ETV Bharat / entertainment

'ಆರ್.ಚಂದ್ರು ನನ್ನ ಸ್ನೇಹಿತ, ಸದಾ ಅವರೊಂದಿಗಿರುತ್ತೇನೆ': ಫಾದರ್ ಸಿನಿಮಾಗೆ ಸುದೀಪ್​ ಸಾಥ್, ಕಿಚ್ಚ ಹೇಳಿದ್ದಿಷ್ಟು - KANNADA FATHER MOVIE

ಆರ್.ಸಿ ಸ್ಟುಡಿಯೋಸ್​ನ ಮೊದಲ ಚಿತ್ರ ಫಾದರ್ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕಿಚ್ಚ ಸುದೀಪ್​ ಮೋಷನ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Sudeep with R Chandru
'ಫಾದರ್' ಈವೆಂಟ್​ನಲ್ಲಿ ಕಿಚ್ಚ ಸುದೀಪ್​​ (Photo: ETV Bharat)
author img

By ETV Bharat Entertainment Team

Published : 3 hours ago

ಈ ವರ್ಷಾರಂಭ ಆರ್.ಸಿ ಸ್ಟುಡಿಯೋಸ್ ಎಂಬ ಬೃಹತ್ ಚಲನಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ ನಿರ್ದೇಶಕ ಆರ್ ಚಂದ್ರು, ಮೊದಲ ಪ್ರಯತ್ನದಲ್ಲೇ ಐದು ಸಿನಿಮಾಗಳ ನಿರ್ಮಾಣಕ್ಕೆ ಒಟ್ಟಿಗೆ ಚಾಲನೆ ನೀಡಿದ್ದರು. ಆರ್.ಸಿ ಸ್ಟುಡಿಯೋಸ್​ನ ಮೊದಲ ಚಿತ್ರವಾಗಿ "ಫಾದರ್" ನಿರ್ಮಾಣಗೊಳ್ಳುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ.

ತಂದೆ ಮಗನ ಪಾತ್ರದಲ್ಲಿ ಪ್ರಕಾಶ್ ರೈ, ಡಾರ್ಲಿಂಗ್ ಕೃಷ್ಣ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ "ಫಾದರ್" ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿಮಾದ ಯಶಸ್ಸಿಗೆ ಹಾರೈಸಿದರು. ರಾಜಕೀಯ ಮುಖಂಡರಾದ ಹೆಚ್.ಎಂ ರೇವಣ್ಣ, ನಟ ಅನೂಪ್ ರೇವಣ್ಣ, ಆನಂದ್ ಆಡಿಯೋದ ಶ್ಯಾಮ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಪ್ಪ - ಮಗನ ಕುರಿತಾದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರೈ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ರಾಜ್ ಮೋಹನ್ ಆ್ಯಕ್ಷನ್​​ ಕಟ್​ ಹೇಳಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ ನಂತರ ಸುದೀಪ್ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.

ಕಿಚ್ಚ ಸುದೀಪ್​​ ಹೇಳಿದ್ದಿಷ್ಟು: 'ಫಾದರ್' ಚಿತ್ರದ ಮೋಷನ್ ಪೋಸ್ಟರ್ ಚೆನ್ನಾಗಿದೆ. ಆರ್ ಚಂದ್ರು ಅವರು ನನ್ನ ಸ್ನೇಹಿತ. ಅವರೊಟ್ಟಿಗೆ ಸದಾ ನಾನಿರುತ್ತೇನೆ‌. ಚಿತ್ರದಲ್ಲಿ ನಟಿಸಿರುವ ಕೃಷ್ಣ, ಅಮೃತಾ ಸೇರಿ ಎಲ್ಲ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಒಳ್ಳೆಯದಾಗಲಿ ಎಂದು ಸುದೀಪ್ ಹಾರೈಸಿದರು.

