ETV Bharat / entertainment

'ಕಾಂತಾರ 2 ಬಗ್ಗೆ ಏನೂ ಹೇಳ್ಳಿಕೆ ಹೋಗ್ಬೇಡಿ ಮಾರಾಯ್ರೆ': ರಿಷಬ್ ಶೆಟ್ಟಿ - Rishab Shetty

ಕಾಂತಾರ ಪಾರ್ಟ್​ 2 ಚಿತ್ರೀಕರಣ ನಡೆಯುತ್ತಿದೆ. ಈ ಬಗ್ಗೆ ನಟ ರಿಷಬ್ ಶೆಟ್ಟಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಚಿತ್ರದ ರಹಸ್ಯ ಕಾಪಾಡಿಕೊಂಡರು.

ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ (ETV Bharat)
author img

By ETV Bharat Karnataka Team

Published : May 8, 2024, 10:08 AM IST

ರಿಷಬ್ ಶೆಟ್ಟಿ (ETV Bharat)

ಉಡುಪಿ: ಕಾಂತಾರ 2 ಸಿನಿಮಾದ ಬಗ್ಗೆ ಈಗ ಏನೂ ಹೇಳಲ್ಲ. ಚಿತ್ರವನ್ನು ಜನ ಥಿಯೇಟರ್​ನಲ್ಲೇ ನೋಡಿದರೆ ಒಳ್ಳೆಯದು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಮಂಗಳವಾರ ಲೋಕಸಭೆ ಚುನಾವಣೆಗೆ ಮತ ಹಾಕಲು ಮತಗಟ್ಟೆಗೆ ಬಂದಿದ್ದಾಗ ನಟನನ್ನು ಸುತ್ತುವರಿದ ಮಾಧ್ಯಮದವರು ಮುಂಬರುವ ಕಾಂತಾರ ಪಾರ್ಟ್‌ 2 ಸಿನಿಮಾ ಕುರಿತು ಪ್ರಶ್ನಿಸಿದರು.

ಸಿನಿಮಾ ಬಗ್ಗೆ ಏನು ನಿರೀಕ್ಷಿಸಬಹುದು?: ಅದನ್ನು ಸಿನಿಮಾದಲ್ಲೇ ನೀವು ನೋಡಿ. ಶೂಟಿಂಗ್​ ಶುರುವಾಗಿದೆ. ಶೂಟಿಂಗ್​, ಸಿನಿಮಾ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಮಾಹಿತಿ ನೀಡಿದರೆ ಉತ್ತಮ. ಈ ಬಗ್ಗೆ ವಿಚಾರಗಳು ಗೊತ್ತಾದರೆ ನೀವು, ಊರವರು ಏನನ್ನೂ ಹೇಳಲು ಹೋಗಬೇಡಿ. ಯಾರದರೂ ಸಿಕ್ಕಿದ್ರೂ ನಾವು, "ಏನೂ ಹೇಳ್ಳಿಕೆ ಹೋಗಬೇಡಿ ಮಾರಾಯ್ರೆ' ಅಂತೀವಿ ಎನ್ನುತ್ತಾ ನಕ್ಕರು.

ಸಿನಿಮಾ ಚಿತ್ರೀಕರಣ ನಾವು ಅಂದುಕೊಂಡಂತೇ ಉತ್ತಮವಾಗಿ ನಡೆಯುತ್ತಿದೆ. ಮೊದಲಿಗಿಂತಲೂ ಈಗ ಹೆಚ್ಚಿನ ಜವಾಬ್ದಾರಿ ಇದೆ. ಈ ಬಾರಿ ತುಂಬಾ ದೊಡ್ಡ ತಂಡ ಕೆಲಸ ಮಾಡುತ್ತಿದೆ. ನನ್ನಂತಹ ಒಬ್ಬ ಫಿಲಂ ಮೇಕರ್​ಗೆ ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಪುಣ್ಯ. ತುಂಬಾ ದೂರದಿಂದ ಬಂದಿರುವ ಟೆಕ್ನಿಷಿಯನ್ಸ್​​ ಇದ್ದಾರೆ ಎಂದು ಹೇಳಿದರು.

