ETV Bharat / entertainment

ಜಿಮ್ ಟ್ರೇನರ್​ಗೆ ಅಮೆರಿಕದಿಂದ ಪುನೀತ್​​ ತರಿಸಿದ್ದರು ಈ ಸ್ಪೆಷಲ್​ ಗಿಫ್ಟ್​​: ಇಲ್ಲಿದೆ ಎಕ್ಸ್​​ಕ್ಲ್ಯೂಸಿವ್ ಸಂದರ್ಶನ - PUNEETH RAJKUMAR GYM TRAINERS

ಚಂದನವನದ ಫಿಟ್ನೆಸ್​ ಐಕಾನ್​ ಆಗಿದ್ದ ಪುನೀತ್ ರಾಜ್​​ಕುಮಾರ್​ ಅವರ ಜಿಮ್​ ಟ್ರೇನರ್​​ಗಳಾದ ಶುಭಕರ್ ಶೆಟ್ಟಿ ಮತ್ತು ಶೇಷಪ್ಪ ಅವರೊಂದಿಗೆ ಈಟಿವಿ ಭಾರತದ ಸಿನಿಮಾ ಪ್ರತಿನಿಧಿ ಎಂ.ಕೆ ರವಿಕುಮಾರ್​​ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

Raj family gym trainer
ಜಿಮ್ ಟ್ರೇನರ್​ಗೆ ಅಮೆರಿಕದಿಂದ ಪುನೀತ್​​ ತರಿಸಿದ್ದರು ಈ ಸ್ಪೆಷಲ್​ ಗಿಫ್ಟ್​​ (ETV Bharat)
author img

By ETV Bharat Entertainment Team

Published : Oct 28, 2024, 4:40 PM IST

ಚಂದನವನದ ಅರಸು, ಅಭಿಮಾನಿಗಳ ಕರ್ನಾಟಕ ರತ್ನ ಡಾ. ಪುನೀತ್ ರಾಜ್​​ಕುಮಾರ್ ಅವರಂದ್ರೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರಿಗೂ ಅತ್ಯಂತ ಅಚ್ಚುಮೆಚ್ಚು. ಈ ಬೆಟ್ಟದ ಹೂವು ನಮ್ಮನೆಲ್ಲ ಅಗಲಿ ಅಕ್ಟೋಬರ್​​​ಗೆ 29ಕ್ಕೆ 3 ವರ್ಷಗಳು. ನಟನೆ, ನಿರ್ಮಾಣ, ಗಾಯನ, ಸಮಾಜ ಸೇವೆ ಅಭಿಮಾನಿಗಳೆದೆಯಲ್ಲಿ ಅಚ್ಚಳಿಯದೇ ಉಳಿದಿದ್ದು, ಇಂದಿಗೂ ಅವರನ್ನು ನೆನೆದರೆ ಕಣ್ಣುಗಳು ಒದ್ದೆಯಾಗುತ್ತವೆ.

