ಹೈದರಾಬಾದ್: ಪುಷ್ಪ 2: ದಿ ರೂಲ್ ಸಿನಿಮಾದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ. ಬಹುನೀರಿಕ್ಷಿತ ಚಿತ್ರ ಬಿಡುಗಡೆಯಾದ ಎರಡೇ ದಿನದಲ್ಲಿ ಎಲ್ಲ ದಾಖಲೆಗಳನ್ನು ಮುರಿದು ಮುನ್ನಗುತ್ತಿದೆ. ಈ ಮೂಲಕ ಪುಷ್ಪಾ 2 ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
ಒಂದೇ ದಿನದಲ್ಲಿ ವಿಶ್ವದಾದ್ಯಂತ 294 ಕೋಟಿ: ಸುಕುಮಾರ್ ನಿರ್ದೇಶನದ ಪುಷ್ಪ-2 ನಿರೀಕ್ಷೆಗೂ ಮೀರಿದ ದಾಖಲೆಯನ್ನು ನಿರ್ಮಿಸಿದೆ. ಮೊದಲ ದಿನ ಸಿನಿಮಾ ವಿಶ್ವದಾದ್ಯಂತ 250-270 ಕೋಟಿ ಸಂಗ್ರಹಿಸಲಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದರು. ಆದರೆ, ಚಿತ್ರ ಈ ಊಹೆ ಮೀರಿ ಬಿಡುಗಡೆ ಕಂಡ ದಿನವೇ 294 ಕೋಟಿ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಜಾಗತಿಕವಾಗಿ 12,500 ಪರದೆಯಲ್ಲಿ ಚಿತ್ರ ಬಿಡುಗಡೆಗೊಂಡಿದ್ದು, ಭಾರತದ ಸಿನಿಮಾ ಇತಿಹಾಸದಲ್ಲೇ ಇದು ದೊಡ್ಡ ಬಿಡುಗಡೆಯಾಗಿದೆ. ಈ ಮೂಲಕ ಜೂ. ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್ಆರ್ಆರ್ ಚಿತ್ರದ ದಾಖಲೆಯನ್ನು ಮುರಿದಿದೆ.
ಎರಡನೇ ದಿನ ಕೂಡ ಮುಂದುವರೆದ ಅಬ್ಬರ: ಬಿಡುಗಡೆಗೊಂಡ ಮೊದಲ ದಿನ ಅಬ್ಬರಿಸಿ ಎರಡನೇ ದಿನ ಕೊಂಚ ಮಂಕಾಗುವುದು ಸಹಜ. ಆದರೆ, ಉದ್ಯಮದ ಟ್ರಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಎರಡನೇ ದಿನ ಕೂಡ ಈ ಚಿತ್ರದ ಆರ್ಭಟ ಮುಂದುವರೆದಿದ್ದು, ಭಾರತದಲ್ಲೇ 90.1 ಕೋಟಿ ಸಂಪಾದಿಸಿದೆ. ಈ ಮೂಲಕ ಮೊದಲೆರಡು ದಿನದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಚಿತ್ರ 265 ಕೋಟಿ ಸಂಪಾದಿಸಿದೆ. ಪ್ರಾದೇಶಿಕವಾಗಿಯೂ ಚಿತ್ರ ಮೆಚ್ಚುಗೆ ಪಡೆದಿದ್ದು, ಹಿಂದಿಯಲ್ಲಿ ಎರಡನೇ ದಿನ 55 ಕೋಟಿ ಸಂಪಾದಿಸುವ ಮೂಲಕ ಅತ್ಯುತ್ತಮ ಗಳಿಕೆ ಕಂಡಿದ್ದರೆ ತೆಲುಗಿನಲ್ಲಿ 27.1 ಕೋಟಿ ಗಳಿಸಿದೆ.
#Pushpa2TheRule is a HISTORIC BLOCKBUSTER in Indian Cinema.
— Mythri Movie Makers (@MythriOfficial) December 6, 2024
The film has tumbled many records across territories to become the HIGHEST GROSSING FILM ON DAY 1 🔥#RecordsRapaRapAA 🔥
RULING IN CINEMAS
Book your tickets now!
