ETV Bharat / entertainment

ಪುಷ್ಪ 2​​ ಸೆಟ್​​ನಿಂದ ರಶ್ಮಿಕಾ ಮಂದಣ್ಣ ಲುಕ್​​ ವೈರಲ್: ಮಧುಮಗಳಂತೆ ಕಾಣಿಸಿಕೊಂಡ ನಟಿ - Rashmika Mandanna

2024ರ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'ರ ಶೂಟಿಂಗ್​​ ಸೆಟ್​​​ನಿಂದ ನಾಯಕ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್​​ ಆಗಿದೆ.

Rashmika Mandanna
ನಟಿ ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Mar 20, 2024, 12:48 PM IST

Updated : Mar 20, 2024, 12:58 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಅಭಿನಯದ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರ ಗಮನ ಕೇಂದ್ರೀಕೃತವಾಗಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ ಪಾತ್ರ ವಹಿಸುತ್ತಿರೋದ್ರಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 2024ರ ಬಹುನಿರೀಕ್ಷಿತ ಚಿತ್ರ 'ಪುಷ್ಪ 2'ರ ಚಿತ್ರೀಕರಣ ಭರದಿಂದ ಸಾಗಿದೆ.

'ಪುಷ್ಪ: ದಿ ರೂಲ್​' ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನದಂದು ಚಿತ್ರಮಂದಿರ ಪ್ರವೇಶಿಸಲಿದೆ. ರಶ್ಮಿಕಾ ಮಂದಣ್ಣ ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಪುಷ್ಪ 2' ಸೆಟ್‌ನಿಂದ ನ್ಯಾಶನಲ್​ ಕ್ರಶ್​ನ ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಶೂಟಿಂಗ್​ ಲೊಕೇಶನ್​ನಲ್ಲಿ ರಶ್ಮಿಕಾ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಪ್ರಸಿದ್ಧ ಯಾಗಂತಿ ದೇವಸ್ಥಾನದ ಬಳಿ ಸುಕುಮಾರ್​ ನಿರ್ದೇಶನದ ಪುಷ್ಪ 2 ಚಿತ್ರೀಕರಣ ಭರದಿಂದ ಸಾಗಿದೆ. ಲೊಕೇಶನ್​ನಿಂದ ವೈರಲ್ ಆಗಿರುವ ಫೋಟೋ-ವಿಡಿಯೋಗಳಲ್ಲಿ, ರಶ್ಮಿಕಾ ಕೆಂಪು ಸೀರೆಯಲ್ಲಿ ವಧುವಿನಂತೆ ಕಂಗೊಳಿಸುತ್ತಿರುವುದನ್ನು ನೋಡಬಹುದು. ಸೀರೆಗೆ ತಕ್ಕ ಒಡವೆಗಳು, ಸಿಂಧೂರದಿಂದ ಕಿರಿಕ್​ ಪಾರ್ಟಿ ಬೆಡಗಿ ಬಹಳ ಆಕರ್ಷಕವಾಗಿ ಕಂಡುಬಂದಿದ್ದಾರೆ. ಈ ಚಿತ್ರದಲ್ಲಿ ಪುಷ್ಪರಾಜ್ ಪತ್ನಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮುಂದುವರಿದಿರುವುದು ನಿಮಗೆ ತಿಳಿದಿರುವ ವಿಚಾರವೇ.

ಇದಕ್ಕೂ ಮುನ್ನ ಸಿನಿಮಾದ ಲೀಡ್​ ರೋಲ್​ನಲ್ಲಿರುವ ಸೌತ್​ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ವಿಶಾಖಪಟ್ಟಣಕ್ಕೆ ಆಗಮಿಸಿದ್ದರು. ಅಲ್ಲಿ ನಟನನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಸದ್ಯ ನಟಿಯ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

'ಪುಷ್ಪ 2' ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರು ಚಿತ್ರೀಕರಣದಲ್ಲಿ ಬಹಳ ದಿನಗಳಿಂದ ಬ್ಯುಸಿಯಾಗಿದ್ದರು. ಚಿತ್ರ ಕೊಂಚ ವಿಳಂಬವಾಗಿದೆ. ಚಿತ್ರೀಕರಣ ಶೀಘ್ರದಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರಿಯರು ಕೂಡ ಈ ಚಿತ್ರಕ್ಕಾಗಿ ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರಧಾನ 'ತಪಸ್ಸಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

ರಶ್ಮಿಕಾ ಮಂದಣ್ಣ ಕೊನೆಯದಾಗಿ 'ಅನಿಮಲ್​' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್​ ಸೂಪರ್​ ಸ್ಟಾರ್ ರಣ್​ಬೀರ್ ಕಪೂರ್ ಜೊತೆ ಪರದೆ ಹಂಚಿಕೊಂಡಿದ್ದರು. ಈ ಜೋಡಿ ಸ್ಕ್ರೀನ್​​ ಶೇರ್ ಮಾಡಿದ ಚೊಚ್ಚಲ ಚಿತ್ರವಿದು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತಾದರೂ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 900 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು. 'ಪುಷ್ಪ 2' ಬಿಡುಗಡೆಗೆ ಸಜ್ಜಾಗುತ್ತಿದೆ. ದಿ ಗರ್ಲ್​ಫ್ರೆಂಡ್​, ರೈನ್​ಬೋ, ಛಾವಾ ಪ್ರೊಜೆಕ್ಟ್​​ಗಳು ನಟಿಯ ಕೈಯಲ್ಲಿದೆ.

ಇದನ್ನೂ ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

Last Updated : Mar 20, 2024, 12:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.