ETV Bharat / entertainment

ಸೆಪ್ಟೆಂಬರ್​​​ಗೆ ಮೊದಲ ಮಗು ಬರಮಾಡಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ-ರಣ್​ವೀರ್​ ಸಿಂಗ್​ - Ranveer Singh

ದೀಪ್​ವೀರ್ ದಂಪತಿ​​ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ.

Ranveer Singh and Deepika Padukone
ದೀಪಿಕಾ ಪಡುಕೋಣೆ-ರಣ್​ವೀರ್​ ಸಿಂಗ್​
author img

By ETV Bharat Karnataka Team

Published : Feb 29, 2024, 10:44 AM IST

Updated : Feb 29, 2024, 1:06 PM IST

ಬಾಲಿವುಡ್​​ನ ಅತ್ಯಂತ ಜನಪ್ರಿಯ ತಾರಾ ದಂಪತಿ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ದೀಪಿಕಾ ಪಡುಕೋಣೆ ಈ ವರ್ಷ ತಾಯಿಯಾಗಲಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಅವರೇ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಬಾಲಿವುಡ್​​ನಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ದೀಪ್​ವೀರ್​ ಜೋಡಿ ಆರು ವರ್ಷಗಳ ಡೇಟಿಂಗ್ ನಂತರ 2018ರ ನವೆಂಬರ್​​ 14ರಂದು ವಿದೇಶದಲ್ಲಿ ಹಸೆಮಣೆ ಏರಿದ್ದರು. ವಿವಾಹವಾಗಿ ಐದು ವರ್ಷಗಳ ಬಳಿಕ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಈ ಇಬ್ಬರೂ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಪೋಷಕರಾಗಲಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗು ಸೆಪ್ಟೆಂಬರ್​​ರಲ್ಲಿ ಜನಿಸಲಿದೆ ಎಂದು ಹೇಳಿಕೊಂಡಿದ್ದಾರೆ. ಶೇರ್ ಮಾಡಿರುವ ಪೋಸ್ಟ್ ವಿಭಿನ್ನವಾಗಿದ್ದು, ನೆಟ್ಟಿಗರನ್ನು ಆಕರ್ಷಿಸಿದೆ.

ನಟಿಯ ಪ್ರೆಗ್ನೆನ್ಸಿ ಅನೌನ್ಸ್​​ಮೆಂಟ್​​ ಪೋಸ್ಟ್ ಮಗುವಿನ ಬಟ್ಟೆ, ಶೂ ಮತ್ತು ಆಟಿಕೆಗಳ ಚಿತ್ರಗಳನ್ನೊಳಗೊಂಡಿದೆ. ಪೋಸ್ಟ್‌ನಲ್ಲಿ ದೀಪಿಕಾ ಅವರ ಡೆಲಿವರಿ ತಿಂಗಳನ್ನು ಬರೆಯಲಾಗಿದೆ. ಸುತ್ತಲೂ ಈಗಾಗಲೇ ತಿಳಿಸಿದ ಚಿತ್ರಗಳಿದ್ದು, ಮಧ್ಯದಲ್ಲಿ "ಸೆಪ್ಟೆಂಬರ್ 2024" ಎಂದು ಬರೆಯಲಾಗಿದೆ. ಗುಡ್​​ ನ್ಯೂಸ್​ ಹೊರಬರುತ್ತಿದ್ದಂತೆ ಸಿನಿ ಸ್ನೇಹಿತರು, ಅಭಿಮಾನಿಗಳು ಕಾಮೆಂಟ್​​ ಸೆಕ್ಷನ್​ನಲ್ಲಿ ಅಭಿನಂದನೆ ತಿಳಿಸಲು ಶುರು ಹಚ್ಚಿಕೊಂಡಿದ್ದಾರೆ.

