ETV Bharat / entertainment

ಸಂಜಯ್​ ದತ್​ ಬರ್ತ್​ಡೇಗೆ ಕೆಡಿ ಚಿತ್ರ ತಂಡದಿಂದ ಸ್ಪೆಷಲ್​ ಗಿಫ್ಟ್​: ವಿಂಟೇಜ್​ ಲುಕ್​ನಲ್ಲಿ ಕೆಡಿ ಯುದ್ಧಭೂಮಿಗೆ ಕಾಲಿಟ್ಟ 'ಧಕ್​ ದೇವ' - Sanjay Dutt in Vintage Era look - SANJAY DUTT IN VINTAGE ERA LOOK

ಬಾಲಿವುಡ್​ ಸ್ಟಾರ್​ 65ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ಕೆಡಿ- ದಿ ಡೆವಿಲ್​ ಚಿತ್ರತಂಡ, ಅವರ ಪಾತ್ರವನ್ನು ಪರಿಚಯಿಸುವ ಫಸ್ಟ್​ ಲುಕ್​ ಅನ್ನು ಅಭಿಮಾನಿಗಳಿಗೆ ಗಿಫ್ಟ್​ ನೀಡಿದೆ.

Sanjay Dutt First Look Poster
ಸಂಜಯ್​ ದತ್​ ಫಸ್ಟ್​ ಲುಕ್​ ಪೋಸ್ಟರ್​ (ETV Bharat)
author img

By ETV Bharat Karnataka Team

Published : Jul 29, 2024, 5:38 PM IST

ಬಾಲಿವುಡ್​ ನಟ ಸಂಜಯ್​ ದತ್​ ಅವರು ಇಂದು ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಬಹು ನಿರೀಕ್ಷಿಕ ಚಿತ್ರ ಕೆಡಿ- ದಿ ಡೆವಿಲ್​ ಚಿತ್ರತಂಡ ಅವರ ಫಸ್ಟ್​ ಲುಕ್​ ಅನಾವರಣಗೊಳಿಸುವ ಮೂಲಕ ಶುಭ ಕೋರಿದ್ದಾರೆ.

ಫಸ್ಟ್​ ಲುಕ್​ ರಿಲೀಸ್​ ಮಾಡಿರುವ ಚಿತ್ರತಂಡ, ಸಿನಿಮಾದಲ್ಲಿ ಸಂಜಯ್​ ಅವರ ಪಾತ್ರ ಧಕ್​ ದೇವ ಎಂಬುದನ್ನು ಪರಿಚಯಿಸಿದೆ. ಇನ್​ಸ್ಟಾಗ್ರಾಂನಲ್ಲಿ ತಮ್ಮ ಫಸ್ಟ್​ ಲುಕ್​ ಹಂಚಿಕೊಳ್ಳುವ ಮೂಲಕ ಬಾಲಿವುಡ್​ ಸ್ಟಾರ್​ ಸಂಜಯ್​ ದತ್​, ಅಭಿಮಾನಿಗಳಿಗೆ ರಿಟರ್ನ್​ ಗಿಫ್ಟ್​ ನೀಡಿದ್ದಾರೆ. ಪೋಸ್ಟರ್​ನಲ್ಲಿ ಧಕ್​ ದೇವನಾಗಿ ಸಂಜಯ್​ ದತ್​ ವಿಂಟೇಜ್​ ಹಾಗೂ ರಗಡ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

"ಡೆವಿಲ್ಸ್ ಡೆಮಾಕ್ರಸಿಯ ಲಾರ್ಡ್, ಧಕ್ ದೇವ, #KD ಯ ವಿಂಟೇಜ್ ಯುದ್ಧಭೂಮಿಗೆ ಹೆಜ್ಜೆ ಇಡುತ್ತಿದ್ದಾನೆ, ತೀವ್ರವಾದ ಚಂಡಮಾರುತ ತರುತ್ತಾನೆ" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಪೋಸ್ಟರ್ ಶೇರ್ ಮಾಡಿದ ತಕ್ಷಣ, ಅಭಿಮಾನಿಗಳು ಮತ್ತು ಚಿತ್ರರಂಗದ ಕಲಾವಿದರು ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. KD ಸಿನಿಮಾದಲ್ಲಿ ಅವರ ಸಹ-ನಟಿಯಾಗಿರುವ ಶಿಲ್ಪಾ ಶೆಟ್ಟಿ ಕುಂದ್ರಾ "Wohooooooo" ಎಂದು ಕಮೆಂಟ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾ ಬಳಕೆದಾರರಲ್ಲಿ ಒಬ್ಬರು "ಹುಟ್ಟುಹಬ್ಬದ ಶುಭಾಶಯಗಳು ಬಾಬಾ" ಎಂದು ಬರೆದರೆ, ಮತ್ತೊಬ್ಬ ಬಳಕೆದಾರರು, "ಏಕಮಾತ್ರ ದಕ್ ದೇವಾ" ಎಂದು ಕಾಮೆಂಟ್ ಮಾಡಿದ್ದಾರೆ.

