ETV Bharat / entertainment

ರಕ್ಷಿತ್​​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೇಲರ್​​ ಅನಾವರಣಕ್ಕೆ ದಿನ ನಿಗದಿ - Rakshit Shetty movie - RAKSHIT SHETTY MOVIE

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ಬ್ಯಾನರ್​ ಅಡಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ'. ಸೆಪ್ಟೆಂಬರ್​​ 5ಕ್ಕೆ ಬಿಡುಗಡೆ ಆಗಲಿರುವ ಈ ಸಿನಿಮಾದ ಟ್ರೇಲರ್​ ಅನಾವರಣಕ್ಕೀಗ ದಿನ ನಿಗದಿ ಆಗಿದೆ.

Ibbani Tabbida Ileyali poster
ಇಬ್ಬನಿ ತಬ್ಬಿದ ಇಳೆಯಲಿ ಪೋಸ್ಟರ್ (Film Poster, Producer Rakshit Shetty Instagram)
author img

By ETV Bharat Karnataka Team

Published : Aug 19, 2024, 1:30 PM IST

ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ'. ಸಿನಿಮಾವೊಂದರ ಶೀರ್ಷಿಕೆ ಚಿತ್ರಮಂದಿರಗಳಿಗೆ ಆಗಮಿಸುವ ಪ್ರೇಕ್ಷಕರಿಗೆ ಸಿಗುವ ಮೊದಲ ಆಮಂತ್ರಣ. ಆ ಹಾದಿಯಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ತನ್ನ ಆಕರ್ಷಕ ಶೀರ್ಷಿಕೆಯಿಂದಲೇ ಸಿನಿರಸಿಕರ ಗಮನ ಸೆಳೆದಿದೆ. ಒಂದೊಳ್ಳೆ ಕಂಟೆಂಟ್ ಅನ್ನು ಈ ಪ್ರೊಜೆಕ್ಟ್​​​​​ ಒಳಗೊಂಡಿರಲಿದೆ ಎಂಬುದರ ಸುಳಿವನ್ನು ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್ಸ್, ಹಾಡುಗಳು ಬಿಟ್ಟುಕೊಟ್ಟಿವೆ. ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಬಹುನಿರೀಕ್ಷಿತ ಟ್ರೇಲರ್​​ ಅನಾವರಣಕ್ಕೆ ದಿನ ನಿಗದಿ ಆಗಿದೆ.

ರಕ್ಷಿತ್​​ ಶೆಟ್ಟಿ ಅವರು ತಮ್ಮ ವಿಭಿನ್ನ ಸಿನಿಮಾಗಳಿಂದ ಗುರುತಿಸಲ್ಪಟ್ಟಿದ್ದಾರೆ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿರೋ ಹಿನ್ನೆಲೆ ಸಹಜವಾಗಿ ಪ್ರೇಕ್ಷಕರಲ್ಲಿ ಸಿನಿಮಾ ಹೇಗಿರಬಹುದೆಂಬ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್​ ಡೇಟ್​ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಇತ್ತೀಚೆಗಷ್ಟೇ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಶೀಘ್ರದಲ್ಲೇ ಚಿತ್ರಮಂದಿರ ಪ್ರವೇಶಿಸಲಿರುವ ಈ ಚಿತ್ರದ ಟ್ರೇಲರ್​​ ಅನಾವರಣಕ್ಕೀಗ ದಿನ ನಿಗದಿ ಆಗಿದೆ.

