ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಲಾಂ' ಇಂದು ಚಿತ್ರಮಂದಿರ ಪ್ರವೇಶಿಸಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಕಥೆ ಕೋಮು ಸೌಹಾರ್ದತೆ ಮತ್ತು ಕ್ರಿಕೆಟ್ ಸುತ್ತ ಸುತ್ತುತ್ತದೆ.
ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದರೆ, ರಜನಿ ಪ್ರಮುಖ ಪಾತ್ರ (ವಿಸ್ತೃತ ಅತಿಥಿ ಪಾತ್ರ) ನಿರ್ವಹಿಸಿದ್ದಾರೆ. ಧನ್ಯಾ ಬಾಲಕೃಷ್ಣನ್, ವಿವೇಕ್ ಪ್ರಸನ್ನ ಮತ್ತು ಕೆ.ಎಸ್.ರವಿ ಕುಮಾರ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ 'ಲಾಲ್ ಸಲಾಂ' 2023ರಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂತಿಮವಾಗಿ ಇದೀಗ ತೆರೆಗಪ್ಪಳಿಸಿದ್ದು, ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಜೈಲರ್ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ್ದ ರಜನಿಕಾಂತ್ ಅವರ 'ಲಾಲ್ ಸಲಾಂ'ನ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿರಲಿದೆ ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ. ಒರ್ಮ್ಯಾಕ್ಸ್ ಮೀಡಿಯಾ ಅಂದಾಜಿನಂತೆ, ತಮಿಳುನಾಡಿನಲ್ಲಿಯೇ ಸರಿಸುಮಾರು 5.1 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಆದ್ರೆ ಸಿನಿ ಇಂಡಸ್ಟ್ರಿಯ ಮತ್ತೊಂದು ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿನ ಪ್ರಕಾರ, 'ಲಾಲ್ ಸಲಾಂ' ಭಾರತದಾದ್ಯಂತ ಸರಿಸುಮಾರು 4 ಕೋಟಿ ರೂ. ಗಳಿಸಲಿದೆಯಂತೆ. ಲಾಲ್ ಸಲಾಮ್ ತನ್ನ ಮೊದಲ ದಿನಕ್ಕೆ ಒಟ್ಟಾರೆ ಶೇ.24.25ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
- " class="align-text-top noRightClick twitterSection" data="">
'ಲಾಲ್ ಸಲಾಂ' ಚಿತ್ರವನ್ನು ಧಾರ್ಮಿಕ ಸಾಮರಸ್ಯವನ್ನು ಪ್ರತಿಪಾದಿಸುವ ಸ್ಪೋರ್ಟ್ ಡ್ರಾಮಾ ಎಂದು ಬಿಂಬಿಸಲಾಗಿದೆ. ವಿಷ್ಣು ರಂಗಸಾಮಿ ಚಿತ್ರಕಥೆ ಬರೆದಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಟ್ರೇಲರ್, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರನ್ನು ವಿವಿಧ ಹಿನ್ನೆಲೆಯುಳ್ಳ ಕ್ರಿಕೆಟ್ ಆಟಗಾರರನ್ನಾಗಿ ಪರಿಚಯಿಸಿದೆ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರ್ಮಿಕ ವೈವಿಧ್ಯತೆ ನಡುವೆ, ಮಾನವೀಯತೆಯ ಪ್ರಾಮುಖ್ಯತೆಯನ್ನು ರಜನಿ ಪಾತ್ರ ಒತ್ತಿಹೇಳುತ್ತದೆ.
ಇದನ್ನೂ ಓದಿ: ಶಾಹಿದ್ -ಕೃತಿ ಅಭಿನಯದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಎಕ್ಸ್ ವಿಮರ್ಶೆ ಇಲ್ಲಿದೆ
ಸಿನಿಮಾ ಬಿಡುಗಡೆಗೆ ಮುನ್ನ, ರಜನಿಕಾಂತ್ ಅವರು ಮಗಳು ಐಶ್ವರ್ಯಾ ಜೊತೆಗಿನ ತಮಾಷೆಯ ಫೋಟೋವೊಂದನ್ನು ಶೇರ್ ಮಾಡಿದ್ದರು. ಈ ಫೋಟೋವನ್ನು, ಚಿತ್ರೀಕರಣದ ಸಮಯದಲ್ಲಿ ಕ್ಲಿಕ್ಕಿಸಲಾಗಿದೆ ಎಂದು ನಂಬಲಾಗಿದೆ. ಫೋಟೋ ಹಂಚಿಕೊಂಡ ಹಿರಿಯ ನಟ, ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು ಜೊತೆಗೆ ಚಿತ್ರಕ್ಕೆ ಶುಭ ಹಾರೈಸಿದ್ದರು. ನಿರ್ದೇಶಕಿ ಐಶ್ವರ್ಯಾ ಅವರ ಮಾಜಿ ಪತಿ, ಸೂಪರ್ ಸ್ಟಾರ್ ಧನುಷ್ ಕೂಡ ಸೋಷಿಯಲ್ ಮೀಡಿಯಾದಲ್ಲಿ "ಇಂದಿನಿಂದ ಲಾಲ್ ಸಲಾಮ್" ಎಂದು ಬರೆದುಕೊಳ್ಳುವ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ತೀರದಾಚೆಗೆ ಹಾರಿ ಹೋಗುವಾಸೆ: ಪ್ರೇಕ್ಷಕರ ಮನಸೆಳೆದ 'ಸಾರಾಂಶ' ಸಾಂಗ್