ETV Bharat / entertainment

ಗಜಿನಿ ಖ್ಯಾತಿಯ ಮುರುಗಾದಾಸ್ ನಿರ್ದೇಶನದಲ್ಲಿ ಸಲ್ಮಾನ್​ ಖಾನ್​​ ಸಿನಿಮಾ - Salman Khan movie

ಜನಪ್ರಿಯ ನಟ ಸಲ್ಮಾನ್​ ಖಾನ್​ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ.

Salman Khan movie With A.R Murugadoss
ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್​ ಖಾನ್​​ ಸಿನಿಮಾ
author img

By ETV Bharat Karnataka Team

Published : Mar 12, 2024, 12:42 PM IST

Updated : Mar 12, 2024, 1:52 PM IST

ಬಾಲಿವುಡ್​ ಸೂಪರ್​​ ಸ್ಟಾರ್​ ಸಲ್ಮಾನ್​ ಖಾನ್​​​​ ಮುಖ್ಯಭೂಮಿಕೆಯ ಮುಂದಿನ ಚಿತ್ರ ಘೋಷಣೆಯಾಗಿದೆ. ಸ್ಪೈ-ಯೂನಿವರ್ಸ್ ಥ್ರಿಲ್ಲರ್ 'ಟೈಗರ್ 3'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಸಲ್ಲು, ಸೂಪರ್​ ಹಿಟ್ 'ಗಜಿನಿ' ಸಿನಿಮಾ ಖ್ಯಾತಿಯ ಎ.ಆರ್​​ ಮುರುಗಾದಾಸ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶೀರ್ಷಿಕೆಯಿಡದ ಈ ಚಿತ್ರದ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಲಾಗಿದೆ. ಹೌದು ಸಲ್ಮಾನ್​ ನಟನೆಯ ಮುಂದಿನ ಚಿತ್ರ 2025ರ ಈದ್​ ದಿನದಂದು ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಹೀರೋ ಸಲ್ಮಾನ್​ ಖಾನ್​ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ಅಸಾಧಾರಣ ಪ್ರತಿಭಾನ್ವಿತ ನಿರ್ದೇಶಕ ಎ.ಆರ್​​ ಮುರುಗಾದಾಸ್ ಮತ್ತು ನನ್ನ ಸ್ನೇಹಿತ ಸಾಜಿದ್​ ನಾಡಿಯಾಡ್ವಾಲ ಜೊತೆ ಸಿನಿಮಾ ಮಾಡಲು ಸಂತೋಷವಾಗಿದೆ. ಈ ಕಾಂಬಿನೇಶನ್​​ ಬಹಳ ವಿಶೇಷವಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದೊಂದಿಗೆ ನಾನು ಈ ಪ್ರಯಾಣಕ್ಕೆ ಎದುರು ನೋಡುತ್ತಿದ್ದೇನೆ. 2025ರ ಈದ್​ಗೆ ಸಿನಿಮಾ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.

ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲ ಅವರ ಬ್ಯಾನರ್ 'ನಾಡಿಯಾಡ್ವಾಲ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್' ಈ ಹೆಸರಿಸದ ಬಿಗ್​ ಪ್ರೊಜೆಕ್ಟ್​ಗೆ ಬಂಡವಾಳ ಹೂಡಲಿದೆ. ತಮಾಶಾ, ಜುಡ್ವಾ, ಮುಜ್ಸೆ ಶಾದಿ ಕರೋಗಿ, ಕಿಕ್ ಸೇರಿದಂತೆ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿರೋ ನಿರ್ಮಾಪಕರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಸಲ್ಮಾನ್​ ಮತ್ತು ಸಾಜಿದ್ ಜೋಡಿ ಜೀತ್, ಜುಡ್ವಾ, ಹರ್ ದಿಲ್ ಜೋ ಪ್ಯಾರ್ ಕರೇಗಾ, ಮುಜ್ಸೆ ಶಾದಿ ಕರೋಗಿ, ಕಿಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದೆ. ಕೊನೆಯದಾಗಿ ಈ ಸಲ್ಲು-ಸಾಜಿದ್​ ಕಾಂಬೋದಲ್ಲಿ ಕಿಕ್ (2024) ಸಿನಿಮಾ ಮೂಡಿ ಬಂದಿತ್ತು. 'ಕಿಕ್', ನಿರ್ಮಾಪಕನಾಗಿ ಮಾತ್ರವಲ್ಲದೇ ಸಾಜಿದ್​ ನಿರ್ದೇಶನದ ಚೊಚ್ಚಲ ಚಿತ್ರವೂ ಆಗಿತ್ತು.