ಆಗಸ್ಟ್​​ 22ಕ್ಕೆ ಟ್ರೇಲರ್​​ ಬಿಡುಗಡೆ: ರಕ್ಷಿತ್​​ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್​​ ಚಿತ್ರದ ಪೋಸ್ಟರ್​ ಒಂದನ್ನು ಹಂಚಿಕೊಂಡಿದೆ. ಜೊತೆಗೆ, "ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಟ್ರೇಲರ್​​ ಆಗಸ್ಟ್​​ 22 ರಂದು ನಿಮ್ಮ ಮುಂದೆ. ಸುಂದರ ಕನಸಿನ ಭಾಗಗಳನ್ನು ಒಂದೆಡೆ ಸೇರಿಸುತ್ತಿದ್ದೇವೆ. ಜೊತೆಗೆ ಅದನ್ನು ಪ್ರೀತಿ, ಮ್ಯಾಜಿಕ್​ನಿಂದ ಚಿಮುಕಿಸಲಿದ್ದೇವೆ. ಇಬ್ಬನಿ ತಬ್ಬಿದ ಇಳೆಯಲಿ ಟ್ರೇಲರ್​ - ಆಗಸ್ಟ್​ 22'' ಎಂದು ಬರೆದುಕೊಂಡಿದೆ.

ಪೋಸ್ಟರ್​ ಹಂಚಿಕೊಂಡ ನಿರ್ಮಾಪಕ ರಕ್ಷಿತ್​​ ಶೆಟ್ಟಿ, ಇದು ಯಾವುದೇ ಸುಂದರ, ಮ್ಯಾಜಿಕ್​​ ಕನಸಿಗೆ ಕಡಿಮೆಯಿಲ್ಲ. ಇಬ್ಬನಿ ತಬ್ಬಿದ ಇಳೆಯಲಿ ಟ್ರೇಲರ್​ ಆಗಸ್ಟ್​ 22ಕ್ಕೆ ಬಿಡುಗಡೆ ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ತಿಳಿದ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಸಂತಸದ ಜೊತೆಗೆ ಉತ್ಸಾಹ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ರಕ್ಷಿತ್​ ಶೆಟ್ಟಿ ನಿರ್ಮಾಣದ ಚಿತ್ರ ನೋಡಲು ಅಭಿಮಾನಿಗಳ ಕಾತರ - Ibbani Tabbida Ileyali

ಇತ್ತೀಚೆಗಷ್ಟೇ, ವರಮಹಾಲಕ್ಷ್ಮಿ ಹಬ್ಬದ ದಿನದಂದು (ಆಗಸ್ಟ್​ 16, ಶುಕ್ರವಾರ) ರಕ್ಷಿತ್​ ಶೆಟ್ಟಿ ಅವರ ಚಿತ್ರತಂಡ ಸಿನಿಪ್ರಿಯರಿಗಾಗಿ ಸಿನಿಮಾ ಬಿಡುಗಡೆ ಸುದ್ದಿಯನ್ನು ಹಂಚಿಕೊಂಡಿತ್ತು. ಹೌದು, ಸೆಪ್ಟೆಂಬರ್​​ 5ಕ್ಕೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಮಂದಿರ ಪ್ರವೇಶಿಸಲಿದೆ. ಬಿಡುಗಡೆಗೆ ಇನ್ನೆರಡು ವಾರಗಳಷ್ಟೇ ಬಾಕಿ.

ಇದನ್ನೂ ಓದಿ: ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾಗೆ ಸ್ಟಾರ್ ಡೈರೆಕ್ಟರ್​​ ಪ್ರಶಾಂತ್​​ ನೀಲ್​ ಸಾಥ್ - Prabhas New Movie

ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿರುವ ಈ ಪ್ರೇಮ್​ಕಹಾನಿಯಲ್ಲಿ ವಿಹಾನ್ ಹಾಗೂ ಅಂಕಿತ ಅಮರ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ನಟಿ ಮಯೂರಿ ನಟರಾಜ್ ಅವರೂ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಿ.ಎಸ್. ಗುಪ್ತ, ರಕ್ಷಿತ್ ಶೆಟ್ಟಿ ಸೇರಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್​ ಅಡಿ ಈ ಚಿತ್ರವನ್ನು ನಿರ್ಮಿಸಿದ್ದು, ಮುಂದಿನ ತಿಂಗಳ 5ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.