ETV Bharat / entertainment

ಟಾಕ್ಸಿಕ್ ಸಿನಿಮಾಗಾಗಿ ಯಶ್‌ 'ಪಾಂಪಡೋರ್' ಹೇರ್‌ಸ್ಟೈಲ್‌; ಸೋಷಿಯಲ್ ಮೀಡಿಯಾದಲ್ಲಿ ಸದ್ದು - Yash New Hairstyle - YASH NEW HAIRSTYLE

'ಕೆಜಿಎಫ್​' ಸಿನಿಮಾ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ರಾಕಿಂಗ್​​ ಸ್ಟಾರ್​ ಯಶ್​​ ಅವರ ಹೊಸ ಹೇರ್​ಸ್ಟೈಲ್​​​ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮುಂದಿನ 'ಟಾಕ್ಸಿಕ್'​​ ಸಿನಿಮಾಗಾಗಿ ತಮ್ಮ ಕೇಶರಾಶಿಗೆ ಹೊಸ ರೂಪ ಕೊಟ್ಟಿದ್ದಾರೆ.

Rocking Star Yash
ರಾಕಿಂಗ್​​ ಸ್ಟಾರ್​ ಯಶ್​ (ETV Bharat)
author img

By ETV Bharat Entertainment Team

Published : Aug 1, 2024, 3:43 PM IST

Updated : Aug 1, 2024, 4:13 PM IST

ಅಭಿನಯ, ಸ್ಟಾರ್​ಡಮ್​ ಸುಲಭದ ಮಾತಲ್ಲ. ತೆರೆಮರೆಯ ಕಲಾವಿದರ ಪರಿಶ್ರಮ ನೋಡಿದರೆ ಇದು ತಿಳಿಯುತ್ತದೆ. ಪಾತ್ರಕ್ಕಾಗಿ ದೇಹ ತೂಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು, ಫಿಟ್ನೆಸ್​​ ಕಾಪಾಡಿಕೊಳ್ಳುವುದು ತಾರೆಯರ ವೃತ್ತಿಜೀವನದ ಬಹಳ ಮುಖ್ಯ ವಿಚಾರ. ಇದರ ಜೊತೆಗೆ, ತಮ್ಮ ಹೇರ್ ಸ್ಟೈಲ್​​ನಿಂದಲೂ ಟ್ರೆಂಡ್ ಕ್ರಿಯೇಟ್ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.

ರಾಕಿ ಭಾಯ್​ ಹೊಸ ಹೇರ್ ಸ್ಟೈಲ್: ಇತ್ತೀಚೆಗೆ ಯಶ್‌ ಅವರ ಹೊಸ ಹೇರ್ ಸ್ಟೈಲ್ ಬೆಂಗಳೂರಿನ ಗಾಂಧಿನಗರನಿಂದ ಬಾಲಿವುಡ್ ಮಟ್ಟದಲ್ಲೂ ಸುದ್ದಿಯಾಗಿತ್ತು. ಅಷ್ಟಕ್ಕೂ ಉದ್ದ ಕೇಶರಾಶಿಗೆ ಅವರು ಹೊಸ ಟಚ್ ಕೊಟ್ಟಿದ್ದೇಕೆ?, ಈ ಹಿಂದೆ 'ರಾಮಾಚಾರಿ' ಯಾವೆಲ್ಲಾ ಸಿನಿಮಾಗಳಿಗೆ ವಿಭಿನ್ನ​​ ಹೇರ್ ಸ್ಟೈಲ್ ಮಾಡಿಸಿ ಟ್ರೆಂಡ್ ಸೆಟ್​ ಮಾಡಿದ್ದರು ಎಂಬುದನ್ನು ನೋಡೋಣ.