🎟️ https://t.co/tHogUVEOs1#Pushpa2 #WildFirePushpa pic.twitter.com/Jc9bKFSMS1
ಹೀಗಿದೆ ಪುಷ್ಪ 2 ಬಾಕ್ಸ್ ಆಫೀಸ್ ದಾಖಲೆ
- ಬುಧವಾರ: 10.65 ಕೋಟಿ
- ಮೊದಲ ದಿನ (ಮೊದಲ ಗುರುವಾರ): 164. 25 ಕೋಟಿ
- ಎರಡನೇ ದಿನ (ಎರಡನೇ ಶುಕ್ರವಾರ): 90.1 ಕೋಟಿ (ಮುಂಗಡ ಅಂದಾಜಿನಂತೆ)
- ಒಟ್ಟು: ಭಾರತದಲ್ಲಿ 265 ಕೋಟಿ (ವರದಿ: ಸ್ಯಾಕ್ನಿಲ್ಕ್)
ಒಂದರ ಮೇಲೆ ಒಂದು ದಾಖಲೆ:
- ಪುಷ್ಪ 2 ಕೇವಲ ಬಾಕ್ಸ್ ಆಫೀಸ್ ಹಿಟ್ ಕಂಡಿಲ್ಲ. ಇದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಅನೇಕ ದಾಖಲೆಗಳನ್ನು ಪುಡಿ ಮಾಡಿದೆ.
- ಭಾರತದ ಸಿನಿಮಾದಲ್ಲೇ ವಿಶ್ವದೆಲ್ಲೆಡೆ ದೊಡ್ಡ ಓಪನಿಂಗ್ ಕಂಡ ಚಿತ್ರ: ಆರ್ಆರ್ಆರ್ 223 ಕೋಟಿ ಗಳಿಕೆ ದಾಖಲೆಯನ್ನು ಮೀರಿ ಪುಷ್ಪಾ 294 ಕೋಟಿ ಗಳಿಕೆ
- ಮೊದಲ ದಿನವೇ ಭಾರತದಲ್ಲಿ ಹೆಚ್ಚಿನ ಕಲೆಕ್ಷನ್: ಆರ್ಆರ್ಆರ್ 156 ಕೋಟಿ ಗಳಿಸಿದರೆ, ಪುಷ್ಪಾ 294 ಕೋಟಿ ಗಳಿಸಿದೆ.
- ಬಿಡುಗಡೆ ದಿನವೇ 200 ಕೋಟಿ ಸಂಪಾದಿಸಿದ ಮೊದಲ ಸಿನಿಮಾ ಎಂಬ ದಾಖಲೆ (ಪ್ರೀಮಿಯರ್ ಸೇರಿದಂತೆ)
- ದಕ್ಷಿಣ ಭಾರತದ ಚಿತ್ರವೊಂದು ಹಿಂದಿಯಲ್ಲಿ ಅತ್ಯಂತ ದೊಡ್ಡ ಓಪನಿಂಗ್: 70 ಕೋಟಿ
- 2024ರಲ್ಲಿ ಸಾಗರೋತ್ತರ ದೇಶದಲ್ಲಿ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ; 66 ಕೋಟಿ
- ಅಲ್ಲು ಅರ್ಜುನ್, ಸುಕುಮಾರ್, ರಶ್ಮಿಕಾ ಮಂದಣ್ಣ ಮತ್ತು ಮೈತ್ರಿ ಮೂವಿ ಮೇಕರ್ನಿಂದ ಹೆಚ್ಚು ಗಳಿಕೆ ಚಿತ್ರ
- ದಾಖಲೆಯ ಟಿಕೆಟ್ ಮಾರಾಟ: ಭಾರತದಲ್ಲಿ 79 ಲಕ್ಷ ಜನ ಸಿನಿಮಾ ವೀಕ್ಷಣೆ, ಅತಿ ಹೆಚ್ಚು ಜನ ವೀಕ್ಷಿಸಿದ ಎರಡನೇ ಚಿತ್ರ
ಪುಷ್ಪ 1 ಹಿಂದಿ ಅವತರಣಿಕೆಯನ್ನು ಹತ್ತಿಕ್ಕಿದ ಪುಷ್ಪಾ 2 ಕಲೆಕ್ಷನ್:
ಸ್ಯಾಕ್ನಿಲ್ಕ್ ಪ್ರಕಾರ, ಪುಷ್ಪ 2 ಕೇವಲ ಎರಡು ದಿನದಲ್ಲಿ ಬಾಕ್ಸ್ ಆಫೀಸ್ನಲ್ಲಿ ಜೀವನಮಾನದ ಗಳಿಕೆ ಕಂಡಿದೆ. ಜಬರ್ದಸ್ತ್ ಸಾಹಸ ನಿರ್ಮಿತ ಸಿನಿಮಾವೂ ಹಿಂದಿ ಭಾಷೆಯಲ್ಲಿ 120 ಕೋಟಿ ಗಳಿಸುವ ಮೂಲಕ ಪುಷ್ಪಾ 1ರ 106+ ಕೋಟಿ ಸಂಪಾದನೆ ದಾಟಿದೆ. ಇದು ಅಲ್ಲು ಅರ್ಜುನ್ ದೊಡ್ಡ ಅತ್ಯಂತ ದೊಡ್ಡ ಹಿಟ್ ಆಗಿದೆ. ಇದು ದಕ್ಷಿಣ ಭಾರತದ 11ನೇ ಅತ್ಯಂತ ದೊಡ್ಡ ಹಿಟ್ ಹಿಂದಿ ಸಿನಿಮಾಗಿದ್ದು, 100 ಕೋಟಿ ದಾಟಿದ ಎರಡನೇ ಸಿನಿಮಾವಾಗಿದೆ.
