ಕನ್ನಡ ಚಿತ್ರರಂಗದಲ್ಲಿ ಖಳನಟ ಅಲ್ಲದೇ ಪ್ರಮುಖ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ರಂಗಭೂಮಿ ಕಲಾವಿದ ಪ್ರಮೋದ್ ಶೆಟ್ಟಿ. 'ಲಾಫಿಂಗ್ ಬುದ್ಧ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗುತ್ತಿರುವ ಪ್ರಮೋದ್ ಶೆಟ್ಟಿ ಸಿನಿಮಾಗಾಗಿ ಎಷ್ಟು ಕೆ.ಜಿ ದಪ್ಪ ಆಗಿದ್ದರೆಂಬ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ. ಇಂದು ಚಿತ್ರದ 'ಎಂಥಾ ಚೆಂದಾನೆ ಇವಳು..' ಎಂಬ ಹಾಡು ಅನಾವರಣಗೊಂಡಿದೆ.
ಲಾಫಿಂಗ್ ಬುದ್ಧ, ಶೀರ್ಷಿಕೆಯೇ ಹೇಳುವ ಹಾಗೇ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ. ಈ ಚಿತ್ರದ ಕಥೆ ಕೇಳಿದಾಗ, ನಾನು ರಿಷಬ್ ಶೆಟ್ಟಿ ಅವರಿಗೆ ಹೇಳಿದೆ. ಆಗ ರಿಷಬ್ ಸಿನಿಮಾ ಮಾಡೋಣ ಅಂತಾ ಹೇಳಿದ್ರು. ಆಗ ಹೀರೋ ಯಾರು ಅನ್ನೋದು ಗೊತ್ತಿರಲಿಲ್ಲ. ರಿಷಬ್ ಬಂದು ಈ ಸಿನಿಮಾಗೆ ನೀನೇ ಹೀರೋ ಅಂದ್ರು. ಬಜೆಟ್ ಕೇಳಿ ನಾನು ಬೇಡ ಅಂದೆ. ಆಗ ರಿಷಬ್, ನಾನು ಈ ಸಿನಿಮಾ ನಿರ್ಮಾಣ ಮಾಡುತ್ತಿರೋದು ಒಂದೊಳ್ಳೆ ಕಥೆಯಿಂದ ಅಂತಾ ಹೇಳಿದ ಬಳಿಕ ಲಾಫಿಂಗ್ ಬುದ್ಧ ಚಿತ್ರ ಶುರುವಾಯಿತು ಎಂದು ತಿಳಿಸಿದರು.
ಸದ್ಯ ಬಿಡುಗಡೆ ಆಗಿರುವ ಪೋಸ್ಟರ್ಗಳಲ್ಲಿ ಪ್ರಮೋದ್ ಶೆಟ್ಟಿ ದೊಡ್ಡ ಹೊಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಟ್ಟೆಗಾಗಿ ಪ್ರಮೋದ್ ನಿಜವಾಗಿಯೂ ತೂಕ ಹೆಚ್ಚಿಸಿಕೊಂಡ್ರಾ ಅಥವಾ ಡೂಪ್ಲಿಕೇಟ್ ಆ? ಎಂಬ ಅನುಮಾನ ಪ್ರೇಕ್ಷಕರಲ್ಲಿದೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್, ಸಿನಿಮಾದ ಪಾತ್ರ ಚೆನ್ನಾಗಿ ಬರಲಿ ಎಂದು ನಾನು 30 ಕೆ.ಜಿ ತೂಕ ಹೆಚ್ಚಿಸಿಕೊಂಡೆ. ನಂತರ ಶೂಟಿಂಗ್ ಮಾಡಿದೆವು. ನಂತರ ನೈಟ್ ಪಾರ್ಟಿಗಳನ್ನು ಮಾಡದೇ ಆರು ತಿಂಗಳು ಶಿಸ್ತುಬದ್ಧ ಡಯೆಟ್ ಪಾಲಿಸಿ 25 ಕೆ.ಜಿ ತೂಕ ಇಳಿಸಿದ್ದೇನೆ ಎಂದು ತಿಳಿಸಿದರು.
ಈ ಸಿನಿಮಾ ಬಗ್ಗೆ ಮಾತನಾಡುವ ವೇಳೆ ಗೆಳೆಯ ರಿಷಬ್ ಶೆಟ್ಟಿ ಅವರ ಸಿನಿಮಾ ಫ್ಯಾಷನ್ ಬಗ್ಗೆ ಅಚ್ಚರಿ ವಿಷಯವೊಂದನ್ನು ಹಂಚಿಕೊಂಡರು. ಬೆಲ್ ಬಾಟಮ್, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಂತಾರ ಅಂತಂಹ ಸಿನಿಮಾಗಳನ್ನು ನಿರ್ದೇಶನ ಮಾಡಿ, ಅಭಿನಯಿಸಿ, ನಿರ್ಮಾಣ ಮಾಡಿದ್ದರು. ಆದ್ರೆ ರಿಷಬ್ಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲ. ಆರ್.ಆರ್ ನಗರದಲ್ಲಿ ಇಂದಿಗೂ ಬಾಡಿಗೆ ಮನೆಯಲ್ಲಿ ಇದ್ದಾರೆ ಎಂಬ ಅಚ್ಚರಿ ಸಂಗತಿ ಹಂಚಿಕೊಂಡರು.