father film event
'ಫಾದರ್' ಮೋಷನ್ ಪೋಸ್ಟರ್ ರಿಲೀಸ್​​ ಈವೆಂಟ್​ (Photo: ETV Bharat)

'100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದಿದ್ದೆ': ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ಅರ್ಪಿಸುತ್ತಾ ಮಾತು ಆರಂಭಿಸಿದ ನಿರ್ಮಾಪಕ ಆರ್ ಚಂದ್ರು, ''22 ವರ್ಷಗಳ ಹಿಂದೆ 100 ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ನಾನು, ಈಗ ಕಬ್ಜದಂತಹ 100 ಕೋಟಿಯ ಸಿನಿಮಾ ಮಾಡಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಆಭಾರಿ. ಈ ಹಿಂದೆ ಸಿದ್ದೇಶ್ವರ ಎಂಟರ್​ಪ್ರೈಸಸ್ ಬ್ಯಾನರ್​ನಲ್ಲಿ 12 ಚಿತ್ರಗಳನ್ನು ನಿರ್ಮಿಸಿದ್ದ ನಾನು, ಈಗ ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದೇನೆ. ಈ ಸಂಸ್ಥೆಯ ಮೊದಲ ಚಿತ್ರ ಫಾದರ್".

Director R Chandru
ನಿರ್ದೇಶಕ ಆರ್ ಚಂದ್ರು (Photo: ETV Bharat)

''ಅಪ್ಪ - ಮಗನ ಬಾಂಧವ್ಯದ ಕುರಿತಾದ ಚಿತ್ರವಿದು. ನಿರ್ದೇಶಕ ರಾಜ್ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಅಪ್ಪನ ಪಾತ್ರದಲ್ಲಿ ಖ್ಯಾತ ನಟ ಪ್ರಕಾಶ್ ರೈ ಹಾಗೂ ಮಗನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮುಗಿದರೆ, ಫಾದರ್​ ಶೂಟಿಂಗ್​ ಮುಕ್ತಾಯವಾಗುತ್ತದೆ. ಕನ್ನಡ ಚಿತ್ರ ವಿಶ್ವಮಟ್ಟದಲ್ಲಿ ವಿಜೃಂಭಿಸಬೇಕೆಂಬ ಆಸೆ ಹೊಂದಿದ್ದೇನೆ. ಹಾಗಾಗಿ, ಆರ್ ಸಿ ಸ್ಟುಡಿಯೋಸ್ ಆರಂಭಿಸಿದ್ದೇನೆ. ನಮ್ಮ ಸಂಸ್ಥೆಯ ಜೊತೆಗೆ ಬೇರೆ-ಬೇರೆ ಭಾಷೆಗಳ ಹೆಸರಾಂತ ಸಂಸ್ಥೆಗಳ ಸಹಯೋಗವಿದೆ. ಎಲ್ಲಾ ಭಾಷೆಗೂ ಸಲ್ಲುವ ಕಥಾಹಂದರ ಹೊಂದಿರುವ ಫಾದರ್ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ'' ಎಂದು ಕೋರಿದರು‌.

Director R Chandru
ನಿರ್ದೇಶಕ ಆರ್ ಚಂದ್ರು (Photo: ETV Bharat)

'ಪತ್ನಿ ಮಿಲನಾಗೆ ಕಥೆ ಬಹಳ ಇಷ್ಟವಾಯಿತು': ನಟ ಡಾರ್ಲಿಂಗ್ ಕೃಷ್ಣ ಮಾತನಾಡಿ, ''ಈ ಕಥೆ ನನಗಿಂತ ಮೊದಲು ಇಷ್ಟವಾಗಿದ್ದು ಮಿಲನಾ (ಪತ್ನಿ) ಅವರಿಗೆ. ಈ ಚಿತ್ರವನ್ನು ನೀವು ಮಾಡಲೇಬೇಕೆಂದು ಅವರು ಹುರಿದುಂಬಿಸಿದರು. ಪ್ರಕಾಶ್ ರೈ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಫಾದರ್ ತುಂಬಾ ದಿನಗಳವರೆಗೆ ಜನರ ಮನಸ್ಸಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ. ಸುದೀಪ್ ಅವರು ಬಂದು ಹಾರೈಸಿರುವ ನನ್ನ ಎಲ್ಲಾ ಸಿನಿಮಾಗಳು ಗೆದ್ದಿವೆ. ಈ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆಯಿದೆ‌. ಸುದೀಪ್ ಅವರಿಗೆ ಧನ್ಯವಾದಗಳು'' ಎಂದರು.

