ETV Bharat / entertainment

ಅಲ್ಲು ಅರ್ಜುನ್​ನನ್ನು ಅನ್​ಫಾಲೋ ಮಾಡಿದ ಸಾಯಿ ಧರಂ ತೇಜ್​​: ಈ ಬಗ್ಗೆ ನಿಹಾರಿಕಾ ಹೇಳಿದ್ದಿಷ್ಟು! - Tej unfollows Allu Arjun - TEJ UNFOLLOWS ALLU ARJUN

ಸಾಯಿ ಧರಂ ತೇಜ್​​ ಅವರು ಅಲ್ಲು ಅರ್ಜುನ್ ಅವರನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಅನ್​ಫಾಲೋ ಮಾಡಿರೋ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸಂಬಂಧಿ ನಿಹಾರಿಕಾ ತಿಳಿಸಿದ್ದಾರೆ.

Allu Arjun
ಅಲ್ಲು ಅರ್ಜುನ್ (ANI)
author img

By ETV Bharat Karnataka Team

Published : Jun 15, 2024, 10:26 AM IST

ಟಾಲಿವುಡ್​​ ನಟ ಸಾಯಿ ಧರಂ ತೇಜ್​​ ಅವರು ಸಂಬಂಧಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಅನ್​ಫಾಲೋ ಮಾಡಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸಂಬಂಧಿ, ನಟಿ ನಿಹಾರಿಕಾ ಕೊನಿಡೇಲಾ ತಿಳಿಸಿದ್ದಾರೆ.

ಸಿನಿಮಾ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನಿಹಾರಿಕಾ ಅವರಿಗೆ ಸುದ್ದಿಗಾರರಿಂದ ಈ ಬಗ್ಗೆ ಪ್ರಶ್ನೆಗಳು ಎದುರಾಗಿವೆ. ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಟಿ ಈ ವಿಷಯಗಳ ಬಗ್ಗೆ ತನಗೇನೂ ಗೊತ್ತಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳಿರಬಹುದು ಎಂದು ತಿಳಿಸಿದ್ದಾರೆ.

ಟಾಲಿವುಡ್​ನ ಮೆಗಾಸ್ಟಾರ್ ಕುಟುಂಬ ಭಾರತೀಯ ಚಿತ್ರರಂದಲ್ಲಿ ದೊಡ್ಡ ಹೆಸರು ಮಾಡಿದೆ. ಅಪ್ಪ ಮಕ್ಕಳಿಂದ ಹಿಡಿದು ಹೆಚ್ಚಿನವರು ಚಿತ್ರರಂದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತಮ್ಮದೇ ಆದ ಬೇಡಿಕೆ, ಅಭಿಮಾನಿ ಬಳಗವನ್ನು ಹೊಂದಿದ್ದಾರೆ.​​ ಕುಟುಂಬದೊಳಗೆ ಅತ್ಯುತ್ತಮ ಭಾಂದವ್ಯ ಹೊಂದಿದ್ದು, ಆಗಾಗ್ಗೆ ಅದು ಸಭೆ - ಸಮಾರಂಭಗಳಲ್ಲಿ ಗೋಚರಿಸುತ್ತದೆ. ಇವರ ಕಸಿನ್ಸ್​ ತಂಡದ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಆದ್ರೀಗ ಸಾಯಿ ಧರಂ ತೇಜ್​​ ಮತ್ತು ಅಲ್ಲು ಅರ್ಜುನ್ ನಡುವೆ ಏನಾಗಿದೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸಾಯಿ ಧರಂ ತೇಜ್​​ ಅವರು ಸಂಬಂಧಿ ಅಲ್ಲು ಅರ್ಜುನ್ ಅವರನ್ನು ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್​​ಗಳಲ್ಲಿ ಅನ್​ಫಾಲೋ ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ​​ ಪ್ರಕರಣ: ಆರೋಪಿ ತಂದೆ ಹೃದಯಾಘಾತದಿಂದ ಸಾವು - Darshan case Accused Father Death

ಇನ್ನೂ, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ತಮ್ಮ ಮುಂದಿನ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಸುಕುಮಾರ್ ಆ್ಯಕ್ಷನ್​ ಕಟ್​​ ಹೇಳಿರುವ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಸ್ಟ್ 15 ರಂದು ಪುಷ್ಪ 2: ದಿ ರೂಲ್​​ ಚಿತ್ರಮಂದಿರಗಳಲ್ಲಿ ಬಹುಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದ್ದು, ಈಗಾಗಲೇ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. 2021ರ ಕೊನೆಯಲ್ಲಿ ತೆರೆಕಂಡ ಸಿನಿಮಾದ ಮೊದಲ ಭಾಗ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದು, ಸೀಕ್ವೆಲ್​ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಹಾಗಾಗಿ ಚಿತ್ರತಂಡ ಹೆಚ್ಚಿನ ಸಮಯ ತೆಗೆದುಕೊಂಡು, ಬಿಗ್​ ಬಜೆಟ್​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದೇ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅಲ್ಲು ಅರ್ಜುನ್​​ ಅವರ ವಿಭಿನ್ನ ಅವತಾರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: ಸಂಕಷ್ಟದಿಂದ ಪಾರಾಗಲು ದರ್ಶನ್ ಭಾವನಿಂದ ಕೈಗಾದಲ್ಲಿ ವಿಶೇಷ ಪೂಜೆ - Special Puja by Darshan relative

ETV Bharat Logo

Copyright © 2025 Ushodaya Enterprises Pvt. Ltd., All Rights Reserved.