ಗರ್ಭಧಾರಣೆ ಬಗ್ಗೆ ದೀಪಿಕಾ ಶೀಘ್ರದಲ್ಲೇ ಅಧಿಕೃತ ಮಾಹಿತಿ ಕೊಡಲಿದ್ದಾರೆ ಎಂದು ಮೂಲವೊಂದು ಇತ್ತೀಚೆಗಷ್ಟೇ ಸುದ್ದಿವಾಹಿನಿಗೆ ತಿಳಿಸಿತ್ತು. ಇದೀಗ ತಾರಾ ದಂಪತಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಲಂಡನ್‌ನಲ್ಲಿ 77ನೇ BAFTA ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ದೀಪಿಕಾ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರು. ಅಂದು ಅವರ ನಡೆ ಬೇಬಿ ಬಂಪ್​ ಮುಚ್ಚಿಕೊಳ್ಳಲು ಯತ್ನಿಸಿದಂತಿತ್ತು. ಅಂದಿನಿಂದ ನಟಿ ಗರ್ಭಿಣಿ ಆಗಿರಬಹುದೆಂಬ ಊಹಾಪೋಹ ಎದ್ದಿತ್ತು. ಜನವರಿಯಲ್ಲಿ, "ರಣ್​ವೀರ್ ಮತ್ತು ನಾನು ಮಕ್ಕಳನ್ನು ಇಷ್ಟ ಪಡುತ್ತೇವೆ. ನಾವು ನಮ್ಮದೇ ಆದ ಸಂಪೂರ್ಣ ಕುಟುಂಬ ಹೊಂದಲು ಎದುರು ನೋಡುತ್ತಿದ್ದೇವೆ" ಎಂದು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: ಸೂಪರ್​ ಸ್ಟಾರ್ ದುಲ್ಕರ್​​ ಸಲ್ಮಾನ್​ ಸುತ್ತುವರಿದ ಅಭಿಮಾನಿಗಳು: ವಿಡಿಯೋ ನೋಡಿ

ಸಿನಿಮಾ ವಿಚಾರ ಗಮನಿಸೋದಾದರೆ, ದೀಪಿಕಾ ಇತ್ತೀಚೆಗೆ ಹೃತಿಕ್ ರೋಷನ್ ಜೊತೆ ವೈಮಾನಿಕ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಫೈಟರ್‌'ನಲ್ಲಿ ಕಾಣಿಸಿಕೊಂಡರು. ಕಲ್ಕಿ 2898 ಎಡಿ ಮುಂಬರುವ ಬಹುನಿರೀಕ್ಷಿತ ಚಿತ್ರ. ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್​ ಬಚ್ಚನ್ ಸೇರಿದಂತೆ ಸೂಪರ್​ ಸ್ಟಾರ್​ಗಳು ನಟಿಸಿದ್ದು, ಮೇ 9ರಂದು ತೆರೆಕಾಣಲಿದೆ.

ಇದನ್ನೂ ಓದಿ: ತಾಯಿಯಾಗಲಿದ್ದಾರಾ ದೀಪಿಕಾ ಪಡುಕೋಣೆ? ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಸದ್ದು

ಇನ್ನೂ ರಣ್​​ವೀರ್ ಸಿಂಗ್​, ರೋಹಿತ್ ಶೆಟ್ಟಿ ಅವರ ಸಿಂಗಮ್ ಎಗೇನ್‌ನಲ್ಲಿ ಸಿಂಬಾ ಪಾತ್ರವನ್ನು ಮುಂದುವರಿಸಲಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಜಯ್ ದೇವ್​​ಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಕರೀನಾ ಕಪೂರ್ ಖಾನ್ ಸಹ ನಟಿಸಿದ್ದಾರೆ. ಫರ್ಹಾನ್ ಅಖ್ತರ್ ಅವರ ಡಾನ್ 3 ಚಿತ್ರ 2025ರಲ್ಲಿ ಬಿಡುಗಡೆಯಾಗಲಿದೆ.

Last Updated : Feb 29, 2024, 1:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.