ಕೋವಿಡ್​ ಸಂದರ್ಭ ಸಿನಿಮಾ ಕಟೌಟ್ ತಯಾಕರು, ಪ್ರೊಡಕ್ಷನ್ ಮ್ಯಾನೇಜರ್ ಸೇರಿದಂತೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿ ಅವರ ದೃಷ್ಟಿಯಲ್ಲಿ ದೇವರಾಗಿದ್ದಾರೆ. ಮತ್ತೊಂದೆಡೆ, ಫಿಟ್ನೆಸ್​ಗೆ ಆದ್ಯತೆ ಕೊಡುತ್ತಿದ್ದ ಕಾರಣ ಪುನೀತ್ ರಾಜ್​​ಕುಮಾರ್ ಇಬ್ಬರು ಜಿಮ್ ಟ್ರೇನರ್​ಗಳನ್ನು ಹೊಂದಿದ್ದರು. ಪರ್ಸನಲ್ ಜಿಮ್ ಟ್ರೇನರ್ ಶುಭಕರ್ ಶೆಟ್ಟಿ ಮತ್ತು ಟ್ರೇನರ್​​ ಶೇಷಪ್ಪ. ಶುಭಕರ್ ಶೆಟ್ಟಿ ರಜೆಯಲ್ಲಿದ್ದಾಗ ಶೇಷಪ್ಪ ಅವರು ಪುನೀತ್ ಮನೆಗೆ ಬಂದು ವರ್ಕೌಟ್​ ಬಗ್ಗೆ ಟ್ರೇನಿಂಗ್​​ ಕೊಡುತ್ತಿದ್ದರು. ಹಾಗಾಗಿ ಪವರ್ ಸ್ಟಾರ್ ಶೇಷಪ್ಪ ಅವರಿಗೆ ಲಕ್ಷ ರೂಪಾಯಿ ಬೆಲೆಬಾಳುವ ಉಡುಗೊರೆಯನ್ನು ಕೊಟ್ಟಿದ್ದರು. ಈ ಬಗ್ಗೆ ಈಟಿವಿ ಭಾರತದ ಸಿನಿಮಾ ಪ್ರತಿನಿಧಿ ಎಂ.ಕೆ ರವಿಕುಮಾರ್​​ ವಿಶೇಷ ಸಂದರ್ಶನ ಮಾಡಿದ್ದಾರೆ.

ಜಿಮ್ ಟ್ರೇನರ್ ಶೇಷಪ್ಪ ಅವರ ವಿಶೇಷ ಸಂದರ್ಶನ (ETV Bharat)

ಆ ಉಡುಗೊರೆಯೀಗ ಜಿಮ್ ಟ್ರೇನರ್​ ಶೇಷಪ್ಪ ಅವರ ಜಿಮ್​​ನಲ್ಲಿ ಕೇಂದ್ರ ಬಿಂದುವಾಗಿದೆ. ಯಾರಿಗೂ ಗೊತ್ತಿಲ್ಲದ ಆ ಸ್ಪೆಷಲ್ ಗಿಫ್ಟ್​​ ಬಗ್ಗೆ ಶೇಷಪ್ಪ ಅವರು ಈಟಿವಿ ಭಾರತದೊಂದಿಗೆ ಎಕ್ಸ್​​ಕ್ಲ್ಯೂಸಿವ್​​​ ಆಗಿ ಮಾಹಿತಿ ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್ ಕೊಟ್ಟ ದುಬಾರಿ ಉಡುಗೊರೆಯನ್ನು ಈಟಿವಿ ಭಾರತದ ಕ್ಯಾಮರಾಗೆ ಪ್ರದರ್ಶಿಸಿದ್ದಾರೆ.

ಅಷ್ಟಕ್ಕೂ ಇದೇನು ಪ್ರತಿಮೆಯಂತೆ ಇದೆಯಲ್ಲ ಎಂದು ನಿಮಗನಿಸೋದು ಸಹಜ. ಇದು ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚು. ಇದು ವರ್ಕೌಟ್ ಜೊತೆಗೆ ಕಿಕ್ ಬಾಕ್ಸಿಂಗ್ ಕಲಿಯಲು ಪೂರಕ. ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚು ಈಗ ಶಿವರಾಜ್​​ಕುಮಾರ್ ಅವರಿಗೆ ಪರ್ಸನಲ್​ ಟ್ರೇನರ್​​ ಆಗಿರುವ ಶೇಷಪ್ಪ ಅವರ ಹೆಬ್ಬಾಳದಲ್ಲಿರುವ ಜಿಮ್​​​ನಲ್ಲಿದೆ.