ಇದನ್ನೂ ಓದಿ: 'ಗೂಗ್ಲಿ' ನಟಿ ಕೃತಿ ಖರಬಂದ ಮದುವೆ: ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ವರನ ಮನೆ-ವಿಡಿಯೋ

ನಿರ್ದೇಶಕ ಎ.ಆರ್ ಮುರುಗಾದಾಸ್ 'ಗಜಿನಿ', 'ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ' ಸೇರಿದಂತೆ ಅನೇಕ ತಮಿಳು ಹಿಟ್‌ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮುರುಗದಾಸ್ ಅವರು ತಮ್ಮ ತೆಲುಗು ಹಿಟ್ ಸಿನಿಮಾ 'ಸ್ಟಾಲಿನ್'ನ ರೀಮೇಕ್ 'ಜೈ ಹೋ'ಗೆ ಸ್ಕ್ರಿಪ್ಟ್ ಬರೆದಿದ್ದರು. 2014ರಲ್ಲಿ ಬಂದ ಜೈ ಹೋ ಚಿತ್ರದಲ್ಲಿ ಸಲ್ಮಾನ್​ ಖಾನ್​ ನಟಿಸಿದ್ದರು. ಸಾಜಿದ್ ಮತ್ತು ಎ.ಆರ್ ಮುರುಗಾದಾಸ್ ತಮ್ಮ ಪ್ರಾಜೆಕ್ಟ್ ಕುರಿತು ಚರ್ಚೆ ನಡೆಸಿದಾಗ, ಈ ಚಿತ್ರಕ್ಕೆ ಸಲ್ಮಾನ್​ ಫಿಟ್​ ಎಂದು ಅರಿತುಕೊಂಡರು. ನಂತರ ಸಲ್ಮಾನ್ ಕೂಡ ಈ ಸಿನಿಮಾಗೆ ಗ್ರೀನ್​ ಸಿಗ್ನಲ್​ ಕೊಟ್ಟರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಯಾತ್ರಿಕರಿಗೆ ಉಚಿತ ಚಿಕಿತ್ಸೆ: ಅಪೋಲೋ ಆಸ್ಪತ್ರೆ ಉದ್ಘಾಟಿಸಿದ ರಾಮ್ ಚರಣ್ ಪತ್ನಿ ಉಪಾಸನಾ

ಇನ್ನೂ ಈ ಚಿತ್ರ, ಆ್ಯಕ್ಷನ್ ಎಂಟರ್‌ಟೈನರ್ ಆಗಿದ್ದು, ಈ ಸಾಲಿನಲ್ಲಿ ಜಗತ್ತಿನಾದ್ಯಂತ ಹಲವು ಲೊಕೇಶನ್​​ನಲ್ಲಿ ಶೂಟಿಂಗ್​​ ನಡೆಯಲಿದೆ ಎಂದು ವರದಿಯಾಗಿದೆ. ಪೋರ್ಚುಗಲ್ ಸೇರಿದಂತೆ ಇತರೆ ಯುರೋಪಿಯನ್ ದೇಶಗಳಲ್ಲಿ ಚಿತ್ರೀಕರಿಸಲಾಗುವುದು. ಕೆಲ ದೃಶ್ಯಗಳನ್ನು ಭಾರತದಲ್ಲಿ ಸೆರೆಹಿಡಿಯಲಾಗುವುದು ಎಂದು ಮೂಲವೊಂದು ಬಹಿರಂಗಪಡಿಸಿದೆ. 400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರ ಸಾಜಿದ್​ ನಿರ್ಮಾಣದ ಬಿಗ್​ ಪ್ರೊಜೆಕ್ಟ್​ ಕೂಡ ಹೌದು. ಶೀಘ್ರದಲ್ಲೇ ಶೂಟಿಂಗ್​​ ಆರಂಭವಾಗಲಿದೆ.

Last Updated : Mar 12, 2024, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.