ETV Bharat / entertainment

ಕಾಂತಾರ ಅಧ್ಯಾಯ 1 ಚಿತ್ರಕ್ಕಾಗಿ ಕನ್ನಡಕ್ಕೆ ಬಂದ RRR ಸಿನಿಮಾದ ಆಕ್ಷನ್ ಡೈರೆಕ್ಟರ್! - KANTARA CHAPTER 1

ಬಹನಿರೀಕ್ಷಿತ ರಿಷಬ್ ಶೆಟ್ಟಿ ಅವರ ಕಾಂತಾರ ಅಧ್ಯಾಯ 1 ಚಿತ್ರದ ಆಕ್ಷನ್ ಸೀಕ್ವೆನ್ಸ್​ಗೆ ಖ್ಯಾತ ಸಾಹಸ ನಿರ್ದೇಶಕರು ಡೈರೆಕ್ಷನ್​ ಮಾಡಲಿದ್ದಾರೆ.

ಕಾಂತಾರ ಅಧ್ಯಾಯ 1 ಚಿತ್ರಕ್ಕಾಗಿ ಕನ್ನಡಕ್ಕೆ ಬಂದ RRR ಸಿನಿಮಾದ ಆಕ್ಷನ್ ಡೈರೆಕ್ಟರ್
ಕಾಂತಾರ ಅಧ್ಯಾಯ 1 ಚಿತ್ರಕ್ಕಾಗಿ ಕನ್ನಡಕ್ಕೆ ಬಂದ RRR ಸಿನಿಮಾದ ಆಕ್ಷನ್ ಡೈರೆಕ್ಟರ್ (ETV Bharat)
author img

By ETV Bharat Karnataka Team

Published : Nov 2, 2024, 5:19 PM IST

ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟ ರಿಷಬ್ ಶೆಟ್ಟಿ. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿದ್ದಾರೆ. ಜೊತೆಗೆ ಡಿವೈನ್ ಸ್ಟಾರ್ ಈಗ ಕನ್ನಡ ಚಿತ್ರಗಳು ಮಾತ್ರ ಅಲ್ಲದೇ ಪರಭಾಷೆಯ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ‌. ಅದಕ್ಕೆ ಸಾಕ್ಷಿಯಾಗಿ ತೆಲುಗಿನ ಹನುಮಾನ್ ಸೀಕ್ವೆಲ್​​ನಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದು, ಅವರ ಫಸ್ಟ್ ಲುಕ್ ಇತ್ತೀಚೆಗೆ ಅನಾವರಣಗೊಂಡಿತ್ತು. ಸದ್ಯ ರಿಷಬ್ ಶೆಟ್ಟಿ ಕಾಂತಾರ ಅಧ್ಯಾಯ 1 ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ಅದ್ಧೂರಿ ಸೆಟ್​​ಗಳನ್ನ ಹಾಕಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಕಾಂತಾರ ಅಧ್ಯಾಯ 1 ಸಿನಿಮಾ ಟೀಮ್​ಗೆ RRR ಚಿತ್ರದ ಆಕ್ಷನ್ ಡೈರೆಕ್ಟರ್ ಸೇರಿದ್ದಾರೆ.

ಕಾಂತಾರ ಅಧ್ಯಾಯ 1 ಚಿತ್ರದ ಮೋಷನ್ ಪಿಕ್ಚರ್ ಜೊತೆ ರಿಷಬ್ ಶೆಟ್ಟಿ ಫಸ್ಟ್ ಲುಕ್ ಭಾರತೀಯ ಸಿನಿಮಾದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಇದಕ್ಕಾಗಿ ರಿಷಬ್ ಶೆಟ್ಟಿ ಆರು ತಿಂಗಳ ಕಾಲ ಕಥೆ ಮಾಡಿ ಸರಳವಾಗಿ ಮುಹೂರ್ತ ಮಾಡಿ ಶೂಟಿಂಗ್ ಆರಂಭಿಸಿದ್ದರು. ಈ ಚಿತ್ರಕ್ಕೆ 10ಕೆಜಿ ತೂಕ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಮಾಡಲಿದ್ದಾರೆ. ಅದಕ್ಕಾಗಿಯೇ ಶೆಟ್ರು ಕಲರಿಪಯಟ್ಟು ಕಲಿಯುತ್ತಿರುವ ಫೋಟೋವನ್ನ ರಿವೀಲ್ ಮಾಡಿದ್ದರು.

RRR ಸಿನಿಮಾದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್, ಇದೀಗ ಕಾಂತಾರ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ಆ ನಿಮಿತ್ತ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಅವರು ಆಗಮಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಸಿದ್ಧತೆ ಮಾಡಿಕೊಂಡಿರುವ ಆರ್ ಆರ್ ಆರ್ ಚಿತ್ರದ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಕಲರಿಪಯಟ್ಟು ಆಕ್ಷನ್ ಕಂಪೋಜ್ ಮಾಡಲಿದ್ದಾರೆ.

ಕಾಂತಾರ ಅಧ್ಯಾಯ 1 ಚಿತ್ರ 40 ಪರ್ಸೆಂಟ್ ಮಾತ್ರ ಶೂಟಿಂಗ್ ಆಗಿದೆ. ಕಾಂತಾರ ಅಧ್ಯಾಯ 1 ಸಿನಿಮಾ ಬೇರೆ ತರಹದ ಕಥೆ. ಅದನ್ನು ಬರೆದು ಮುಗಿಸುವುದಕ್ಕೆ ಒಂದು ವರ್ಷ ಆಗಬಹುದು. ಬಹುಶಃ ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುತ್ತೆ. 100ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಆಗಲಿದೆ ಎಂದು ರಿಷಬ್ ಶೆಟ್ಟಿ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಕಾಂತಾರ ಸಿನಿಮಾವನ್ನು 16 ಕೋಟಿ ರೂ. ಬಜೆಟ್​​ನಲ್ಲಿ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ ಸಂಸ್ಥೆ ಈಗ 50‌ ಕೋಟಿಗೂ ಹೆಚ್ಚಿನ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರೀಕರಣ ಮಾಡಿ, ಆ ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್‍ ಮಾಡಲಾಗುತ್ತೆ. ಆದ್ರೆ ಆರ್ ಆರ್ ಆರ್ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಆಕ್ಷನ್ ಸೀಕ್ವೆನ್ಸ್ ಈ ಚಿತ್ರದ ಹೈಲೈಟ್ಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಸಮರ್ಪಣೆ, ರೂಪಾಂತರ, ಪರಿಪೂರ್ಣತೆ, ಬದ್ಧತೆಗೆ ಸಾಟಿಯಿಲ್ಲ: 'ಜೈ ಹನುಮಾನ್'​​ ನಿರ್ದೇಶಕನಿಂದ ಪ್ರಶಂಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.