ಕಾಂತಾರ 2 ಸಿನಿಮಾಗೆ ಒತ್ತಡವಿದೆಯಾ?: ಚಿತ್ರೀಕರಣದಲ್ಲಿ ಯಾವುದೇ ಒತ್ತಡವಿಲ್ಲ. ನನಗೆ ಕಾಂತಾರ 1 ಬಜೆಟ್​, ಸಮಯ, ಟೆಕ್ನಿಕಲಿ ದೊಡ್ಡ ಸಿನಿಮಾವಾಗಿತ್ತು. ಈ ಸಲ ಕೂಡ ಹಾಗೇ ಇದೆ. ಅದೇ ಅನುಭವ. ಮತ್ತೆ ಸಿನಿಮಾದಿಂದ ಕಲಿಯುವ ಪ್ರಾಸೆಸ್ ಇದ್ದೇ ಇರುತ್ತದೆ ಎಂದು ತಿಳಿಸಿದರು​.

ಬಹಳ ಸಮಯದಿಂದ ಕೂದಲು, ಗಡ್ಡ ಬಿಟ್ಟಿದ್ದೇನೆ. ಕಾಂತಾರಕ್ಕಾಗಿ ಒಂದು ವರ್ಷದಿಂದ ಬೆಳೆಸಿದ್ದೇನೆ. ಹಾಗಾಗಿ ಆ ಬಗ್ಗೆ ಹೊಸ ವಿಷಯವಿಲ್ಲ ಎಂದರು.

ಮಾಧ್ಯಮದವರನ್ನು ಸದ್ಯ ಶೂಟಿಂಗ್​ ಸೆಟ್​ಗೆ ಕರೆಯುವ ಹಾಗಿಲ್ಲ. ಚಿತ್ರೀಕರಣ ಸಂಪೂರ್ಣವಾದ ಮೇಲೆ ಖಂಡಿತವಾಗಿ ಭೇಟಿಯಾಗುವಂಥದ್ದು ಇದ್ದೇ ಇರುತ್ತದೆ. ಆದರೆ ಈಗ ಕಥೆ, ಸಿನಿಮಾ ವಿಚಾರ ರಹಸ್ಯವಾಗಿದ್ದರೆ ಒಳ್ಳೆಯದು. ಮುಖ್ಯವಾಗಿ ಸಿನಿಮಾದ ಬಗ್ಗೆ ಅಲ್ಲಿ ಇಲ್ಲಿ ಹಾಗಂತೆ, ಹೀಗಂತೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿರುವುದು ಅತಿಯಾಗಿರುವುದರಿಂದ ಜನರಿಗೆ ಸಿನಿಮಾ ಕಥೆಯ ಕುತೂಹಲ ಹೋಗುತ್ತದೆ. ಮೊದಲೇ ತಿಳಿದರೆ ಪ್ರೇಕ್ಷಕರಿಗೆ ಥಿಯೇಟರ್​ನಲ್ಲಿ ನೊಡಲು ಆಸಕ್ತಿ ಇರುವುದಿಲ್ಲ. ಇದರಿಂದ ಯಾವುದೇ ಮಾಹಿತಿ ಹಂಚಿಕೊಳ್ಳಲ್ಲ ಎಂದು ಹೇಳಿದರು.

ಕರಾವಳಿಯಲ್ಲೇ ಶೂಟಿಂಗ್​?: ಕಳೆದ ಬಾರಿಯೂ ಇಲ್ಲಿಯೇ ಸುತ್ತಮುತ್ತ ಶೂಟಿಂಗ್ ಮಾಡಲಾಗಿತ್ತು. ಈ ಬಾರಿಯೂ ಇಲ್ಲಿಯೇ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: 'ಪುಷ್ಪ 2' ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಮುಂದಿನ ತಿಂಗಳು ಎರಡನೇ ಹಾಡು ಅನಾವರಣ - Pushpa 2 Song

ETV Bharat Logo

Copyright © 2024 Ushodaya Enterprises Pvt. Ltd., All Rights Reserved.