Rocking Star Yash
ರಾಕಿಂಗ್​​ ಸ್ಟಾರ್​ ಯಶ್​ (ANI)

ಲಕ್ಕಿ ಸಿನಿಮಾ: ಮೊಗ್ಗಿನ ಮನಸ್ಸಿನ ಲವರ್ ಬಾಯ್​​ ಆಗಿದ್ದ ಯಶ್ 2012ರಲ್ಲಿ ಬಂದ 'ಲಕ್ಕಿ' ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಮೊದಲ ಬಾರಿ ಕೂದಲಿಗೆ ಹೊಸ ರೂಪ ಕೊಟ್ಟಿದ್ದರು. ಮೋಹಕ ತಾರೆ ರಮ್ಯಾ ಜೊತೆ ರೊಮ್ಯಾನ್ಸ್ ಮಾಡಿದ್ದ ನಟ, ತಮ್ಮ ಕೂದಲಿಗೆ ಕಲರಿಂಗ್​ ಮಾಡಿಸುವುದರೊಂದಿಗೆ, ಟ್ರೆಂಡಿ ಗಡ್ಡದಿಂದಲೂ ಗಮನ ಸೆಳೆದಿದ್ದರು‌.

ಮಾಸ್ಟರ್ ಪೀಸ್ ಸಿನಿಮಾ: ಯಶ್ ಉದ್ದ ಕೂದಲು ಬಿಟ್ಟು ಔಟ್ ಆ್ಯಂಡ್​ ಔಟ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದ ಚಿತ್ರ 'ಮಾಸ್ಟರ್ ಪೀಸ್'.‌ 2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್​​ನಲ್ಲಿ ಕೊಳ್ಳೆ ಹೊಡೆದ ಈ ಚಿತ್ರದಲ್ಲಿ ತಮ್ಮ ಕೂದಲಿಗೆ ಗೋಲ್ಡನ್ ಕಲರಿಂಗ್ ಮಾಡಿಸಿ, ಉದ್ದ ಕೂದಲಿನಿಂದ ಟ್ರೆಂಡ್ ಆಗಿದ್ದರು.

ಸಂತು ಸ್ಟ್ರೈಟ್ ಫಾರ್ವರ್ಡ್: ನಟ ಮತ್ತೆ ತಮ್ಮ ಕೂದಲಿಗೆ ಹೊಸ ರೂಪ ಕೊಟ್ಟಿದ್ದು 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದಲ್ಲಿ. ಸ್ವಲ್ಪ ಕೂದಲು ಕತ್ತರಿಸಿ, ಸ್ಪೈಕ್ ಹೇರ್ ಸ್ಟೈಲ್​ನಿಂದ ಸೆನ್ಸೇಷನ್​​ ಕ್ರಿಯೇಟ್ ಮಾಡಿದ್ದರು. ಯಶ್ ಹೊಸ ಸ್ಪೈಕಿ ಹೇರ್ ಸ್ಟೈಲ್ ಅಂದಿನ ದಿನಗಳಲ್ಲಿ ಕಾಲೇಜು ಹುಡುಗರ ಹಾಟ್ ಫೇವರೆಟ್ ಆಗಿತ್ತು.

Rocking Star Yash
ಸಂಜಯ್​ ದತ್​ ಜೊತೆ ರಾಕಿಂಗ್​​ ಸ್ಟಾರ್​ ಯಶ್​ (ANI)

ಕೆಜಿಎಫ್: ಹೀಗೆ ಸಿನಿಮಾದಿಂದ ಸಿನಿಮಾಕ್ಕೆ ಸ್ಯಾಂಡಲ್​ವುಡ್​ನಲ್ಲಿ ಟ್ರೆಂಡ್ ಆಗುತ್ತಿದ್ದ ಯಶ್ ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ. ಈ ಸಿನಿಮಾಗಳಲ್ಲಿ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ಹೊಸ ಟ್ರೆಂಡ್ ಶುರು ಮಾಡ್ತಾರೆ. ಕೆಜಿಎಫ್ ಸಿನಿಮಾ ನೋಡಿ ಅದೆಷ್ಟೋ ಮಂದಿ ಉದ್ದ ಕೂದಲು ಹಾಗೂ ಗಡ್ಡ ಬಿಡಲು ಶುರು ಮಾಡಿದ್ದರು.

