ETV Bharat / entertainment

ಮಂಡಿಯೂರಿ ಕುಳಿತು ಛಾಯಾಗ್ರಾಹಕನ ಫೋಟೋ ಕ್ಲಿಕ್ಕಿಸಿದ ನಟಿ ರಶ್ಮಿಕಾ ಮಂದಣ್ಣ: ವಿಡಿಯೋ ವೈರಲ್​​ - Rashmika Mandanna - RASHMIKA MANDANNA

ಡೌನ್-ಟು-ಅರ್ಥ್ ಸ್ವಭಾವದಿಂದ ಗಮನ ಸೆಳೆದಿರುವ ನ್ಯಾಷನಲ್​ ಕ್ರಶ್​​ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Rashmika Mandanna
ರಶ್ಮಿಕಾ ಮಂದಣ್ಣ (Rashmika Mandanna Instagram)
author img

By ETV Bharat Karnataka Team

Published : Jun 6, 2024, 12:15 PM IST

Updated : Jun 6, 2024, 12:30 PM IST

ಬಹುಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ದೊಡ್ಡದಿದೆ. ವಿನಮ್ರ ಸ್ವಭಾವದಿಂದ ಗುರುತಿಸಿಕೊಂಡಿರುವ ನಟಿಯ ಹೃದಯಸ್ಪರ್ಶಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಪಾಪರಾಜಿಯೊಬ್ಬರ ಜೊತೆ ಬಹಳ ಫ್ರೆಂಡ್ಲಿಯಾಗಿ ನಡೆದುಕೊಂಡಿರುವ ನಟಿಯ ನಡೆ ಅಭಿಮಾನಿಗಳ ಮನ ಗೆದ್ದಿದೆ. ಇತರರ ಫೊಟೋ ಕ್ಲಿಕ್ಕಿಸುವ ಕ್ಯಾಮರಾಮ್ಯಾನ್​​ನ ಫೋಟೋಗಳನ್ನು ರಶ್ಮಿಕಾ ಸೆರೆಹಿಡಿದಿದ್ದಾರೆ. ನಟಿಯ ನಗುಮಮೊಗ, ನಡೆನುಡಿ ಇಂಟರ್​​​ನೆಟ್​​ನಲ್ಲಿ ಸದ್ದು ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗುತ್ತಿರುವ ಈ ವಿಡಿಯೋದಲ್ಲಿ ರಶ್ಮಿಕಾ ಆಕರ್ಷಕ ಲೊಕೇಶನ್​ ಒಂದರಲ್ಲಿ ನಿಂತು ತಮ್ಮದೇ ಆಲೋಚನೆಯಲ್ಲಿ ಮುಳುಗಿದ್ದಾರೆ. ನಟಿಯ ವಿಡಿಯೋ ಕ್ಯಾಮರಾಮ್ಯಾನ್​​​​ನ ಕ್ಯಾಮರಾದಲ್ಲಿ ಸೆರೆಯಾಗಿದೆ. ನಟಿ ಆ ವ್ಯಕ್ತಿಯಿಂದ ಕ್ಯಾಮರಾ ತೆಗೆದುಕೊಂಡು ಅವರ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ವೃತ್ತಿಪರ ಛಾಯಾಗ್ರಾಹಕಿಯಂತೆ ನಿಂತು ಫೋಟೋ ಕ್ಲಿಕ್ಕಿಸಲಾರಂಭಿಸಿದ್ದಾರೆ. ಕ್ಯಾಮರಾಮ್ಯಾನ್‌ನ ಪರ್ಫೆಕ್​​​ ಫೋಟೋಗಾಗಿ ನಟಿ ಮಂಡಿಯೂರಿ ಕುಳಿತು ಉತ್ತಮ ಶಾಟ್​ಗಳನ್ನು ಕ್ಲಿಕ್ಕಿಸಿದ್ದಾರೆ.

ಈ ವಿಡಿಯೋದ ಲೊಕೇಶನ್​​​​ ಮಾಹಿತಿ ಸ್ಪಷ್ಟವಾಗಿರದಿದ್ದರೂ, ಸೋಷಿಯಲ್​ ಮೀಡಿಯಾ ಪೋಸ್ಟ್‌ಗಳು ಇದು ಇಟಲಿಯ ಪೋರ್ಟೋಫಿನೋ ಎಂದು ಸೂಚಿಸಿದೆ. ರಶ್ಮಿಕಾ ಅಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್​​ ಕ್ರೂಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ತಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆಂದು ಅಭಿಮಾನಿಗಳು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಶಾರುಖ್​ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಹೆಸರಲ್ಲಿ ಫೇಕ್​​ ಆಫರ್ ಲೆಟರ್​​: ಎಚ್ಚರ ವಹಿಸುವಂತೆ ಸೂಚನೆ - Red Chillies Entertainment

ಇನ್ನು ನಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯ ಸಿನಿಮಾ ಅನಿಮಲ್​ 2023ರ ಡಿಸೆಂಬರ್​​ನಲ್ಲಿ ತೆರೆಕಂಡು ಸೂಪರ್​ ಡೂಪರ್ ಹಿಟ್​ ಆಗಿದೆ. ಮುಂದಿನ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಇದೇ ಸಾಲಿನಲ್ಲಿ ತೆರೆಕಾಣಲಿದೆ. ಪುಷ್ಪ ರಾಜ್ ಪಾತ್ರದಲ್ಲಿ ನಟಿಸಲಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಇದಲ್ಲದೇ ದಿ ಗರ್ಲ್​ಫ್ರೆಂಡ್​​​, ಛಾವಾ, ರೈನ್​ಬೋ ಪ್ರಾಜೆಕ್ಟ್​ಗಳು ನಟಿ ಬಳಿ ಇದ್ದು, ಕೆಲ ದಿನಗಳ ಹಿಂದಷ್ಟೇ ಸಲ್ಮಾನ್​ ಖಾನ್​ ಜೊತೆಗೆ ಸಿಖಂದರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್ ಯಾರು ಗೊತ್ತಾ? - Richest Star Kid

ನಟಿಯ ಪ್ರತಿಭೆ ಮಾತ್ರವಲ್ಲದೇ ಡೌನ್-ಟು-ಅರ್ಥ್ ಸ್ವಭಾವದಿಂದ ಅಭಿಮಾನಿಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಇದೆ. ನಟಿಯ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಸೇರಿದಂತೆ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಪುಷ್ಪ: ದಿ ರೈಸ್​ ಸಿನಿಮಾದ ಮುಂದುವರಿದ ಭಾಗ ಪುಷ್ಪ: ದಿ ರೂಲ್​​​​ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Last Updated : Jun 6, 2024, 12:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.