Raj family gym trainer
ಜಿಮ್​ ಟ್ರೇನರ್​​ ಜೊತೆ ಪುನೀತ್ ರಾಜ್​​ಕುಮಾರ್​ (ETV Bharat)

50ನೇ ಹರೆಯದಲ್ಲಿ ಹ್ಯಾಟ್ರಿಕ್​ ಹೀರೋ 'ಭಜರಂಗಿ' ಸಿನಿಮಾಗಾಗಿ ಬಾಡಿ ಬಿಲ್ಡ್ ಮಾಡಿ ಸಖತ್ ಸುದ್ದಿಯಾಗಿದ್ರು. ಅವರನ್ನು ಟ್ರೇನ್​ ಮಾಡಿದ್ದು ಇದೇ ಶೇಷಪ್ಪ. ಪುನೀತ್ ಅವರ ಪರಿಚಯದ ಬಗ್ಗೆ ಸ್ವತಃ ಶೇಷಪ್ಪ ಹೇಳಿದಹಾಗೆ, ''ನಾನು ಭಜರಂಗಿ ಸಿನಿಮಾ ಸಮಯದಲ್ಲಿ ಶಿವಣ್ಣನಿಗೆ ಪರ್ಸನಲ್ ಟ್ರೇನಿಂಗ್​ ಕೊಡುತ್ತಿದ್ದೆ. ಆಗ ಶುಭಕರ್ ಶೆಟ್ಟಿ, ಅಪ್ಪು ಸರ್ ಪರಿಚಯವಾಯಿತು. ಅಲ್ಲಿಂದ ಅಪ್ಪು ಸರ್ ಜೊತೆಗಿನ ಸ್ನೇಹ ಶುರುವಾಯಿತು. ನಾನು ಆಗಾಗ್ಗೆ ಸದಾಶಿವನಗರದಲ್ಲಿರುವ ಪುನೀತ್​ ಸರ್ ನಿವಾಸಕ್ಕೆ ಹೋಗಿ ಕೆಲ ವರ್ಕೌಟ್​​ಗಳನ್ನು ಹೇಳಿಕೊಡುತ್ತಿದ್ದೆ. ಆ ಪ್ರೀತಿಗೆ ಅಪ್ಪು ಸರ್ ಬಹಳ ಇಷ್ಟು ಬೆಲೆಬಾಳುವ ಸ್ಟ್ಯಾಚುವನ್ನು ನನಗೆ ಉಡುಗೊರೆಯಾಗಿ ತಂದುಕೊಟ್ಟರು. ಅಮೆರಿಕನ್ ಡಾಲರ್ ಬೆಲೆ ಜೊತೆಗೆ ಇಂಡಿಯಾಗೆ ಇಂಪೋರ್ಟ್ ಆಗಲು 3 ರಿಂದ 4 ಲಕ್ಷದವರಗೆ ಖರ್ಚಾಗಿದೆ. ಇಷ್ಟು ದುಬಾರಿ ಉಡುಗೊರೆಯನ್ನು ಓರ್ವ ಸೂಪರ್​ ಸ್ಟಾರ್​ ಕೊಟ್ಟಿದ್ದಾರೆಂದ್ರೆ ಅವರು ಗೆಳೆತನಕ್ಕೆ ಎಷ್ಟು ಗೌರವ ಕೊಡುತ್ತಿದ್ದರು ಎಂಬುದನ್ನು ನೀವೇ ಊಹಿಸಿ'' ಎಂದರು.

ನಾನು ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚುವನ್ನು ನನ್ನ ಜಿಮ್​ನಲ್ಲಿ ಕಳೆದ 11 ವರ್ಷಗಳಿಂದ ಇಟ್ಟುಕೊಂಡಿದ್ದೇನೆ. ಪ್ರತಿದಿನ ನಾನು ಈ ಉಡುಗೊರೆಯನ್ನು ಸ್ವಚ್ಛಗೊಳಿಸಿ ನನ್ನ ಜಿಮ್ ಕೆಲಸಗಳನ್ನು ಶುರು ಮಾಡುತ್ತೇನೆ. ಈ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚುವನ್ನು ಪುನೀತ್ ಕೊಟ್ಟಿದ್ದಾರೆಂಬುದನ್ನು ತಿಳಿದು ಜಿಮ್​ಗೆ ಬರುವವರು ಕಿಕ್ ಬಾಕ್ಸಿಂಗ್ ಮಾಡದೇ ಮನೆಗೆ ಹೋಗಲ್ಲ ಎಂದು ತಿಳಿಸಿದರು.