ಅಷ್ಟೇ ಅಲ್ಲ, ಯಶ್ ತಮ್ಮ ಉದ್ದ ಮತ್ತು ವಿಭಿನ್ನ​​ ಹೇರ್ ಸ್ಟೈಲ್​ ಮೂಲಕ ಜನಪ್ರಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಕಂಪನಿಗಳ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದಾರೆ. ಅದರಲ್ಲೂ ಡೆಡ್ ಲಾಕ್ಸ್ ಹೇರ್ ಸ್ಟೈಲ್‌ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ವಿಶೇಷವಾಗಿ​ ಸದ್ದು ಮಾಡಿದೆ. ಈ ಹಿಂದೆ ಕೆಜಿಎಫ್​ 1 ಬಳಿಕ ಹೈದರಾಬಾದ್​ನ ಪ್ರಸಿದ್ಧ ಅಲೆಕ್ಸಾಂಡರ್ ಸಲೂನ್​​ನಲ್ಲಿ ಹೇರ್​ ಸ್ಟೈಲ್ ಮಾಡಿಸಿದ್ದರು. ಈ ಸಲೂನ್ ಅನೇಕ ದಶಕಗಳಿಂದ ಉತ್ತಮ ಹೇರ್ ಸ್ಟೈಲ್ ಮೂಲಕ ಪ್ರಸಿದ್ಧಿ ಪಡೆದಿದೆ. ಟಾಲಿವುಡ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್​ವುಡ್‌ನ ಕೆಲ ಸ್ಟಾರ್​ಗಳೂ ಕೂಡ ಇಲ್ಲಿ ಹೇರ್ ಸ್ಟೈಲ್ ಮಾಡಿಸುತ್ತಾರೆ.

Rocking Star Yash
ರಾಕಿಂಗ್​​ ಸ್ಟಾರ್​ ಯಶ್​ (ANI)

ಇದನ್ನೂ ಓದಿ: ಹುಬ್ಬಳ್ಳಿ ಶ್ರೀಸಿದ್ದಾರೂಢ ಮಠದ ಧರ್ಮದರ್ಶಿಯಿಂದ ದರ್ಶನ್​​​​​ಗೆ ಸಿದ್ದಾರೂಢರ ಚರಿತ್ರೆ ಪುಸ್ತಕ ರವಾನೆ - Siddharoodha Charitre to Darshan

ಸದ್ಯ 'ಟಾಕ್ಸಿಕ್' ಚಿತ್ರ ಮಾಡುತ್ತಿರುವ ಯಶ್, ಅಂಬಾನಿ ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ದು, ಹೊಸ ಹೇರ್ ಸ್ಟೈಲ್​ನಿಂದಲೇ ಸೌಂಡ್ ಮಾಡುತ್ತಿದ್ದಾರೆ. ಹೌದು, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಯಶ್ ಕೂದಲಿಗೆ ಹೊಸ ಟಚ್ ಕೊಟ್ಟಿದ್ದಾರೆ. ಹೊಸದಾಗಿ ಮಾಡಿಸಿಕೊಂಡಿರುವ ಹೇರ್ ಸ್ಟೈಲ್ ಇದೀಗ ಟ್ರೆಂಡ್ ಆಗುತ್ತಿದೆ. ಈ ಹೇರ್ ಸ್ಟೈಲ್​​ನ ಹೆಸರು ಪಾಂಪಡೋರ್ ಸ್ಟೈಲ್ ಅಂತೆ.

ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆ ಮಗಳೊಂದಿಗೆ ದೇಶಕ್ಕೆ ವಾಪಸ್ಸಾದ ಐಶ್ವರ್ಯಾ - ವಿಡಿಯೋ - Aishwarya Rai

ಯಶ್ ಆಪ್ತರೊಬ್ಬರು ಹೇಳುವ ಹಾಗೆ, ಹೇರ್​ ಸ್ಟೈಲ್​​ ಬದಲಾಯಿಸಿರುವುದು 'ಟಾಕ್ಸಿಕ್' ಸಿನಿಮಾಗಾಗಿ‌. ಈ ಚಿತ್ರದಲ್ಲಿ ಯಶ್ ಅವರ ಪಾತ್ರ ಯಂಗ್ ಆ್ಯಂಡ್ ಡೈನಾಮಿಕ್ ಆಗಿರಲಿದೆ. ಅದಕ್ಕೆ ಈ ರೀತಿಯಲ್ಲಿ ಹೇರ್ ಕಟ್ ಮಾಡಿಸಲಾಗಿದೆ.

Last Updated : Aug 1, 2024, 4:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.