ETV Bharat / entertainment

ಹೊಸಪೇಟೆಯಲ್ಲಿ ಅದ್ಧೂರಿ 'ಯುವ' ಪ್ರೀ ರಿಲೀಸ್ ಕಾರ್ಯಕ್ರಮ, ದೊಡ್ಮನೆ ಕುಟುಂಬ ಭಾಗಿ - Yuva Pre Release Event

author img

By ETV Bharat Karnataka Team

Published : Mar 25, 2024, 1:14 PM IST

ಯುವ ರಾಜ್‌ಕುಮಾರ್​​ ಅಭಿನಯದ 'ಯುವ' ಸಿನಿಮಾ ಪ್ರೀ ರಿಲೀಸ್​ ಕಾರ್ಯಕ್ರಮ ಇತ್ತೀಚಿಗೆ ಹೊಸಪೇಟೆಯಲ್ಲಿ ನಡೆಯಿತು.

ಯುವ ಸಿನಿಮಾ ಟೀಂ
ಯುವ ಸಿನಿಮಾ ಟೀಂ

ಡಾ.ರಾಜ್​ಕುಮಾರ್​​ ಮೊಮ್ಮಗ ಯುವ ರಾಜ್​ಕುಮಾರ್​ ಅಭಿನಯದ 'ಯುವ' ಚಿತ್ರದ ಪ್ರೀ ರಿಲೀಸ್​ ಕಾರ್ಯಕ್ರಮ ಮಾರ್ಚ್ ​23ರಂದು ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಮಂಗಳ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದರಾಮ್, ಚಿತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ಭಾಗವಹಿಸಿದ್ದರು. ಅನೇಕ ತಂತ್ರಜ್ಞರೂ ಉಪಸ್ಥಿತರಿದ್ದರು.

ಯುವ ರಾಜ್​ ಕುಮಾರ್​​
ಯುವ ರಾಜ್​ ಕುಮಾರ್​​

ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ಮಾತನಾಡಿ, "ಯುವ ನಿರ್ಮಾಣವಾಗಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರಣ.‌ ವಿಜಯ್ ಕಿರಗಂದೂರ್ ಅವರಿಗೆ ಅಶ್ವಿನಿ ಅವರು ಫೋನ್ ಮಾಡಿ ಯುವ ರಾಜ್‌ಕುಮಾರ್ ಅವರನ್ನು ನಿಮ್ಮ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿ ಎಂದಿದ್ದರು. ವಿಜಯ್ ಕಿರಗಂದೂರ್ ಇದಕ್ಕೆ ಒಪ್ಪಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಯುವ ರಾಜ್‌ಕುಮಾರ್ ಕೂಡ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಯುವ ಓಡುವ ಸಂದರ್ಭವನ್ನು ಚಿತ್ರದ ಮೊದಲ ಸನ್ನಿವೇಶವಾಗಿ ಚಿತ್ರಿಸಿಕೊಳ್ಳಲಾಗಿದೆ. ಚಿತ್ರರಂಗದಲ್ಲಿ ಯುವ ಯಾವಾಗಲೂ ಓಡುವ ಕುದುರೆಯಾಗಿರಲಿ ಎಂಬುದು ಇದರ ಉದ್ದೇಶ" ಎಂದರು.

ಇದೇ ವೇಳೆ, "ಮಾರ್ಚ್ 29ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ" ಎಂದು ಮನವಿ ಮಾಡಿದರು.

ರರಾಜ್​ ಕುಟುಂಬ
ಅಶ್ವನಿ ಪುನೀತ್​ ರಾಜ್​​ಕುಮಾರ್ ಜೊತೆ ಮಂಗಲ ರಾಘವೇಂದ್ರ ರಾಜ್​ಕುಮಾರ್​

ಬಳಿಕ ನಾಯಕ ನಟ ಯುವ ರಾಜ್‌ಕುಮಾರ್‌ ಮಾತನಾಡಿ, "ನಾನು ಮೊದಲು ನನ್ನ ಚಿಕ್ಕಪ್ಪ ಪುನೀತ್​ ರಾಜ್‌ಕುಮಾರ್ ಹಾಗೂ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನಾಯಕನನ್ನಾಗಿ ಮಾಡಿ ಎಂದು ಅವರಿಬ್ಬರು ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್​ ಸರ್​ಗೆ ಹೇಳಿದ್ದಾರೆ. ಅವರಿಂದಲೇ ನಾನು ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ನಾನು ಚಿರಋಣಿ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹಿರಿಯ ನಟರಾದ ಅಚ್ಯುತಕುಮಾರ್, ಸುಧಾರಾಣಿ ಮುಂತಾದವರಿಂದ ಸಾಕಷ್ಟು ಕಲಿತಿದ್ದೇನೆ‌. ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ" ಎಂದು ಹೇಳಿದರು.

ಇದನ್ನೂ ಓದಿ: 'ಯುವ' ಟ್ರೇಲರ್​ ರಿಲೀಸ್​: ಮೊದಲ ಚಿತ್ರವೇ ಪವರ್​ಫುಲ್​ ಅಂತಿದ್ದಾರೆ ಫ್ಯಾನ್ಸ್ - Yuva Trailer

ETV Bharat Logo

Copyright © 2024 Ushodaya Enterprises Pvt. Ltd., All Rights Reserved.