ವರ್ಕೌಟ್ ವಿಚಾರಕ್ಕೆ ಬಂದ್ರೆ ಅಪ್ಪು ಸರ್​​ಗೆ ರನ್ನಿಂಗ್, ಸೈಕ್ಲಿಂಗ್ ಬಹಳ ಇಷ್ಟ. ಸ್ನೇಹಿತರನ್ನು ಅಪ್ಪು ಸರ್ ಬಹಳ ಗೌರವಿಸುತ್ತಾರೆ. ಮೈಸೂರಿನಲ್ಲಿ ರಾಜಕುಮಾರ ಸಿನಿಮಾ ಶೂಟಿಂಗ್​ ನಡೆಯುತ್ತಿದ್ದ ವೇಳೆ ಒಬ್ಬ ಸ್ಟಾರ್ ನಟ ನಮಗೆ ಅಲ್ಲಿನ ಫೇವರೆಟ್ ಬಿರಿಯಾನಿ ಊಟ ತರಿಸಿಕೊಡ್ತಾರೆ. ಅದು ಸದಾ ನೆನಪಿನಲ್ಲಿರುವ ವಿಷಯ ಅಂತಾರೆ ಶೇಷಪ್ಪ.

Raj family gym trainer
ಜಿಮ್​ ಟ್ರೇನರ್​​ ಜೊತೆ ರಾಘವೇಂದ್ರ ರಾಜ್​​ಕುಮಾರ್​ (ETV Bharat)

ಇದನ್ನೂ ಓದಿ: ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೊತೆ ಕೆಲಸ ಮಾಡುವ ಕನಸು ಕಂಡಿದ್ದ ಪುನೀತ್​ ರಾಜ್​​ಕುಮಾರ್​: 'ಮಾಯಾ ಬಜಾರ್‌'ನಲ್ಲಿ ನನಸು - Puneeth Rajkumar

ಅಪ್ಪು ಸರ್ ನಮ್ಮಿಂದ ದೂರ ಆಗಿದ್ದಾರೆಂಬುನ್ನು ಈಗಲೂ ನಂಬಲಾಗಲ್ಲ. ಈ ಪುತ್ಥಳಿಯನ್ನು ನೋಡುತ್ತಿದ್ರೆ ಅವರು ನಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಅನುಭವ ಆಗುತ್ತದೆ. ಅವರ ಬಗ್ಗೆ ಮಾತನಾಡಲು ಪದಗಳೇ ಇಲ್ಲ. ಅವರು ಕೊಟ್ಟಿರುವ ಈ ಉಡುಗೊರೆ ಲೈಫ್ ಟೈಮ್ ಮೆಮೋರಿ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದರ ಜೊತೆಗೆ ಅಪ್ಪು ಸರ್ ಗೆಳೆಯ ಹಾಗೂ ಪರ್ಸನಲ್​ ಟ್ರೇನರ್ ಆಗಿ 5 ವರ್ಷಕ್ಕೂ ಹೆಚ್ಚು ಕಾಲದಿಂದ ಜೊತೆಯಲ್ಲಿದ್ದ ಜಿಮ್ ಟ್ರೇನರ್ ಶುಭಕರ್ ಶೆಟ್ಟಿ ಕೂಡಾ ಇದೇ ಮೊದಲ ಬಾರಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಕ್ಯಾಮರಾ ಎದುರು ಮಾತನಾಡಿದ್ದಾರೆ. ಆ ಸ್ಟ್ಯಾಂಡಿಂಗ್ ಕಿಕ್ ಬಾಕ್ಸಿಂಗ್ ಸ್ಟ್ಯಾಚುವನ್ನು 'ನಿನ್ನಿಂದಲೇ' ಸಿನಿಮಾ ಶೂಟಿಂಗ್ ಸಲುವಾಗಿ ಅಮೆರಿಕಕ್ಕೆ ಹೋದ ಸಂದರ್ಭ ಅಪ್ಪು ಸರ್ ಬಹಳ ಇಷ್ಟಪಟ್ಟು ತಂದಿದ್ದರು. ನಂತರ ಇಷ್ಟಪಟ್ಟು ಶೇಷಪ್ಪ ಅವರಿಗೆ ಉಡುಗೊರೆಯಾಗಿ ನೀಡಿದರು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪುನೀತ್​ 'ಗಂಧದಗುಡಿ'ಗೆ 2 ವರ್ಷ: 'ಅಭಿಮಾನಿಗಳ ಪ್ರೀತಿ ವರ್ಣನಾತೀತ' ಎಂದ ಅಪ್ಪು ಸ್ಪೆಷಲ್​ ವಿಡಿಯೋ ರಿಲೀಸ್​​