ನಿರ್ದೇಶಕ ಪ್ರೇಮ್​ ಅವರು ಆ್ಯಕ್ಷನ್​ ಕಟ್​ ಹೇಳಿರುವ ಕೆಡಿ- ದಿ ಡೆವಿಲ್​ ಪ್ಯಾನ್​ ಇಡಿಯಾ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು 1970ರ ದಶಕದ ಬೆಂಗಳೂರಿನ ನೈಜ ಘಟನೆಗಳನ್ನು ಆಧರಿಸಿದ ಪಿರಿಯಾಡ್​ ಆ್ಯಕ್ಷನ್​ ಎಂಟರ್​ಟೈನರ್​ ಆಗಿದೆ. ಇದಲ್ಲದೇ, ಸಂಜಯ್​ ದತ್​ ಅವರು ಘುಡ್ಚಾಡಿ ಸಿನಿಮಾದಲ್ಲಿ ರವೀನಾ ಟಂಡನ್​ ಜೊತೆಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ಖುಶಾಲಿ ಕುಮಾರ್​ ಹಾಗ ಪಾರ್ಥ್​ ಸಮತಾನ್​ ಕೂಡ ಅಭಿನಯಿಸುತ್ತಿದ್ದಾರೆ.

ಘುಡ್ಚಾಡಿ ಸಿನಿಮಾ ಆಗಸ್ಟ್​ 9ರಂದು ಒಟಿಟಿ ಫ್ಲಾಟ್​ಫಾರ್ಮ್​ ಜಿಯೋ ಸಿನಿಮಾನಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ರಣವೀರ್​ ಸಿಂಗ್​ ಅಭಿನಯದ ಹಾಗೂ ನಿರ್ದೇಶಕ ಆದಿತ್ಯ ಧರ್​ ತಮ್ಮ ಕಾಂಬಿನೇಷನ್​ನ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದು, ಇದರಲ್ಲಿ ಸಂಜಯ್​ ದತ್​, ಆರ್​.ಮಾಧವನ್​, ಅಕ್ಷನ್​ ಖಯ್ಯಾ ಹಾಗೂ ಅರ್ಜುನ್​ ರಾಮ್​ಪಾಲ್​ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂಜಯ್​ ದತ್​ ಅವರು ಹೌಸ್​ಫುಲ್​ 5 ಸಿನಿಮಾತಂಡವನ್ನೂ ಸೇರಿಕೊಂಡಿದ್ದಾರೆ.

ತರುಣ್​ ಮನ್ಸುಖಾನಿ ನಿರ್ದೇಶನದ ಹೌಸ್​ಫುಲ್​ 5 ಸಿನಿಮಾ ಹೌಸ್​ಫುಲ್​ ಸಿನಿಮಾದ ಫ್ರ್ಯಾಂಚೈಸ್​ನಲ್ಲಿ ಬರುತ್ತಿದೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಕ್ರೂಸ್​ ಹಡಗಿನಲ್ಲಿ ತೆಗೆಯಲಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ರಿತೇಶ್​ ದೇಶ್​ಮುಖ್​​, ಅಭಿಷೇಕ್​ ಬಚ್ಚನ್​ ಹಾಗೂ ಈಗ ಸಂಜಯ್​ ದತ್​ ಸೇರಿದಂತೆ ಬಾಲಿವುಡ್​ ಸ್ಟಾರ್​ಗಳ ಸಾಲೇ ಚಿತ್ರದಲ್ಲಿದೆ.

ಇದನ್ನೂ ಓದಿ: ವಿನಯ್ ರಾಜ್ ಕುಮಾರ್ 'ಪೆಪೆ'ಗೆ A ಸೆನ್ಸಾರ್‌ ಸರ್ಟಿಫಿಕೇಟ್; ಸಿನಿಪ್ರಿಯರ ಕುತೂಹಲ - VINAY RAJKUMAR PEPE FILM

ETV Bharat Logo

Copyright © 2024 Ushodaya Enterprises Pvt. Ltd., All Rights Reserved.