ಒಂದು ವರ್ಷದ ಹಿಂದೆ ಹಿರಿಯ ನಟ ದ್ವಾರಕೀಶ್ ಮನೆಯನ್ನು ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಅನ್ನೋದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಮಾತಿಗೆ ಉತ್ತರಿಸಿದ ಪ್ರಮೋದ್ ಶೆಟ್ಟಿ ಯಾವುದೋ ಒಂದು ಕಾರಣಕ್ಕೆ ದ್ವಾರಕೀಶ್ ಅವರ ಮನೆಯನ್ನು ಯಾರಿಗೋ ಕೋಡೋದಿಕ್ಕೆ ಖರೀದಿ ಮಾಡಿದ್ದು. ಅದು ಯಾರಿಗೆ ಅನ್ನೋದು ಬೇಡ. ಆದ್ರೆ ಆ ಮನೆಯಲ್ಲಿ ರಿಷಬ್ ಶೆಟ್ಟಿ ಇಲ್ಲ. ಇಂದಿಗೂ ಆ ಮನೆ ಖಾಲಿ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: 'ನಾನು ಭೂಮಿ ಮೇಲಿನ ಅದೃಷ್ಟಶಾಲಿ': ಚಿಯಾನ್ ವಿಕ್ರಮ್ ಭೇಟಿಯಾದ ಖುಷಿಯಲ್ಲಿ ರಿಷಬ್ ಶೆಟ್ಟಿ - Rishab on Chiyaan Vikram
ನಾವು ಸಿನಿಮಾ ಹುಚ್ಚರು. ಸಿನಿಮಾದಿಂದ ಬಂದ ಹಣವನ್ನು ರಿಷಬ್ ಶೆಟ್ಟಿ ಸಿನಿಮಾಗೆ ಹಾಕುತ್ತಾರೆ. ಅದಕ್ಕೆ ಸಾಕ್ಷಿ ಲಾಫಿಂಗ್ ಬುದ್ಧ. ಮೊದಲು ಈ ಸಿನಿಮಾವನ್ನು ಕಡಿಮೆ ಬಜೆಟ್ನಲ್ಲಿ ಮಾಡೋಣ ಅಂದುಕೊಂಡ್ವಿ. ಆದರೆ ಈ ಚಿತ್ರದ ಕಥೆಯ ಡಿಮ್ಯಾಂಡ್ ಹಿನ್ನೆಲೆ ಪೊಲೀಸ್ ಸ್ಟೇಷನ್ ಸೆಟ್ ಹಾಕಿ ಚಿತ್ರೀಕರಣ ಮಾಡಿದೆವು. ಬಜೆಟ್ ಕೂಡ ಜಾಸ್ತಿ ಆಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾವನ್ನ 1 ಕೋಟಿಯಲ್ಲಿ ಮಾಡೋಣ ಅಂದುಕೊಂಡ್ವಿ. ಆದರೆ ಸಿನಿಮಾ ಬಿಡುಗಡೆ ಪ್ರಮೋಷನ್ ಅಂತಾ ಹೋಗಿ 2ರಿಂದ 3 ಕೋಟಿ ಆಗಿತ್ತು. ಆ ಸಿನಿಮಾ ಚೆನ್ನಾಗಿ ಓಡಿದ ಬಳಿಕ ಕೆಲ ನಟರಿಗೆ ಸಂಭಾವನೆ ಕೊಟ್ಟೆವು. ಈ ಸಿನಿಮಾಗೆ 4 ರಿಂದ 5 ಕೋಟಿ ರೂ. ಆಗಿದೆ ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಎಲ್ಲವೂ 'ಪೌಡರ್'ಮಯ: ದಿಗಂತ್, ಧನ್ಯಾ, ಶರ್ಮಿಳಾ ಚಿತ್ರದ ಟ್ರೇಲರ್ ನೋಡಿ - Powder Trailer
ಈ ಆಗಸ್ಟ್ನಲ್ಲಿ ಸಿನಿಮಾಗಳ ಸುಗ್ಗಿ ಶುರುವಾಗಲಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವಂತೆ ಆಗುತ್ತದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಆ ಮಜಾ ಮನೆಯಲ್ಲಿ ಸಿಗೋದಿಲ್ಲ. ಅದಕ್ಕೆ ಸಿನಿಮಾವನ್ನು ನೊಡಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೆಚ್ಚಾಗಿ ಬರಬೇಕು ಅಂತಾ ಸಿನಿಮಾ ಪ್ರೇಮಿಗಳಲ್ಲಿ ಪ್ರಮೋದ್ ಶೆಟ್ಟಿ ಮನವಿ ಮಾಡಿಕೊಂಡರು.