ಈ ಸ್ಟ್ಯಾಚು ಸಹಾಯದಿಂದ ಅಣ್ಣಾಬಾಂಡ್ ಹಾಗೂ ರಣವಿಕ್ರಮ ಸಿನಿಮಾಗಳಿಗೆ ಬಾಕ್ಸಿಂಗ್ ಜೊತೆ ಕಿಕ್ ಬಾಕ್ಸಿಂಗ್ ಪ್ರ್ಯಾಕ್ಟೀಸ್ ಅನ್ನು ಪುನೀತ್​ ಅವರ ಮನೆಯಲ್ಲಿ ಮಾಡಿದ್ದರು. ಫಿಟ್ನೆಸ್​ಗೆ ಪವರ್ ಸ್ಟಾರ್ ಒಂದು ಬ್ರ್ಯಾಂಡ್​​ ಅಂಬಾಸಿಡರ್ ಆಗಿದ್ರು ಅಂತಾರೆ.

Raj family gym trainer
ಜಿಮ್​ ಟ್ರೇನರ್​​ ಜೊತೆ ಶಿವರಾಜ್​​ಕುಮಾರ್​ (ETV Bharat)

ಯಾವಾಗಲೂ ನಾನು ಅವರ ಜೊತೆಯಲ್ಲಿಯೇ ಇರುತ್ತಿದ್ದೆ. ಒಂದು ದಿನವೂ ನಾನು ಜಿಮ್ ಟ್ರೇನರ್​ ಅಂತಾ ಟ್ರೀಟ್ ಮಾಡಲಿಲ್ಲ. ಅವರು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರತನಕ ಕೊಡುತ್ತಿದ್ದ ಗೌರವದಿಂದ ಅವರನ್ನು ಅಭಿಮಾನಿಗಳೇ ದೇವರು ಅಂತಾ ಕರೆದಿದ್ದಾರೆ. ಅವರಿಂದು ನಮ್ಮ ಜೊತೆ ಇಲ್ಲವೆಂದು ಅಂದುಕೊಳ್ಳುವುದಕ್ಕಿಂತ ನಮ್ಮ ಜೊತೆ ಇದ್ದಾರೆ ಅಂತಾ ನಾನು ಸಾಯೋವರೆಗೂ ಅಂದುಕೊಳ್ಳುತ್ತೇವೆಂದು ಶುಭಕರ್ ಶೆಟ್ಟಿ ಭಾವುಕರಾದರು.

ಜಿಮ್ ಟ್ರೇನರ್ ಶುಭಕರ್ ಶೆಟ್ಟಿ ಅವರ ವಿಶೇಷ ಸಂದರ್ಶನ (ETV Bharat)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.