸೋಷಿಯಲ್​ ಮೀಡಿಯಾದಲ್ಲಿ ಶಾರುಖ್ ಖಾನ್ ಅವರ ಫೋಟೋವೊಂದು ವೈರಲ್​ ಆಗುತ್ತಿದ್ದು, ಇದು 'ಕಿಂಗ್​' ಶೂಟಿಂಗ್​ ಸೆಟ್​ನದ್ದು ಎನ್ನಲಾಗಿದೆ. ಅದಾಗ್ಯೂ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

SRK With Suhana Khan
ಪುತ್ರಿ ಸುಹಾನಾ ಜೊತೆ ಶಾರುಖ್ (ANI/ETV Bharat)
author img

By ETV Bharat Karnataka Team

Published : Jun 2, 2024, 7:39 AM IST

2023ರಲ್ಲಿ ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ಕೊಟ್ಟು, ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ತಮ್ಮ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗೆದ್ದ ಖುಷಿಯಲ್ಲಿರುವ ಬಾಲಿವುಡ್​ ಬಾದ್​ಶಾ ಶಾರುಖ್ ಖಾನ್ ಅವರ ಮುಂದಿನ ಪ್ರೊಜೆಕ್ಟ್​ಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸೂಪರ್​ ಹಿಟ್ ಪಠಾಣ್, ಜವಾನ್ ಮತ್ತು ಡುಂಕಿಯಂತಹ ಹಿಟ್‌ ಸಿನಿಮಾಗಳ ಮೂಲಕ ಭರವಸೆ ಹೆಚ್ಚಿಸಿರುವ ಎಸ್​ಆರ್​ಕೆ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಮತ್ತೊಂದು ಅದ್ಭುತ ಸಿನಿಮಾ ನೀಡಲು ಸಜ್ಜಾಗಿದ್ದಾರೆ. ಈ ಬಾರಿ ಮಗಳು ಸುಹಾನಾ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಎಸ್‌ಆರ್‌ಕೆ ಮುಖ್ಯಭೂಮಿಕೆಯ ಮುಂದಿನ ಪ್ರಾಜೆಕ್ಟ್ ಸಾಕಷ್ಟು ಚರ್ಚೆಯಲ್ಲಿದೆ. ಸುಜೋಯ್ ಘೋಷ್ ನಿರ್ದೇಶನದ 'ಕಿಂಗ್‌'ನತ್ತ ಶಾರುಖ್​​ ಗಮನ ಹರಿಸಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಶೂಟಿಂಗ್​ ಸೆಟ್‌ನದ್ದು ಎನ್ನಲಾದ ಫೋಟೋವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವದಂತಿಗಳಿಗೆ ತುಪ್ಪ ಸುರಿದಿದೆ. ಸೋಷಿಯಲ್​ ಮೀಡಿಯಾ ಪೋಸ್ಟ್, ಶೂಟಿಂಗ್ ಸ್ಪೇನ್‌ನಲ್ಲಿ ನಡೆಯುತ್ತಿದೆ ಎಂಬುದಾಗಿ ಸೂಚಿಸಿದೆ. ಅದಾಗ್ಯೂ, ಅಧಿಕೃತ ಘೋಷಣೆಗೆ ಕಾಯಲಾಗಿದೆ.

ಈ ವಾರಾಂತ್ಯ, ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್ ಬಳಕೆದಾರರು ಶಾರುಖ್ ಖಾನ್​​ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಕಿಂಗ್​ ಶೂಟಿಂಗ್​ ಸೆಟ್, ಸ್ಪೇನ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ಸುಳಿವು ನೀಡಿದ್ದಾರೆ. ಸಮುದ್ರ/ನದಿ ಮತ್ತು ಭವ್ಯ ಪರ್ವತಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ, ಶಾರುಖ್​ ಖಾನ್​ ಬ್ಲ್ಯೂ ಸೂಟ್​ ಧರಿಸಿ ಕುಳಿತಿದ್ದಾರೆ. ಪುರುಷರ ಗುಂಪಿನೊಂದಿಗೆ ಎಸ್​ಆರ್​ಕೆ ಸಂಭಾಷಣೆಯಲ್ಲಿ ಮುಳುಗಿರುವುದನ್ನು ಈ ಚಿತ್ರ ತೋರಿಸಿದೆ.

ಈ ಫೋಟೋವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಚಿತ್ರ ತಯಾರಕರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ. ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಲೇ ಇದ್ದು, ಅಧಿಕೃತ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಕಿಂಗ್​​ ಸಿನಿಮಾ ಬಗ್ಗೆ ಗಮನಿಸುವುದಾದರೆ, ಶಾರುಖ್ ಇತ್ತೀಚೆಗೆ ಜುಲೈ-ಆಗಸ್ಟ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸುಳಿವು ನೀಡಿದ್ದರು. ಇತ್ತೀಚಿನ ಫೋಟೋ - ವಿಡಿಯೋ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಏಕೆಂದರೆ, ಶಾರುಖ್​ ಚೇರ್ ಪಕ್ಕದಲ್ಲಿ 'ಕಿಂಗ್​​ ಸ್ಕ್ರಿಪ್ಟ್​' ಇರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ.

ಇದನ್ನೂ ಓದಿ: ಸಂದೇಶ್ ಪ್ರೊಡಕ್ಷನ್ ಜೊತೆ ಕೈಜೋಡಿಸಿದ ಕಿಚ್ಚ ಸುದೀಪ್​ - Kichcha Sudeep New Movie

ವರದಿಗಳ ಪ್ರಕಾರ, ಡಾನ್ ಆಗಿ ಶಾರುಖ್ ಪುನರಾಗಮನಕ್ಕೆ ಕಿಂಗ್ ಸಾಕ್ಷಿಯಾಗಲಿದೆ. ಅಲ್ಲದೇ ಪುತ್ರಿ ಸುಹಾನಾ ಖಾನ್ ಅವರ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿರುವ ಚೊಚ್ಚಲ ಚಿತ್ರವೂ ಹೌದು. ಈಗಾಗಲೇ ಬಂದಿರುವುದು ಒಟಿಟಿ ಪ್ರೊಜೆಕ್ಟ್​. ಕಳೆದ ವರ್ಷ ಜೋಯಾ ಅಖ್ತರ್ ಅವರ ನೆಟ್‌ಫ್ಲಿಕ್ಸ್ ಚಿತ್ರ 'ದಿ ಆರ್ಚೀಸ್​' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಸುಹಾನಾ, ಕಿಂಗ್​ ಮೂಲಕ ಇದೇ ಮೊದಲ ಬಾರಿಗೆ ತಮ್ಮ ತಂದೆಯೊಂದಿಗೆ ಸ್ಕ್ರೀನ್​ ಶೇರ್ ಮಾಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಬ್ರೇಕಪ್​ ವದಂತಿ: ಕುತೂಹಲ ಹುಟ್ಟಿಸಿದ ಅರ್ಜುನ್​ ಕಪೂರ್​ ಇನ್​ಸ್ಟಾಗ್ರಾಂ ಸ್ಟೋರಿ - Arjun Kapoor Instagram Story

ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್‌ನ ಸಹ-ನಿರ್ಮಾಣದಲ್ಲಿ ಈ ಕಿಂಗ್​​ ಚಿತ್ರ ಮೂಡಿಬರಲಿದ್ದು, ಮೊದಲ ಬಾರಿಗೆ ತಂದೆ-ಮಗಳು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವಂತಹ ರೋಮಾಂಚಕಾರಿ ಯೋಜನೆಯ ಭರವಸೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.