father film event
ಫಾದರ್​​ ಸಿನಿಮಾ ಈವೆಂಟ್​​ (Photo: ETV Bharat)

ಇದನ್ನೂ ಓದಿ: ನಿರ್ದಿಗಂತ ರಂಗ ಭೂಮಿ ಕಾರ್ಯಕ್ರಮದ ಬಗ್ಗೆ ನಟ ಪ್ರಕಾಶ್‌ ರಾಜ್‌ ಹೇಳಿದ್ದೇನು?

'ಅಪ್ಪ-ಮಗನ ಬಾಂಧವ್ಯದ ಚಿತ್ರಗಳು ಸಾಕಷ್ಟು ಬಂದಿವೆಯಾದರೂ, ಇದು ವಿಭಿನ್ನ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ನಿರಾಸೆ ಮಾಡದ ಚಿತ್ರವಿದು' ಎಂದು ನಿರ್ದೇಶಕ ರಾಜ್ ಮೋಹನ್ ತಿಳಿಸಿದರು. 'ಫಾದರ್ ಚಿತ್ರದಲ್ಲಿ ನನ್ನದು ಒಂದೊಳ್ಳೆ ಪಾತ್ರ. ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ' ಅರ್ಪಿಸಿದರು ನಾಯಕಿ ಅಮೃತಾ ಅಯ್ಯಂಗಾರ್. 'ಆರ್ ಚಂದ್ರು ಅವರು ಸಿ‌ನಿಮಾವನ್ನು ಪ್ರೀತಿಸುವ ರೀತಿ ನನಗೆ ಇಷ್ಟ. ಈ ಚಿತ್ರದಲ್ಲಿ ನನ್ನ ಪಾತ್ರವೂ ಚೆನ್ನಾಗಿದೆ' ಎಂದರು ನಟ ನಾಗಭೂಷಣ್.

Sudeep with R Chandru
ಆರ್​ ಚಂದ್ರು ಜೊತೆ ಅಭಿನಯ ಚಕ್ರವರ್ತಿ (Photo: ETV Bharat)

ಇದನ್ನೂ ಓದಿ: Watch- ಜೈಲಿನಲ್ಲಿ ಒಂದು ರಾತ್ರಿ ಕಳೆದ ಅಲ್ಲು ಅರ್ಜುನ್​​​ ವಾಪಸ್​; ಬಿಗಿದಪ್ಪಿದ ಪತ್ನಿ, ಮಕ್ಕಳು: ರಶ್ಮಿಕಾ ಹೇಳಿದ್ದಿಷ್ಟು

ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯ, ಛಾಯಾಗ್ರಾಹಕ ಸುಜ್ಞಾನ್, ಸಾಹಿತಿ ಮಂಜುನಾಥ್ ಮಾಗೋದಿ "ಫಾದರ್" ಚಿತ್ರದ ಕುರಿತು ಮಾತನಾಡಿದರು. ಪ್ರೊಡಕ್ಷನ್ ಹೆಡ್ ಯಮುನಾ ಚಂದ್ರಶೇಖರ್, ಕಾರ್ಯಕಾರಿ ನಿರ್ಮಾಪಕ ಮೌರ್ಯ ಮಂಜು ಸೇರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.