ವರ್ಲ್ಡ್ ವೈಡ್ 400 ಕೋಟಿ
ಪುಷ್ಪಾ 2 ಹಿಂದಿ ಮಾತ್ರವಲ್ಲದೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆದಿದೆ. ಹಿಂದಿಯಲ್ಲಿ ಭಾರೀ ಪ್ರದರ್ಶನವಾಗುತ್ತಿದೆ. ಎರಡು ದಿನದಲ್ಲಿ 400 ಕೋಟಿ ಸಂಗ್ರಹಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡಿದೆ.
ಪುಷ್ಪ 2: ಮುಂದಿನ ಅಧ್ಯಯ:
ಪುಷ್ಪ 2 ಯಶಸ್ವಿಯಾಗಿ ಮುನ್ನಗ್ಗುತ್ತಿದೆ. ಈ ಮಧ್ಯೆ ಪುಷ್ಪಾ 3 ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಡಿಸೆಂಬರ್ 3ರಂದು ಪುಪ್ಪಾ3: ರ್ಯಾಂಪೇಜ್ ಎಂದು ಮಾಡಿರುವ ಪೋಸ್ಟ್ ಕುತೂಹಲ ಮೂಡಿಸಿದೆ.
ಪುಷ್ಪ 2ರಲ್ಲಿ ಕುತೂಹಲ ವಿಷಯಗಳನ್ನು ನಿರ್ದೇಶಕರು ಕಾಪಾಡಿಕೊಂಡಿದ್ದರಿಂದ ಪುಷ್ಪಾ 3 ಬರಲಿದೆ ಎನ್ನಲಾಗುತ್ತಿದೆ. ಅಭಿಮಾನಿಗಳು ಕೂಡ ಈ ಬಗ್ಗೆ ಉತ್ಸಹ ತೋರುತ್ತಿದ್ದಾರೆ. ನಿರ್ದೇಶ ಸುಕುಮಾರ್ ಕೂಡ ಸರಣಿಯ ಕಥೆ ಕುರಿತು ಸಸ್ಪೆನ್ಸ್ ಅನ್ನು ಕಾಯ್ದುಕೊಂಡಿದ್ದಾರೆ.
ಪುಷ್ಪ 2 ವಾರಾಂತ್ಯದ ಗಳಿಕೆ: ಚಿತ್ರವೂ ಮೊದಲೆರಡು ದಿನದಲ್ಲೇ ಅತ್ಯುತ್ತಮ ಗಳಿಕೆ ಕಂಡಿದ್ದು, ಇದು ವಾರಾಂತ್ಯದಲ್ಲಿ ಮತ್ತಷ್ಟು ಹೆಚ್ಚಿನ ಲಾಭ ಮಾಡಲಿದ್ದು, 700 ಕೋಟಿ ಗಳಿಸುವ ನಿರೀಕ್ಷೆ ಇದೆ.
ಪ್ರಿ ರಿಲೀಸ್ ಉದ್ಯಮ: 1000 ಕೋಟಿ
ಬಿಡುಗಡೆಗೆ ಮುನ್ನ ಚಿತ್ರವೂ 1000 ಕೋಟಿ ಗಳಿಗೆ ಮಾಡಲಿದೆ ಎಂಬ ಅಂದಾಜು ಮಾಡಲಾಗಿತ್ತು. ಹೈದರಾಬಾದ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ, ನಿರ್ಮಾಪಕ ನವೀನ್ ಯೆರ್ನೆನಿ ಮತ್ತು ರವಿ ಅಂದಾಜು ಲೆಕ್ಕ ಹಾಕಿದರು. ಅವರ ಪ್ರಕಾರ ಚಿತ್ರ ಈಗಾಗಲೇ ಥಿಯೇಟರ್ ಹೊರತಾದ ಉದ್ಯಮದಲ್ಲಿ 425 ಕೋಟಿ ಸಂಪಾದಿಸಿತ್ತು. ಪ್ರಿ ರಿಲೀಸ್ ಉದ್ಯಮವ ಅಂದಾಜನ್ನು ಮೀರಿ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ; ಬಾಲಕನ ಚಿಕಿತ್ಸೆ ವೆಚ್ಚ ಭರಿಸೋದಾಗಿ ಪುಷ್ಪಾ ಅಭಯ